ವಕೀಲರು ಸಮಾಜಮುಖಿಗಳಾಬೇಕು : ಧನರಾಜ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ ಡಿಸೆಂಬರ್ 04 : ಸಮಾಜದಲ್ಲಿ ವಕೀಲರ ಜವಾಬ್ದಾರಿ ಹೆಚ್ಚಿದೆ. ವೃತ್ತಿಯು ಈಗ ಜಟಿಲವಾಗುತ್ತಿದೆ. ಅಪರಾಧ ಪ್ರಕರಣಗಳು ವಿನೂತನ ರೀತಿಯಲ್ಲಿ ಕಂಡು ಬರುವುದರಿಂದ ವಕೀಲರು ಕೂಡ ಹೆಚ್ಚರಿಕೆ ವಹಿಸಬೇಕು ಎಂದು ಕೋಲಾರದ ಖ್ಯಾತ ವಕೀಲರಾದ ಧನರಾಜ್ ಅಭಿಪ್ರಾಯ ಪಟ್ಟರು.
ನಗರದ ಜಯನಗರದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆಯಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತಾನಾಡುತ್ತಿದ್ದರು.
ಪ್ರಸ್ತುತ ಸಂದರ್ಭಗಳಲ್ಲಿ ಅಪರಾಧಗಳು ಹೆಚ್ಚುತ್ತಿವೆ. ಹಾಗಾಗಿ ಯುವ ವಕೀಲರು ಸದಾ ಅಧ್ಯಯನ ಶೀಲರಾಗಬೇಕು. ನ್ಯಾಯಾಲಯದ ಕಲಾಪದಲ್ಲಿ ಹಿರಿಯ ವಕೀಲರು ವಾದ ಮಂಡಿಸುತ್ತಿರುವಾಗ ಅದನ್ನು ಗಮನವಿಟ್ಟು ಕೇಳಬೇಕು. ನಿರಂತರವಾಗಿ ಪರಿಶ್ರಮ ಮಾಡುತ್ತಾ ಕೆಲಸ ಮಾಡಬೇಕು ಎಂದರು.
ಕನ್ನಡ ತಿಲಕ ಪತ್ರಿಕೆ ಸಂಪಾದಕ ಕಲಾವಿದ ವಿಷ್ಣು ಮಾತನಾಡಿ ನ್ಯಾಯಾಂಗ ವ್ಯವಸ್ಥೆಗೆ ಸಂವಿಧಾನದ ಮೂಲಕ ವಿಶೇಷ ಸ್ಥಾನಮಾನ ಕೊಟ್ಟಂತಹ ಅಂಬೇಡ್ಕರ್‍ರವರನ್ನು ವಕೀಲರು ಸ್ಮರಿಸಬೇಕಾಗಿದೆ. ಅನೇಕ ಸಂಘ ಸಂಸ್ಥೆಗಳಲ್ಲಿ, ಹೋರಾಟಗಳಲ್ಲಿ ಭಾಗವಹಿಸಿದಂತಹ ವಕೀಲ ಧನರಾಜ್‍ರವರಿಗೆ ಚುಟುಕು ಸಾಹಿತ್ಯ ಪರಿಷತ್‍ನಿಂದ ಗೌರವ ಸಲ್ಲಿಸುತ್ತಿರುವುದು ಶ್ಲಾಘನೀಯ. ವೃತ್ತಿಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಧನರಾಜ್‍ರವರಿಗೆ ಇನ್ನೂ ಹೆಚ್ಚಿನ ಮನ್ನಣೆಗಳು ಲಭಿಸಲಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಮಾಜಿ ಅಧ್ಯಕ್ಷರಾದ ಹರಟಿ ನಾರಾಯಣಪ್ಪನವರು ಮಾತನಾಡಿ ಅನ್ಯಾಯವಾಗಿ ಗೆಲ್ಲುವುದಕ್ಕಿಂತ ನ್ಯಾಯವಾಗಿ ಸೊಲುವುದು ಒಳ್ಳೆಯದು. ವಕೀಲರು ದಕ್ಷೆ, ಪ್ರಾಮಾಣಿಕತೆ, ಕ್ರೀಯಾಶೀಲ ವ್ಯಕ್ತಿಗಳಾಗಬೇಕು ಎಂದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪಿ. ನಾರಾಯಣಪ್ಪ ಮಾತಾನಾಡಿ ವಕೀಲರು ಈಗ ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುವಂತೆ ಆಗಿದೆ. ನಿರ್ಭಿತಿಯಿಂದದ ವಕೀಲರು ಕೆಲಸ ಮಾಡಬೇಕಾಗಿದೆ. ವಕೀಲರ ಕಾಯ್ದೆ ಜಾರಿಗೆ ತರುವುದು ಅಗತ್ಯವಾಗಿದೆ. ಸಮಾಜದಲ್ಲಿ ನಡೆಯುತ್ತಿರುವ ನೂತನ ಅಪರಾಧ ಪ್ರಕರಣಗಳು ವಕೀಲರಿಗೆ ಸವಾಲಾಗಿ ಪರಿಣಮಿಸಿವೆ. ಅಧ್ಯಯನದ ಜೊತೆಗೆ ಹೊಸ ತಾಂತ್ರಿಕತೆ ವಿಧಾನವನ್ನು ವಕೀಲರು ಅರಿತು ಕೊಳ್ಳುವುದು ಅಗತ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಂಸ್ಕøತಿಕ ಪರಿಷತ್ ಅಧ್ಯಕ್ಷರಾದ ಎಸ್.ಸಿ.ವೆಂಕಟಕೃಷ್ಣಪ್ಪ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಉಪಾಧ್ಯಕ್ಷರಾದ ಟಿ.ಸುಬ್ಬರಾಮಯ್ಯ, ಶಿವಕುಮಾರ್, ಗೌರವಾಧ್ಯಕ್ಷರಾದ ಕೆ.ಎನ್.ಪರಮೇಶ್ವರ್, ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಶಾಂತಕುಮಾರಿ, ಮುಂತಾದವರು ಉಪಸ್ಥಿತರಿದ್ದರು
.