ರೋಟರಿ ಜಿಲ್ಲೆ 3182 ವಲಯದ ಸಾಂಸ್ಕೃತಿಕ ಸ್ಪರ್ಧೆ ಕುಂದ ಕಲಾ ಸಂಭ್ರಮ ಸಂಪನ್ನ

JANANUDI.COM NETWORK

ರೋಟರಿ ಜಿಲ್ಲೆ 3182 ವಲಯ ಒಂದರ ಸಾಂಸ್ಕೃತಿಕ ಸ್ಪರ್ಧೆ ಕುಂದ ಕಲಾ ಸಂಭ್ರಮ ಸಂಪನ್ನ. ದಿನಾಂಕ 21 11 2021ನೆ ಆದಿತ್ಯವಾರ ಲಕ್ಷ್ಮೀನರಸಿಂಹ ಕಲಾಮಂದಿರ ಕುಂದಾಪುರ ಇಲ್ಲಿ ಕುಂದಾಪುರದ ಹಿರಿಯ ರೋಟರಿ ಸಂಸ್ಥೆ ಅದ ರೋಟರಿ ಕುಂದಾಪುರ ಇವರ ಆಶ್ರಯದಲ್ಲಿ ಆರಂಭಗೊಂಡಿತು. ಡ್ರಾಮಾ ಜೂನಿಯರ್ ಸೀಸನ್ ಒಂದರ ಫೈನಲಿಸ್ಟ್ ಮಾಸ್ಟರ್ ಪ್ರಣಿತ ಸಮಾರಂಭವನ್ನು ಉದ್ಘಾಟಿಸಿದರು ವಲಯ ಒಂದರ ಸಹಾಯಕ ಗವರ್ನರ್ ಆದ ಪಿಎಚ್ಎಫ್ ಜಯ ಪ್ರಕಾಶ್ ಶೆಟ್ಟಿ, ಪಿಡಿಜಿ. ಪಿಎಚ್ಎಫ್. ಂSಓ ಹೆಬ್ಬಾರ್, ವಲಯ ಸೇನಾನಿ ಗಳಾದ ಪಿಎಚ್ಎಫ್ ಖಣಟಿ. ಡಾಕ್ಟರ್ ರಾಜಾರಾಮ ಶೆಟ್ಟಿ, ಖಣಓ. ಕೆ ರಮಾನಾಥ ನಾಯಕ್ ಮತ್ತು ರೋಟರಿಯ ಹಿರಿಯ ಸದಸ್ಯರಾದ ಖಣಟಿ. Pಊಈ ಪ್ರಶಾಂತ್ ತೋಳಾರ್ ಇವರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತು.
ಈ ಸಂದರ್ಭದಲ್ಲಿ ಕುಂದಾಪುರ ರೋಟರಿ ಕ್ಲಬ್ ವತಿಯಿಂದ ಮಾಸ್ಟರ್ ಪ್ರಣೀತ್ ಇವರನ್ನು ಸನ್ಮಾನಿಸಲಾಯಿತು. ಕುಂದಾಪುರಾದ “ಕುಂದ ಕಾಲ ಸಂಭ್ರಮದಲ್ಲಿ” ವಲಯ ಒಂದರ 8 ಕ್ಲಬ್ಬುಗಳು ಎಲ್ಲಾ ವಿಭಾಗಗಳಲ್ಲಿಯೂ ಭಾಗವಹಿಸಿದ್ದರು. ಕುಂದಾಪುರ ರೋಟರಿಯ ಅಧ್ಯಕ್ಷ ರಾದ Pಊಈ ಶಶಿಧರ ಹೆಗ್ಡೆ ಂ, ವಲಯ1 ರ ಸಾಂಸ್ಕೃತಿಕ ಸಂಯೋಜಕ Pಊಈ ಶಿರಿಯಾರ ಗೋಪಾಲ ಕೃಷ್ಣ ಶೆಟ್ಟಿ, ಖಣಟಿ ಸತೀಶ್ ಕೋಟ್ಯಾನ್ ಮತ್ತು ಹಿರಿಯ ರೋಟರಿಯ ಸದಸ್ಯರ ಮುಂದಾಳತ್ವದಲ್ಲಿ ಕಾರ್ಯಕ್ರಮ ಸಾಂಘವಾಗಿ ನೆರವೇರಿತು.
ಸದಸ್ಯರುಗಳಿಗಾಗಿ ಭಾವಗೀತೆ, ಜಾನಪದ ಗೀತೆ, ಯುಗಳ ಗೀತೆ, ಸಮೂಹ ಗಾನ , ನ್ರತ್ಯ, ಕಿರುಪ್ರಹಸನ, ರಂಗೋಲಿ, ಮೆಹಂದಿ, ಕಸದಿಂದ ರಸ ಮತ್ತು ಚಿತ್ರಕಲೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮೊದಲ ನೆಯ ಸಮಗ್ರ ಪ್ರಶಸ್ತಿಯನ್ನು ರೋಟರಿ ಕ್ಲಬ್ ಬೈಂದೂರು, 2ನೇ ಪ್ರಶಸ್ತಿಯನ್ನು ರೋಟರಿ ಕ್ಲಬ್ ಕುಂದಾಪುರ ಸನರೈಸ್ ಪಡೆಯಿತು.
ಸಮಾರೋಪ ಸಮಾರಂಭದ ವಿಶೇಷ ಆಹ್ವಾನಿತರಾಗಿ ಪಿಎಚ್ ಫ್. ಅಂ ಶಾಂತರಾಮ್ ಶೆಟ್ಟಿ ಅವರು ಆಗಮಿಸಿದ್ದರು, ಮುಖ್ಯ ಅತಿಥಿಗಳಾಗಿ ವಲಯ ಒಂದರ ಸಹಾಯಕ ಗವರ್ನರ್ ಆದ ಜಯಪ್ರಕಾಶ್ ಶೆಟ್ಟಿ, ರೋಟರಿ ಜಿಲ್ಲಾ ಸಾಂಸ್ಕೃತಿಕ ಸಮಿತಿಯ ಉಪಸಭಾಪತಿ ಯಾದ ಖಣಟಿ. ಪಿಎಚ್ಎಫ್. ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ವಲಯ ಸೇನಾನಿ ಡಾಕ್ಟರ್ ರಾಜ ರಾಮ್ ಶೆಟ್ಟಿ ಇವರು ವಿಜೇತರಿಗೆ ಬಹುಮಾನವನ್ನು ವಿತರಿಸಿದರು ಸಾಂಸ್ಕೃತಿಕ ಸಂಯೋಜಕರಾದ ಗೋಪಾಲಕೃಷ್ಣ ಶೆಟ್ಟಿ ಇವರು ಧನ್ಯವಾದ ಸಮರ್ಪಣೆ ಮಾಡಿದರು