ಕುಂದಾಪುರ ತೆರಾಲಿಯ ಸಂಭ್ರಮ – ನಮ್ಮ ಜೀವನಕ್ಕೆ ಬೇಕಾಗಿರುವ ಸಂದೇಶಗಳು ದೇವರ ವಾಕ್ಯಗಳಲ್ಲಿವೆ

JANANUDI.COM NETWORK


ಕುಂದಾಪುರ,ನ.24: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ಈ ವರ್ಷದ (23-11-21) ತೆರಾಲಿ ಜಾತ್ರೆಯು, ಪಲ್ಲಕ್ಕಿಯಲ್ಲಿರುವ ರೋಜರಿ ಮಾತೆಯನ್ನು ಆಶಿರ್ವಚನದ ಮೂಲಕ ಆರಂಭ ಗೊಂಡಿತು. ಬಳಿಕ ಜಪಮಾಲೆ ಭಕ್ತಿಯನ್ನು ಮಾಡಲಾಯಿತು. ನಂತರ ದೇವರ ವಾಕ್ಯದ ಭಕ್ತಿಯನ್ನು ಆಚರಿಸಲಾಯಿತು
ಈ ಪೂಜಾ ವಿಧಿಯನ್ನು ತ್ರಾಸಿ ಡೋನ್ ಬಾಸ್ಕೊ ಕೇಂದ್ರದ ಸಿ.ಬಿ.ಎಸ್.ಸಿ. ಶಾಲೆಯ ಪ್ರಾಂಶುಪಾಲ ವಂ|ಫಾ|ಮ್ಯಾಕ್ಷಿಮ್ ಡಿಸೋಜಾ ನಡೆಸಿಕೊಟ್ಟು ’ಒಂದು ಚಿತ್ರಕ್ಕೆ ಜೀವ ಇರುವುದಿಲ್ಲ, ಆದರೆ ಆ ಚಿತ್ರಕ್ಕೆ ಕೆಲವು ಸಮಯದ ತನಕ ನೋಡುತ್ತಾ ಇದ್ದರೆ, ನಮ್ಮಳೊಗೆ ಆ ಚಿತ್ರಕ್ಕೆ ಜೀವ ಬರುತ್ತದೆ’ ದೇವರ ವಾಕ್ಯಗಳು ಕೂಡ ಹಾಗೇ, ಅವಗಳು ಅರ್ಥವಾಗ ಬೇಕಾದರೆ ನಾವು ಆಸಕ್ತಿಯಿಂದ, ಆಳವಾಗಿ ಚಿತ್ತವಿಟ್ಟು ಕೇಳಿಕೊಳ್ಳಬೇಕು ಮನನ ಮಾಡಿಕೊಳ್ಳಬೇಕು. ದೇವರ ವಾಕ್ಯದಿಂದ ಯೇಸು ಕ್ರಿಸ್ತನ, ಪರಮ ವೈರಿಯಾದ ಸಾವ್ಲನು ಪರಿವರ್ತನೆಗೊಂಡು, ಬಳಿಕ ಆತ ಯೇಸು ಕ್ರ್ರಿಸ್ತನ ಪರಮ ಶಿಸ್ಯನಾಗಿ ಪಾವ್ಲ್ ಆಗಿ ಮಾರ್ಪಾಡು ಗೊಳ್ಳುತ್ತಾನೆ. ದೇವರ ವಾಕ್ಯಗಳಲ್ಲಿ ನಮಗೆ ಜೀವನದಲ್ಲಿ ಬೇಕಾಗಿರುವ ಸಂದೇಶಗಳಿವೆ. ದೇವರ ವಾಕ್ಯಗಳನ್ನು ಪರಿಪೂರ್ಣವಾಗಿ ಪಾಲಿಸಿದ್ದು ಯೇಸುವಿನ ತಾಯಿ ಮೇರಿ ಮಾತೆ, ಕುಂದಾಪುರದವರು ಭಾಗ್ಯವಂತರು, ಮೇರಿ ಮಾತೆ ಕುಂದಾಪುರದಲ್ಲಿ ರೋಜರಿ ಮಾತೆ ಎಂಬ ಹೆಸರಿನಲ್ಲಿ 451 ವರ್ಷಗಳಷ್ಟು ಹಿಂದಿನಿಂದ ನಿಮ್ಮನ್ನು ಕಾಪಾಡಿಕೊಂಡು ಸಲಹುತ್ತಾ ಬಂದಿದ್ದಾಳೆ. ನಾವು ಮೇರಿ ಮಾತೆಯ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ’ ಎಂದು ಅವರು ಸಂದೇಶ ನೀಡಿದರು
ದೇವರ ವಾಕ್ಯದ ಭಕ್ತಿ ಸಂಭ್ರಮದ ವಿಧಿಯಲ್ಲಿ ಸಂತ ಜುಜೆ ವಾಜ್ ಇವರಿಗೆ ಸಮರ್ಪಿಲ್ಪಟ್ಟ ಕುಂದಾಪುರ ವಲಯದ, ಹೆಚ್ಚಿನ ಇಗರ್ಜಿಗಳ ಧರ್ಮಗುರುಗಳು, ಕಟ್ಖರೆ ಬಾಲ ಯೇಸು ಆಶ್ರಮದ ಧರ್ಮಗುರುಗಳು ಹಾಗೂ ಅತಿಥಿ ಧರ್ಮಗುರುಗಳು, ಕುಂದಾಪುರದ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಪಾಲ್ಗೊಂಡರು. ಹಬ್ಬದ ಪೆÇೀಷಕರಾದ ಜೋನ್ ಡಿಸೋಜಾ, ಪತ್ನಿ ಫೆಲ್ಸಿಯಾನ್ ಡಿಜೋಜಾ ಮತ್ತು ಕುಟುಂಬ ಉಪಸ್ಥಿತರಿದ್ದರು. ಕಟ್ಕರೆ ಬಾಲಾ ಯೇಸು ಆಶ್ರಮದ ಸುಪೀರಿಯರ್ ವಂ|ಫಾ|ಆಲ್ವಿನ್‍ಸಿಕ್ವೇರಾ ಗಾಯನ ಮಂಡಳಿಗೆ ನಿರ್ದೇಶನ ನೀಡಿದರು. ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ, ವಂದಿಸಿದರು.