JANANUDI.COM NETWORK
ಕೇರಳದ ಆಲಪ್ಪುಳದಲ್ಲಿ ಮತ್ತೆ ಹಕ್ಕಿ ಜ್ವರ ಪತ್ತೆಯಾದ ಪರಿಣಾಮ ಕೋಳಿ ಹಾಗೂ ಬಾತುಕೋಳಿಗಳನ್ನು ನಾಶಪಡಿಸಲು ತಂಡ ರಚಿಸಲಾಗಿದೆ. ರೈತರೊಬ್ಬರು ಸಾಕಿದ ಸಾವಿರಾರು ಬಾತುಕೋಳಿಗಳು ಸಾವನ್ನಪ್ಪಿದ ಬಳಿಕ ಹಕ್ಕಿ ಜ್ವರ ಪ್ರಕರಣ ಬೆಳಕಿಗೆ ಬಂದಿದೆ.
ಬಾತುಕೋಳಿಗಳು ಸಾವಿರಾರು ಸಂಖ್ಯೆಯಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಭೂಪಾಲ್ ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ ಗೆ ಮಾದರಿಗಳನ್ನು ಕಳುಹಿಸಿದಾಗ ಬಾತುಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳ ಪಶುಸಂಗೋಪನೆ ಇಲಾಖೆ ತಕ್ಷಣವೇ ಈ ಕ್ರಮಕೈಗೊಂಡಿದ್ದು, ಬಾತುಕೋಳಿ, ಕೋಳಿ ಹಾಗೂ ಮೊಟ್ಟೆಗಳನ್ನು ನಾಶಪಡಿಸಲು ಆದೇಶ ನೀಡಿದೆ.