ಕೆಥೊಲಿಕ್‌ ಸಭಾ: ಉಡುಪಿ ಧರ್ಮಪ್ರಾಂತ್ಯ ಮಟ್ಟದ ಭಾಷಣ ಸ್ಪರ್ಧೆ, ಬಹುಮಾನ ವಿತರಣೆ

JANANUDI.COM NETWORK


ಉಡುಪಿ: ವಿದ್ಯಾರ್ಥಿಗಳಲ್ಲಿ ಚಿಕ್ಕ ಪ್ರಾಯದಲ್ಲಿಯೇ ಭಾಷಣದ ಕಲೆಗೆ ಪ್ರೋತ್ಸಾಹ ನೀಡುವುದರಿಂದ ಸ್ವಾವಲಂಬಿ ಮತ್ತು ಯಶಸ್ವಿ ನಾಯಕತ್ವ ಹೊಂದಿದ ವ್ಯಕ್ತಿಯಾಗಲು ಸಾಧ್ಯವಿದೆ ಎಂದು ಸಾಹಿತಿ ಪಿಯುಸ್‌ ಡಿಸೋಜಾ ಹೇಳಿದರು.
ಅವರು ಸೋಮವಾರ ಕಥೊಲಿಕ್‌ ಸಭಾ ಉಡುಪಿ ಪ್ರದೇಶ ಇದರ ವತಿಯಿಂದ ಆಯೋಜಿಸಿದ್ದ ಧರ್ಮಪ್ರಾಂತ್ಯ ಮಟ್ಟದ ಭಾಷಣ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದರು.
ಎಳೆ ಪ್ರಾಯದಲ್ಲಿಯೇ ಆತ್ಮವಿಶ್ವಾಸದಿಂದ ಮಾತನಾಡಬಲ್ಲವರು ಮುಂದೆ ಉತ್ತಮ ನಾಯಕರಾಗಿ ರೂಪುಗೊಳ್ಳಲು ಅವಕಾಶವಿದೆ. ವಿದ್ಯಾರ್ಥಿಗಳು ಚಿಕ್ಕ ಪ್ರಾಯದಲ್ಲಿಯೇ ಭಾಷಣ ಹಾಗೂ ಇನ್ನಿತರ ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಮಗುವಿನಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ಬಾಲ್ಯದಿಂದಲೂ, ಪೋಷಕರು ಮಗುವಿಗೆ ಸಹಾಯ ಮಾಡಬೇಕಾಗಿದೆ. ಪೋಷಕರ ಬೆಂಬಲ ಮತ್ತು ಸರಿಯಾದ ಪಾಲನೆ ಇದ್ದಾಗ ಮಗು ಒಂದು ಉತ್ತಮ ನಾಯಕನಾಗಲು ಸಾಧ್ಯವಿದೆ ಎಂದರು.
ಕಥೊಲಿಕ್‌ ಸಭಾ ವತಿಯಿಂದ ಪ್ರತಿ ವರ್ಷವೂ ಆಯೋಜಿಸುವ ಭಾಷಣ ಸ್ಪರ್ಧೆ ಘಟಕ ಮತ್ತು ವಲಯ ಹಂತದಲ್ಲಿ ನಡೆದು ವಲಯ ಹಂತದಲ್ಲಿ ವಿಜೇತರಾದವರು ಧರ್ಮಪ್ರಾಂತ್ಯ ಹಂತದಲ್ಲಿ ಸ್ಪರ್ಧಿಸಲು ಅವಕಾಶ ಪಡೆಯುತ್ತಾರೆ. ಭಾಷಣ ಸ್ಪರ್ಧೆಯು ಮೂರು ವಿಭಾಗಗಳಲ್ಲಿ ಕನ್ನಡ ಮತ್ತು ಕೊಂಕಣಿ ಭಾಷೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕಥೊಲಿಕ್‌ ಸಭಾ ಉಡುಪಿ ಪ್ರದೇಶ್‌ ಇದರ ಅಧ್ಯಕ್ಷರಾದ ಮೇರಿ ಡಿʼಸೋಜಾ ಅಧ್ಯಕ್ಷತೆ ವಹಿಸಿದ್ದರು.
ಆಧ್ಯಾತ್ಮಿಕ ನಿರ್ದೇಶಕರಾದ ವಂ|ಫರ್ಡಿನಾಂಡ್‌ ಗೊನ್ಸಾಲ್ವಿಸ್‌, ನಿಕಟಪೂರ್ವ ಅಧ್ಯಕ್ಷರಾದ ರೋಬರ್ಟ್‌ ಮಿನೇಜಸ್‌, ಪ್ರಧಾನ ಕಾರ್ಯದರ್ಶಿ ಗ್ರೆಗರಿ ಪಿಕೆ ಡಿಸೋಜಾ, ಕೋಶಾಧಿಕಾರಿ ಜೆರಾಲ್ಡ್‌ ರೊಡ್ರಿಗಸ್‌, ಉಡುಪಿ ವಲಯ ಅಧ್ಯಕ್ಷರಾದ ಲವೀನಾ ಪಿರೇರಾ, ಘಟಕಾಧ್ಯಕ್ಷರಾದ ಲೆಸ್ಲಿ ಕರ್ನೆಲಿಯೋ, ಕೇಂದ್ರದ ಮಾಜಿ ಅಧ್ಯಕ್ಷರಾದ ಎಲ್‌ ರೋಯ್‌ ಕಿರಣ್‌ ಕ್ರಾಸ್ತಾ, ಆಲ್ವಿನ್‌ ಕ್ವಾಡ್ರಸ್‌, ಡಾ. ಜೆರಾಲ್ಡ್‌ ಪಿಂಟೊ ಉಪಸ್ಥೀತರಿದ್ದರು.
