ಎನ್ ಎಸ್ ಎಸ್ ಸ್ವಯಂ ಸೇವಕರಿಗೆ ತರಬೇತಿ ಕಾರ್ಯಕ್ರಮ:ವ್ಯಕ್ತಿತ್ವ ವಿಕಸನ ಮೂಲಕ ರಾಷ್ಟ್ರದ ಸೇವೆಗೆ ಅವಕಾಶ

JANANUDI.COM NETWORK

“ರಾಷ್ಟ್ರೀಯ ಸೇವಾ ಯೋಜನೆಯು ಪ್ರತಿಯೊಬ್ಬ ವಿದ್ಯಾರ್ಥಿಗೂ ವ್ಯಕ್ತಿತ್ವ ವಿಕಸನದ ಸುವರ್ಣಾವಕಾಶವನ್ನು ನೀಡುತ್ತದೆ ದೈನಂದಿನ ಚಟುವಟಿಕೆಗಳು ಮತ್ತು ವಾರ್ಷಿಕ ವಿಶೇಷ ಶಿಬಿರ ಶಿಬಿರದ ಅನುಭವಗಳು ಸದಾಕಾಲ ನೆನಪಿನಲ್ಲಿ ಉಳಿಯುತ್ತವೆ ಮತ್ತು ಮುಂದೆ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಲು ಪ್ರೇರಣೆಯಾಗುತ್ತದೆ “ಎಂದು ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಶ್ರೀ ನವೀನ ಕೊರೆಯ ಹೇಳಿದರು ಅವರು ಕಾಲೇಜಿನ ಎನ್ಎಸ್ಎಸ್ ಘಟಕದ ಸ್ವಯಂಸೇವಕರ ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಡ್ವರ್ಡ್ ಲಾರ್ಸನ್ ಡಿಸೋಜಾ ವಹಿಸಿದ್ದರು.ಎನ್ ಎಸ್ ಎಸ್ ಯೋಜನಾಧಿಕಾರಿ ಶ್ರೀಮತಿ ಜೆಸಿಂತಾ ನತಾಲಿಯಾ‌ ಲೋಬೊ ನಿರೂಪಿಸಿ, ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಗುಂಪು ಚರ್ಚೆ ಮತ್ತು ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು.