ಪೊಲೀಸರನ್ನು ನಾಯಿಗಳಿಗೆ ಹೊಲಿಕೆ ಮಾಡಿರುವ ಗೃಹ ಮಂತ್ರಿ ಅರಗ ಜ್ಞಾನೇಂದ್ರ ರವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ : ರೈತ ಸಂಘ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ,ನ-05, ಪೊಲೀಸರನ್ನು ನಾಯಿಗಳಿಗೆ ಹೊಲಿಕೆ ಮಾಡಿರುವ ಗೃಹ ಮಂತ್ರಿ ಅರಗ ಜ್ಞಾನೇಂದ್ರ ರವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ರೈತ ಸಂಘ ದಿಂದ ಗಾಂಧಿ ಪ್ರತಿಮೆ ಮುಂದೆ ಸಚಿವರ ಭೂತದಹನ ಮಾಡುವ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೊಸ್ಕರ ಕೆಲಸ ಮಾಡಬೇಕಾದ ಜನ ಪ್ರತಿನಿಧಿಗಳು ಅಧಿಕಾರಿಗಳನ್ನು ಸಾರ್ವಜನಿಕವಾಗಿ ಮಾನ ಮರ್ಯಾದೆ ಕಳಿಯುವ ಮುಖಾಂತರ ಪ್ರಜಾ ಪ್ರಭುತ್ವದ ಕಗ್ಗೋಲೆ ಮಾಡುತ್ತಿದ್ದಾರೆ. ರಾಜ್ಯದ ಜವಾಬ್ದಾರಿ ಸ್ಥಾನದಲ್ಲಿರುವ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಮಂತ್ರಿ ಅರಗ ಜ್ಞಾನೇಂದ್ರ ರವರು ಸಾರ್ವಜನಿಕವಾಗಿ ತಮ್ಮ ಎಲುಬಿಲ್ಲದೆ ನಾಲಿಗೆಯನ್ನು ಪೊಲೀಸ್ ಇಲಾಖೆ ಮೇಲೆ ತೋರಿಸುವ ಮುಖಾಂತರ ಪೊಲೀಸರು ಎಂಜಲು ನಾಯಿಗಳು ಎಂದು ತಮ್ಮ ಸಚಿವಸ್ಥಾನದ ಘನತೆಯನ್ನು ಕಳೆದುಕೊಳ್ಳುವ ಜೊತೆಗೆ ದಿನದ 24 ಗಂಟೆ ಸಾರ್ವಜನಿಕರಿಗಾಗಿ ದುಡಿಯುವ ಪೊಲೀಸರನ್ನು ಮಾನಸಿಕವಾಗಿ ಕುಗ್ಗಿಸುವಂತಾಗಿದೆ ಎಂದು ಗೃಹ ಸಚಿವರ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ ಮಾನ್ಯ ಬಿ.ಎಸ್.ಯಡಿಯೂರಪ್ಪನವರ ಅವಧಿಯಲ್ಲಿ ಗೃಹ ಮಂತ್ರಿಯಾಗಿದ್ದ ಮಾನ್ಯರು ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆಯ ಬಗ್ಗೆ ಇದ್ದ ಗೌರವ ಇಂದು ಅರಗ ಜ್ಞಾನೇಂದ್ರ ಜ್ಞಾನ ವಿಲ್ಲದ ಅನಕ್ಷರಸ್ಥರಂತೆ ನಡೆದುಕೊಂಡಿರುವುದು ಸರ್ಕಾರಕ್ಕೆ ಮುಜುಗರ ತರುವ ವಿಷಯವಾಗಿದೆ. ಕೂಡಲೇ ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ಮಾತನಾಡಿ ರಾಜ್ಯದ ಗೃಹ ಮಂತ್ರಿಗಳ ಮಾತು ನೋಡಿದರೆ ಅವರು ಮಾನಸಿಕ ಅಸ್ವಸ್ಥರಂತೆ ಕಾಣಿಸುತ್ತಿದೆ. 5 ವರ್ಷ ಆಡಳಿತ ನಡೆಸುವ ರಾಜಕಾರಣಿಗಳು ಪೊಲೀಸರ ರಕ್ಷಣೆ ಇಲ್ಲದೆ ಸಾರ್ವಜನಿಕವಾಗಿ ಓಡಾಡಲಿ ಆಗ ಗೊತ್ತಾಗುತ್ತದೆ. ಪೊಲೀಸರ ತಾಕತ್ತು ಏನು ಎಂದು ಅದನ್ನು ಬಿಟ್ಟು ಮನೆ ಸಂಸಾರ ಎಲ್ಲವನ್ನು ತ್ಯಾಗ ಮಾಡಿ ರಾತ್ರಿ ಹಗಲು ದುಡಿಯುವ ಪೊಲೀಸರ ವಿರುದ್ದ ನಾಲಿಗೆ ಹರಿಬಿಟ್ಟಿರುವ ಗೃಹ ಮಂತ್ರಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬಿ ಗೃಹ ಮಂತ್ರಿಯನ್ನು ನಿಮಾನ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಬೇಕೆಂದು ಒತ್ತಾಯ ಮಾಡಿದರು.

ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಮಾಲೂರು ತಾಲ್ಲೂಕು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ, ಮಂಗಸಂದ್ರ ನಾಗೇಶ್, ಕುವ್ವಣ್ಣ, ನಾರಾಯಣಗೌಡ, ಮೂರಾಂಡಹಳ್ಳಿ ಶಿವಾರೆಡ್ಡಿ, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್, ಶ್ರೀನಿವಾಸಪುರ ತಾ.ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಮುಳಬಾಗಿಲು ತಾ.ಅಧ್ಯಕ್ಷ ಯಲುವಹಳ್ಳಿ ಪ್ರಭಾಕರ್. ಮುಂತಾದವರಿದ್ದರು.