ದತ್ತಪೀಠಕ್ಕೆ ತೆರೆಳಿದ್ದವರ ಮೇಲಿನ ದೌರ್ಜನ್ಯಕ್ಕೆ ತೀವ್ರ ಖಂಡನೆ ನ .೧೮ ಕೋಲಾರ ಬಂದ್‌ ಹಿಂದೂಪರ ಸಂಘಟನೆಗಳ ಬೈಕ್‌ರಾಲಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : – ಇತ್ತೀಚೆಗೆ ನಗರದಲ್ಲಿ ಚಿಕ್ಕಮಂಗಳೂರಿಗೆ ತೆರಳಿದ್ದ ದತ್ತಮಾಲಾಧಾರಿಗಳ ಮೇಲಿನ ಹಲ್ಲೆ ಖಂಡಿಸಿ ನ .೧೮ ರಂದು ಕರೆ ನೀಡಿರುವ ಕೋಲಾರ ಬಂದ್ ಹಿನ್ನಲೆಯಲ್ಲಿ ಬುಧವಾರ ನಗರದಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಬೃಹತ್ ಬೈಕ್ ರಾಲಿ ನಡೆಸಿದರು . ಚಿಕ್ಕಮಂಗಳೂರಿನ ದತ್ತಪೀಠಕ್ಕೆ ತೆರಳಿದ್ದ ಹಿಂದೂಪರ ಸಂಘಟನೆಗಳ ಯುವಕರಿದ್ದ ವಾಹನದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಖಂಡಿಸಿ ಈ ಬಂದ್ ಕರೆ ನೀಡಲಾಗಿದೆ . ಬಂದ್ ಹಿನ್ನಲೆಯಲ್ಲಿ ಬುಧವಾರ ಬೈಕ್ ರಾಲಿ ನಡೆಸಿದ ಹಿಂದೂಪರ ಸಂಘಟನೆಗಳ ಮುಖಂಡರು ದ್ವಿಚಕ್ರ ವಾಹನಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ರಾಲಿ ನಡೆಸಿ ಬಂದ್‌ಗೆ ಎಲ್ಲ ಹಿಂದುಗಳು , ಸಾರ್ವಜನಿಕರು , ವರ್ತಕರು , ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು . ಬೈಕ್ ರಾಲಿ ಗಾಂಧಿವನದಿಂದ ಆರಂಭಗೊಂಡು ದೊಡ್ಡಪೇಟೆ , ಶಾರದಾಟಾಕೀಸ್ ರಸ್ತೆ ಡೂಂಲೈಟ್ ವೃತ್ತ , ಬಂಗಾರಪೇಟೆ ವೃತ್ತ , ಹೋಟೆಲ್ ಇಂಡಿಯಾ ವೃತ್ತ , ಬಸ್‌ಸ್ಟಾಂಡ್ , ಕಾಳಮ್ಮ ಗುಡಿ , ಕಾಲೇಜು ವೃತ್ತ , ಗೌರಿಪೇಟೆ ಮೂಲಕ ಚಂಪಕ್ ವೃತ್ತದಲ್ಲಿ ಕೊನೆಗೊಂಡಿತು . ಹಿಂದುಪರ ಸಂಘಟನೆಗಳು ಕರೆನೀಡಿರುವ ಬಂದ್ ಹಿನ್ನೆಲೆಯಲ್ಲಿ ಪೊಲೀಸರು ಪ್ರಮುಖ ವೃತ್ತಗಳು , ಸೂಕ್ಷ್ಮ ಪ್ರದೇಶದಲ್ಲಿ ಖಾಕಿ ಪಡೆಯನ್ನು ನಿಯೋಜಿಸಿ ನಾಕಾ ಬ ೦ ದಿ ಕೈಗೊಂಡಿತ್ತು . ರಾಲಿ ಕ್ಲಾಕ್ ಟವರ್ ಕಡೆ ಪ್ರವೇಶಿಸದಂತೆ ಶಾರದಾ ಟಾಕೀಸ್ ರಸ್ತೆ , ಕಸ್ಸಾರ್ಟಿಸಿ ಬಸ್ ನಿಲ್ದಾಣ ವೃತ್ತ ಹಾಗೂ ಶ್ರೀವೇಣುಗೋಪಾಲಸ್ವಾಮಿ ಪುಷ್ಕರಣಿ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ ಸಂಚಾರ ನಿಷೇಧಿಸಿದ್ದರು . ಇದರಿಂದ ವಾಹನ ಸಂ.ಚಾರ ಕಷ್ಟಕರವಾಗಿತ್ತು .

ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಬಂದ್

ಬಂದ್ ಕುರಿತು ಮಾಹಿತಿ ನೀಡಿದ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಮೇಶ್‌ರಾಜ್ , ಬಜರಂಗದಳದ ಬಾಲಾಜಿ , ಬಾಬು , ಗುರುವಾರ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ , ಹಿಂದೂಜಾಗರಣಾ ವೇದಿಕೆಯ ಜಗದೀಶ್‌ಕಾರಂತ್ , ಸಕಲೇಶಪುರ ರಘು ನಗರಕ್ಕೆ ಆಗಮಿಸಲಿದ್ದು , ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು .

ನಗರದ ಕ್ಲಾಕ್ ಟವರ್ ರಸ್ತೆ ಯಾವುದೇ ಒಂದು ಸಮುದಾಯದ ಸ್ವತ್ತಲ್ಲ , ಈ ನಗರದ ಪ್ರತಿ ಪ್ರಜೆಯೂ ಅಲ್ಲಿ ಓಡಾಡಲು ಅವಕಾಶವಿದೆ , ವಿನಾಕಾರಣ ನಮ್ಮ ತಂಟೆಗೆ ಬರುತ್ತಿದ್ದಾರೆ , ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದರು . ದತ್ತಪೀಠಕ್ಕೆ ಹೊರಟಿದ್ದ ಬಸ್ಸಿನ ಮೇಲೆ ದುಷ್ಕರ್ಮಿಗಳು ನಡೆಸಿದ ದಾಳಿ ಖಂಡನೀಯವಾಗಿದ್ದು , ಸಮುದಾಯದಲ್ಲಿ ಶಾಂತಿ ಕದಡುವ ಇಂತಹ ಹೇಯ ಕೃತ್ಯ ನಡೆಸಿದವರನ್ನು ಬಂಧಿಸಬೇಕು , ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು . ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗಹಿಸಿದರು . ಬೈಕ್ ರಾಲಿಯಲ್ಲಿ ಕೆಯುಡಿಎ ಅಧ್ಯಕ್ಷ ಓಂಶಕ್ತಿ ಚಲಪತಿ , ವಿಹಿಂಪದ ಡಾ.ಶಿವಣ್ಣ.ವಿಜಯಕುಮಾರ್ , ಜಯಂತಿಲಾಲ್ , ಹಿಂದುಪರ ಸಂಘಟನೆಗಳ ಮುಖಂಡರಾದ ಬಾಬು , ಬಾಲಾಜಿ , ರಮೇಶ್ ರಾಜ್ , ಮಹೇಶ್ , ಜಗ್ಗ , ಓಂಪಕಾಶ್ , ನಾಗರಾಜ್ , ಕೆ.ಪಿ.ನಾಗರಾಜ್ , ಅರುಣ್ , ಸುಪ್ರೀತ್ ಮಂಜುನಾಥ್ , ವಿಶ್ವನಾಥ್ , ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು .