ದತ್ತಮಾಲಾಧಾರಿಗಳ ಮೇಲೆ ನಡೆದ ದೌರ್ಜನ್ಯದ ಕೃತ್ಯ ಅತ್ಯಂತ ಘೋರ ಮತ್ತು ಹೇಯ ಘಟನೆ : ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : ದತ್ತಮಾಲಾಧಾರಿಗಳ ಮೇಲೆ ನಡೆದ ದೌರ್ಜನ್ಯದ ಕೃತ್ಯ ಅತ್ಯಂತ ಘೋರ ಮತ್ತು ಹೇಯ ಘಟನೆ , ಇದಕ್ಕೆ ಕಾರಣವಾದ ಮುಸ್ಲಿಂ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡುವ ಮೂಲಕ ಹಿಂದೂಗಳಿಗೆ ಧೈರ್ಯ ತುಂಬಬೇಕಾಗಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ ತಿಳಿಸಿದರು . ಕೋಲಾರ ಬಂದ್ ಹಿನ್ನಲೆಯಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದ ಅವರನ್ನು ಕೋಲಾರ ಗಡಿಯಾದ ರಾಮಸಂದ್ರದ ಬಳಿ ಪೊಲೀಸರು ವಶಕ್ಕೆ ಪಡೆದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು . ಘಟನೆ ನಡೆದ ದಿನ ಪೊಲೀಸರು ಬರುವುದು ಸ್ವಲ್ಪ ತಡಮಾಡಿದ್ದರೂ ಅಂದು ದತ್ತಮಾಲಾಧಾರಿಗಳು ಭಸ್ಮವಾಗುತ್ತಿದ್ದರು , ಅದನ್ನ ತಡೆದ ಪೊಲೀಸರಿಗೆ ಧನ್ಯವಾದ ಹೇಳುವ ಎಂದರು . ಆದ್ರೆ ಬಿಜೆಪಿ ಸರ್ಕಾರ ಇಂದು ನಡೆದುಕೊಳ್ಳುತ್ತಿರುವ ಕ್ರಮ ಸರಿಯಿಲ್ಲ ಎಂದು ಟೀಕಿಸಿದರು . ಹಿಂದು ಸಮಾಜದವರ ಮೇಲೆ ದೌರ್ಜನ್ಯ ಮಾಡಿದವರ ಮೇಲೆ ಪ್ರತಿಭಟನೆ ಮಾಡಲು ಸಹ ಸರ್ಕಾರ ಅವಕಾಶ ಮಾಡಿಕೊಡದ ಬಗ್ಗೆ ನೋವು ಸಿಟ್ಟು ಆಗುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು . ಅಲ್ಲದೆ ಸಂವಿಧಾನ ಮತ್ತು ಕಾನೂನು ಬದ್ಧ ವಾಗಿ ಹೋರಾಟ ಮಾಡಲಾಗುತ್ತಿದೆ . ಅದು ನಮ್ಮ ಹಕ್ಕು , ಆದರೆ ಸರ್ಕಾರದ ಈ ಕ್ರಮ ಸರಿಯಲ್ಲ ಎಂದರು . ಇನ್ನು ಹಿಂದುಗಳಿಗೆ ಧೈರ್ಯ ತುಂಬಬೇಕಾಗಿದೆ . ಅದೇ ರೀತಿ ಮುಸ್ಲಿಂ ಕೀಡಿಗೇಡಿಗಳಿಗೆ ಎಚ್ಚರಿಕೆ ಕೊಡಬೇಕಾಗಿದೆ . ಹೀಗಾಗಿ ಇಡೀ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ತಿಳಿಸಿದರು .

ಪೊಲೀಸರ ವಶಕ್ಕೆ ಮುತಾಲಿಕ್ – ಧರಣಿ

ಇದೇ ವೇಳೆ ಕೋಲಾರ ತಾಲ್ಲೂಕು ರಾಮಸಂದ್ರ ಬಳಿ ಹೊಸಕೋಟೆ ತಾಲ್ಲೂಕು ನಂದಗುಡಿ ಪೊಲೀಸರು ವಶಕ್ಕೆ ಪಡೆದಿದ್ದು , ಇದನ್ನ ಖಂಡಿಸಿ ವಾಹನಕ್ಕೆ ಅಡ್ಡ ಕುಳಿತು ಶ್ರೀರಾಮ ಸೇನೆ ಕಾರ್ತಕರ್ತರು ಪ್ರತಿಭಟನೆ ಮಾಡಿದರು. ಈ ವೇಳೆ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗಿದ್ದು , ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ , ಮುತಾಲಿಕ್ ಅವರನ್ನು ನಂದಗುಡಿ ಪೊಲೀಸ್ ಠಾಣೆಗೆ ಕರೆದೊಯ್ದರು .
ನಂದಗುಡಿ ಠಾಣೆಯಲ್ಲಿ ಮುತಾಲಿಕ್‌ರೊಂದಿಗೆ ಬಿಜೆಪಿ ಮುಖಂಡ ಕೆ.ಎಸ್.ರಾಜೇಂದ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಮೇಶ್‌ರಾಜ್ , ಶಬರಿ , ಸುಪ್ರಿತ್ , ಮಹೇಶ್ , ಚಿನ್ನಪಿ , ಗೋವಿಂದು , ನಾಗರಾಜ್‌ಯಾದವ್ , ಸಿದ್ದನಹಳ್ಳಿ ಕಿಶೋರ್‌ ಮತ್ತಿತರರು ಹಾಜರಿದ್ದರು
.