ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಜಯಶೀಲರನ್ನಾಗಿ ಮಾಡಿ : ನಾಗನಂದ ಕೆಂಪರಾಜ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ ಇದೇ ತಿಂಗಳು ೨೧ ರಂದು ನಡೆಯುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ನಾನು ಸ್ವರ್ದಿಸುತ್ತಿದ್ದೇನೆ. ಕನ್ನಡ ಸೇವೆಯನ್ನು ಮಾಡಲು ನಿಮ್ಮ ಅಮೂಲ್ಯವಾದ ಮತ ವನ್ನು ನೀಡಿ ಜಯಶೀಲರನ್ನಾಗಿ ಮಾಡವುದರ ಮೂಲಕ ಮತ್ತಷ್ಟು ಕನ್ನಡ ಸೇವೆ ಮಾಡಲು ಅನುವು ಮಾಡಿಕೊಡಬೇಕೆಂದು ನಾಗನಂದ ಕೆಂಪರಾಜ್ ಕೋರಿದರು.
ಪಟ್ಟಣದಲ್ಲಿ ಮತಯಾಚನೆ ಮಾಡುತ್ತಾ ಸುದ್ದಿಗಾರರೊಂದಿಗೆ ಮಾತನಾಡಿದ ನಾಗಾನಂದ ಕೆಂಪರಾಜ್ ನಮ್ಮ ಐದುವರೆ ವರ್ಷದ ಅವಧಿಯಲ್ಲಿ ಒಂದು ವರ್ಷ ಕೋವಿಡ್ ಇದ್ದರೂ ಸಹ ನಮ್ಮ ಅವಧಿಯಲ್ಲಿ ಕನ್ನಡಿಗರು ಮೆಚ್ಚುವಂತಹ ಅತ್ಯತ್ತಮ ಕೆಲಸಗಳನ್ನು ಮಾಡಿದ್ದೇನೆ. ಹಾಗೆಯೇ ಈ ತಾಲ್ಲೂಕಿನ ಗಡಿ ಭಾಗಗಳಲ್ಲಿ ನಾಡ ನುಡಿಯನ್ನು ಕಟ್ಟುವಂತ ಕೆಲಸದಲ್ಲಿ ನಮ್ಮ ತಂಡ ವಿಶೇಷವಾದ ಕಾರ್ಯಗಳನ್ನು ನಿರ್ವಸುವಲ್ಲಿ ಯಶಸ್ವಿಯಾದ ಕಾರಣ ನಾನು ಸ್ವರ್ದಿಸಲು ನಿಮ್ಮ ಮುಂದೆ ಕನ್ನಡಮ್ಮನ ಸೇವಕರಾಗಿ ಬಂದಿರುವೆ ಮುಂದಿನ ದಿನಗಳಲ್ಲಿ ಬಹಳಷ್ಟು ಕನ್ನಡವನ್ನು ಕಟ್ಟುವಂತ ಕೆಲಸಗಳು ಇದೆ ಜೊತೆಗೆ ಕೋಲಾರ ಜಿಲ್ಲೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳವನ್ನು ತಂದೆ ತರುತ್ತೇನೆ ಎಂಬ ಭರವಸೆಯನ್ನು ಕೊಡುವುದರ ಮೂಲಕ ನನ್ನ ಒಂದು ಅವಧಿಯಲ್ಲಿ ನಾನು ಮಾಡಿರುವ ಕೆಲಸ ಕಾರ್ಯಗಳೇ ನನಗೆ ಶ್ರೀರಕ್ಷವಾಗಲಿದೆ. ಅಪಪ್ರಚಾರ ಬಹಳಷ್ಟು ಇದೆ ಇದಕ್ಕೆ ಕಿವಿಕೊಡದೆ ನೀವು ಎಲ್ಲರೂ ಸಹ ನನಗೆ ಸಹಕಾರವನ್ನು ಕೊಡಬೇಕೆಂದು ತಿಳಿಸಿದರು.
