ವಿಜ್ಞಾನಿಗಳ ತಂಡ 40 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲು ಶಿಫಾರಸು

JANNANUDI.COM NETWORK

40 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ಗಳನ್ನು ನೀಡುವಂತೆ SARS-Cov- ಜೀನೋಮಿಕ್ಸ್ ಸೀಕ್ವೆನ್ಸಿಂಗ್ ಕನ್ಸೋರ್ಟಿಯಂ (ಇನ್ಸಾಕಾಗ್)ನ ವಿಜ್ಞಾನಿಗಳ ತಂಡವು ಶಿಫಾರಸು ಮಾಡಿದೆ.
ಆರೋಗ್ಯ, ನೈರ್ಮಲ್ಯ ಮತ್ತು ಪೆÇಲೀಸ್ ವಲಯಗಳಲ್ಲಿ ವ್ಯಕ್ತಿಗಳಿಗೆ ಮೊದಲ ಬೂಸ್ಟರ್ ಡೋಸ್ ನೀಡುವ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದೆ. ಇನ್ನೂ ಲಸಿಕೆ ಹಾಕದ ಎಲ್ಲರಿಗೂ ತ್ವರಿತವಾಗಿ ಲಸಿಕೆಯನ್ನು ನೀಡಬೇಕು ಎಂದು ತನ್ನ ವಾರಾಂತ್ಯದ ವರದಿಯಲ್ಲಿ ಹೇಳಿದೆ.
ಲೋಕಸಭೆಯ ಸಂಸದರು ಬೂಸ್ಟರ್ ಡೋಸ್ಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಇನ್ಸಾಕಾಗ್ ಈ ಶಿಫಾರಸುಗಳನ್ನು ಮಾಡಿದೆ. ಕೊರೋನಾ ರೂಪಾಂತರದ ಪ್ರಕರಣಗಳು ದೇಶವನ್ನು ಪ್ರವೇಶಿಸುತ್ತಿದ್ದಂತೆ ತ್ವರಿತವಾಗಿ ತಿಳಿದುಕೊಳ್ಳುವುದು ಕಷ್ಟ, ಆದ್ದರಿಂದ ಕೊರೋನಾದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದೆ.
ಕರೋನಾ ವೈರಸ್ನಲ್ಲಿನ ಆನುವಂಶಿಕ ಮಾದರಿಗಳನ್ನು ಪರೀಕ್ಷಿಸಲು ಇನ್ಸಾಕಾಗ್ ಅನ್ನು ಸ್ಥಾಪಿಸಲಾಗಿದೆ.