ಕೋಲಾರದಲ್ಲಿ ಭಾರಿ ಮಳೆಯಿಂದಾದ ಹಾನಿ ಕುರಿತು ನ್ಯಾಯಾಧೀಶರಾದ ಸಿ.ಹೆಚ್.ಗಂಗಾಧರ್ ಪರಿಶೀಲನೆ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ನಗರದಲ್ಲಿ ಬಿದ್ದ ಭಾರಿ ಮಳೆಯಿಂದಾಗಿರುವ ಹಾನಿಯ ಕುರಿತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿಪತ್ತು ನಿರ್ವಹಣಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ.ಹೆಚ್.ಗಂಗಾಧರ್‌ ಪರಿಶೀಲನೆ ನಡೆಸಿದರು . ನಗರದ ಸಾರಿಗೆ ನಗರ , ಗಾಂಧಿನಗರ , ಗದ್ದೆಕಣ್ಣೂರುಕೋಲಾರಮ್ಮ ಬಡಾವಣೆ , ಬೈರೇಗೌಡ ನಗರ ಮತ್ತಿತರ ಪ್ರದೇಶಗಳಲ್ಲಿ ಸಂಚರಿಸಿದ ಅವರು , ಕಳೆದ ರಾತ್ರಿ ಬಿದ್ದ ಭಾರಿ ಮಳೆಯಿಂದಾಗಿರುವ ಹಾನಿಯನ್ನು ವೀಕ್ಷಿಸಿದರು . ಮಳೆಯಿಂದ ತೊಂದರೆಗೊಳಾಗಿರುವ ಸಾರ್ವಜನಿಕರಿಂದ ಸಮಸ್ಯೆ ಆಲಿಸಿದ ಅವರು ಸಾಂತ್ವಾನ ಹೇಳಿ , ಪರಿಹಾರ ಕಲ್ಪಿಸಲು ಸೇವಾ ಪ್ರಾಧಿಕಾರಕ್ಕೆ ಸಮರ್ಪಕ ದಾಖಲೆ ಸಲ್ಲಿಸುವಂತೆ ಸೂಚಿಸಿದರು . ಪರಿಶೀಲನೆ ಸಂದರ್ಭದಲ್ಲಿ ಯಾವುದೇ ಮನೆಗಳಿಗೆ ಹಾನಿಯಾಗಿರುವ ಘಟನೆಗಳ ಕುರಿತು ಸೂಕ್ತ ಕಮಕ್ಕೆ ಜಿಲ್ಲಾಡಳಿತಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದರು . ಕೋಲಾರಮ್ಮ ಬಡಾವಣೆಯಲ್ಲಿ ಮಹಿಳೆಯೊಬ್ಬರು ಮನೆ ಜಲಾವೃತವಾಗಿದ್ದು , ಮನೆಯೊಳಕ್ಕೆ ಹಾವುಗಳು ನುಗ್ಗಿವೆ ಎಂದು ತಿಳಿಸಿ ಸಹಾಯಕ್ಕೆ ಕೋರಿದಾಗ , ಕೂಡಲೇ ಅರಣ್ಯಾಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಿದರು . ಸಾರಿಗೆ ನಗರದಲ್ಲಿ ೭೦ ಮನೆಗಳಿಗೆ ನೀರು ನುಗ್ಗಿದ್ದು , ಸಾರ್ವಜನಿಕರು ತೊಂದರೆಗೆ ಒಳಗಾಗಿರುವುದು ನ್ಯಾಯಾಧೀಶರ ಗಮನಕ್ಕೆ ಬಂತು .
ಈ ಸಂದರ್ಭದಲ್ಲಿ ಸಾರಿಗೆ ನಗರದ ಪಕ್ಕದಲ್ಲಿನ ರಾಜಕಾಲುವೆ ದುರಸ್ಥಿಗೊಳಿಸಲು ನ್ಯಾಯಾಧೀಶರು ನಗರಸಭೆಗೆ ಸೂಚಿಸಿದರು .
ಮುಂದಿನ ೪೮ ಗಂಟೆಗಳ ಹೆಚ್ಚಿನ ಮಳೆಯಾಗುವ ಸಂಭವ ಇರವುದರಿಂದ ಮಳೆಯಿಂದ ಹಾನಿಗೊಳಗಾದ ಸಂತ್ರಸ್ಥರಿಗೆ ಅನುಕೂಲವಾಗುವಂತೆ ಮುಂಜಾಗ್ರತೆಯಾಗಿ ಹಾರೈಕೆ ಕೇಂದ್ರಗಳ ಸ್ಥಾಪನೆಗೆ ಸಿದ್ಧತೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚಿಸಿದರು . ಈ ಸಂದರ್ಭದಲ್ಲಿ ನ್ಯಾಯಾಧೀಶರೊಂದಿಗೆ ವಿಪತ್ತು ನಿರ್ವಹಣಾ ಸಮಿತಿ ಸದಸ್ಯ ವಕೀಲ ಕೆ.ಆರ್‌.ಧನರಾಜ್ , ನಗರಸಭೆ ಉಪಾಧ್ಯಕ್ಷ ಪ್ರವೀಣ್‌ಗೌಡ , ಸದಸ್ಯ ರಾಕೇಶ್ , ಕಂದಾಯ ನಿರೀಕ್ಷಕ ವಿಜಯದೇವ್ ಮತ್ತಿತರರಿದ್ದರು .