JANANUDI.COM NETWORK
ಕುಂದಾಪುರ, ಡಿ.6: ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯು ಬೆಳ್ಳಿ ಹಬ್ಬ ಆಚರಿಸುವ ಹೊಸ್ತಿನಲ್ಲಿ ಈ ಶಾಲಾ ವಿದ್ಯಾ ಸಂಸ್ಥೆಯಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ನಾಡಿನ ಉದ್ದಗಲಕ್ಕೂ ಪಸರಿಸಿದ್ದು. ಇವರನ್ನೆಲ್ಲ ಒಂದುಗೂಡಿಸಿ ಹಳೆ ವಿದ್ಯಾರ್ಥಿ ಸಂಘವನ್ನು ಅಸ್ಥಿತ್ವಕ್ಕೆ ತರಲು ಸಭೆಯನ್ನು ಕರೆ ಯಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಹಾಗೂ ಶಾಲಾ ಸಂಚಾಲಕರಾದ ಅತೀ ವಂದನೀಯ ಸ್ಟ್ಯಾನಿ ತಾವ್ರೋರವರು ವಹಿಸಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಹತ್ವ ಮತ್ತು ಅದರ ಕಾರ್ಯಗಳ ಬಗ್ಗೆ ಸವಿಸ್ಥಾರವಾಗಿ ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಸಿಸ್ಟರ್ ತೆರೆಜ್ ಶಾಂತಿ ಎ.ಸಿ ಯವರು ಶಾಲೆಯ ಇತಿಹಾಸ ಮತ್ತು ಅಭಿವೃದ್ದಿಯ ಬಗ್ಗೆ ತಿಳಿಸಿದರು. ಈ ಸಭೆಯ ಸುಮಾರು 25 ಹಳೆ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಪದಾದಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.
ಕುಮಾರಿ ಮೋನಿಷ ಕರ್ವಾಲ್ಲೊ ಅಧ್ಯಕ್ಷೆಯಾಗಿ, ರೋಬಿನ್ ಗೊನ್ಸಾಲ್ವಿಸ್, ಉಪಾಧ್ಯಕ್ಷರಾಗಿ ಎನ್ಸಿಟಾ ಮೆಂಡೊನ್ಸಾ, ಕಾರ್ಯದರ್ಶಿಯಾಗಿ ಗಣೇಶ್ ಕೋತ್ವಾಲ್, ಉಪಕಾರ್ಯದರ್ಶಿಯಾಗಿ ನೇವಿಸ್ ವಾಜ್ ಖಾಜಾಂಚಿಯಾಗಿ ಆಯ್ಕೆಯಾದರು. ಶಿಕ್ಷಕಿ ಶ್ರೀಮತಿ ನೀತಾ ಡಿಸೋಜಾರವರು ಸ್ವಾಗತಿಸಿದರು. ಶಿಕ್ಷಕ ವೃಂದದವರು ಪ್ರಾರ್ಥನೆ ಗೀತೆ ಹಾಡಿದರು. ಶಾಲಾ ಶಿಕ್ಷಕಿ ಶ್ರೀಮತಿ ಸೆಲಿನ್ ಡಿಸೋಜರವರು ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಶ್ರೀಮತಿ ಮಮತಾರವರು ವಂದಿಸಿದರು.