ತೀರ್ಪುಗಾರರಾಗಿ ಮಂಗಳೂರಿನಿಂದ ಆಗಮಿಸಿದ ವಿಕ್ಟರ್‌ ಕೊರೆಯಾ, ಎಡ್ವರ್ಡ್‌ ಕುವೆಲ್ಲೊ, ಕ್ಯಾಸಿನ್‌ ರೊಡ್ರಿಗಸ್‌, ಕ್ಲೀಟಾ ಡಿʼಸೋಜಾ, ಡೀನಾ ವಾಸ್‌, ಲೆಸ್ಟರ್‌ ಪಿಂಟೊ, ಸಿಂಥಿಯಾ ರೊಡ್ರಿಗಸ್‌, ಡೆನ್ಜಿಲ್‌ ಪಿಂಟೊ, ಎಡ್ರಿಯಲ್‌ ಕ್ವಾಡ್ರಸ್‌ ಸಹಕರಿಸಿದರು.
ಭಾಷಣ ಸ್ಪರ್ಧೆ ಸಂಚಾಲಕ ಎಡ್ವರ್ಡ್‌ ಲಾರ್ಸನ್‌ ಡಿʼಸೋಜಾ ಸ್ವಾಗತಿಸಿ, ಸಹಸಂಚಾಲಕ ಸಂತೋಷ್‌ ಕರ್ನೆಲಿಯೋ ವಂದಿಸಿದರು. ಅನಿತಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.
ವಿಜೇತರ ವಿವರ
ಪ್ರಥಮ ವಿಭಾಗ – (ಕೊಂಕಣಿ) – ಪ್ರಥಮ – ರೋಯ್ಸನ್‌ ಬಾರೆಟ್ಟೊ, ಬಸ್ರೂರು, ದ್ವಿತೀಯ – ಅನುಷ್ಕಾ ರೊಡ್ರಿಗಸ್‌ ಮಿಯಾರು, ತೃತೀಯ – ಜಿಯಾ ಮೆಂಡೊನ್ಸಾ ಪಾಂಗಾಳ
ಪ್ರಥಮ ವಿಭಾಗ – (ಕನ್ನಡ) – ಪ್ರಥಮ -ಎಡ್ರಿಯಾನಾ ಕ್ವಾಡ್ರಸ್‌ ಬಾರ್ಕೂರು, ದ್ವೀತಿಯ – ಮೆಲ್‌ ರಿಯಾ ಡಿಸೋಜಾ ಕಟಪಾಡಿ, ತೃತೀಯ – ಸ್ನೇಹಲ್‌ ವೆನೋರಾ ಮೆಂಡೊನ್ಸಾ ಪಿಲಾರ್‌ ಮತ್ತು ಮೆಕ್ವಿಲಿನ್‌ ಡಿಸೋಜಾ ಮಿಯಾರು
ದ್ವಿತೀಯಾ ವಿಭಾಗ – (ಕೊಂಕಣಿ) – ಪ್ರಥಮ – ಸಿಯೋನಾ ಮಾರ್ಟಿನ್‌ ಕಲ್ಮಾಡಿ, ದ್ವಿತೀಯ – ಜೇಶ್ಮಾ ಡಿಸೋಜಾ ಉಡುಪಿ, ತೃತೀಯ ರೋಯ್ಸನ್‌ ಪಿಂಟೊ – ಮಿಯಾರು
ದ್ವಿತೀಯ ವಿಭಾಗ – (ಕನ್ನಡ) – ಪ್ರಥಮ – ಸೋನಿ ಪಟ್ಟದಕಲ್ಲು, ಉದ್ಯಾವರ, ದ್ವೀತಿಯ – ಸ್ವೀಡಲ್‌ ಲೋಬೊ ಅಜೆಕಾರು, ತೃತೀಯ – ವಿನೀಷಾ ಡಿಸೋಜಾ ಕೊಳಲಗಿರಿ
ತೃತೀಯ ವಿಭಾಗ – (ಕೊಂಕಣಿ) – ಪ್ರಥಮ – ಕ್ಯಾರಲ್‌ ಆಳ್ವಾ ಪೆರ್ನಾಲ್‌, ದ್ವಿತೀಯ – ಮೆಕ್ವಿಟಾ ಬ್ರಿಟ್ಟೊ ಕಣಜಾರು, ತೃತೀಯ – ರಿಯಾ ಲೂವಿಸ್‌ ಸಾಸ್ತಾನ
ತೃತೀಯ ವಿಭಾಗ – (ಕನ್ನಡ) – ಪ್ರಥಮ : ವಿಯೋಲಾ ರೊಸಾರಿಯೊ ಅಜೆಕಾರು, ದ್ವಿತೀಯ – ವಿನಿಶಾ ಡಿಸೋಜಾ ಕುಂದಾಪುರ, ತೃತೀಯ – ಸೆರಾ ಮಾತೆ ಮ್ಯಾಕ್ವನ್‌ ಪೆರ್ನಾಲ್
.