ಈ ತಾಲ್ಲೂಕು ನನ್ನ ತಾಯಿಯ ತವರು ಮನೆಯಾಗಿರುವುದರಿಂದ ಕನ್ನಡ ಅಭಿಮಾನಿಗಳ ಮತದಾರರು ನನ್ನ ಕೈ ಹಿಡಿಯುವ ವಿಶ್ವಾಸ ನನಗೆ ಇದೆ ಈ ತಾಲ್ಲೂಕಿನಲ್ಲಿ ಮಾಡಿದ ಕನ್ನಡ ಸಾಹಿತ್ಯ ಸಮ್ಮೇಳನ, ಗಡಿ ಭಾಗದಲ್ಲಿ ಕನ್ನಡವನ್ನು ಕಟ್ಟುವ ಕೆಲಸಗಳು ಮಾಡಿದ್ದೇವೆ. ಜೊತೆಗೆ ನಿರಂತರವಾಗಿ ಸಮಾಜ ಸೇವೆ. ಶೈಕ್ಷಣಿಕ ಸೇವೆ ನನಗೆ ಬೆಂಬಲವಾಗುತ್ತದೆ. ಈ ತಾಲ್ಲೂಕಿ ನಿಂದ ಅತಿಹೆಚ್ಚು ಮತಗಳನ್ನು ನೀಡಿವುದರ ಮೂಲಕ ನನ್ನನ್ನು ಜಯಶೀಲರನ್ನಾಗಿ ಮಾಡುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷ್ಯತ್ ನಿಕಟಪೂರ್ವ ಅಧ್ಯಕ್ಷ ಜಿ.ಎನ್. ಕುಬೇರಗೌಡ ಮಾತನಾಡಿ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಗಡಿ ಗ್ರಾಮೀಣ ಭಾಗದಿಂದ ಜಿಲ್ಲೆಯವರಿಗೂ ನಾಡನುಡಿ ಸಾಹಿತ್ಯ ಬೆಳವಣಿಗೆಗೆ ಪ್ರಥಮ ಆಧ್ಯತೆ ಕೊಟ್ಟು ಕನ್ನಡದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿರುವ ವ್ಯಕ್ತಿ ಎಂದರೆ ನಾಗನಂದ ಕೆಂಪರಾಜ್ ಆಗಿದ್ದಾರೆ. ಇವರ ಜಿಲ್ಲಾಧ್ಯಕ್ಷತೆಯ ಅವಧಿಯಲ್ಲಿ ನಮ್ಮ ತಾಲ್ಲೂಕಿನಲ್ಲಿ ಸಹ ನಾಲ್ಕು ಕನ್ನಡ ಸಾಹಿತ್ಯ ಸಮ್ಮೇಳಗಳನ್ನು ಮಾಡಿದ್ದೇವೆ. ಇವರನ್ನು ಮತ್ತೊಮ್ಮೆ ಆಯ್ಕೆ ಮಾಡಿ ಕನ್ನಡ ಸೇವೆ ಮಾಡಲು ತಾವು ಅನುವು ಮಾಡಿಕೊಡಬೇಕೆಂದು ಕೋರುತಾ.್ತ ನಮ್ಮ ತಾಲ್ಲೂಕಿನಿಂದ ಅತಿ ಹೆಚ್ಚು ಮತಗಳನ್ನು ನೀಡುವುದರ ಮೂಲಕ ಇವರನ್ನು ಜಯಶೀಲರನ್ನಾಗಿ ಮಾಡೋಣ ಎಂದು ತಿಳಿಸಿದರು.
ಈ ಮತಯಾಚನೆಯಲ್ಲಿ ಸಾಹಿತಿ ಕೆ.ವಿ. ನಾಗರಾಜ್, ಶಿಕ್ಷಕರಾದ ಚಲಪತಿ, ಲಕ್ಷಿö್ಮÃಸಾಗರ ನಾರಾಯಣಸ್ವಾಮಿ, ರತ್ನಪ್ಪ ಮೇಲೆಗಾಣೆ, ಉಪನ್ಯಾಸಕರಾದ ಅಶ್ವತ್ಥಗೌಡ, ವೆಂಕಟರಾಮೇಗೌಡ, ಬೀಸನಹಳ್ಳಿ ರಾಜಣ್ಣ, ಇನ್ನಿತರರು ಉಪಸ್ಥಿತರಿದ್ದರು.