ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಲು ಸಮುದಾಯದ ಸಹಭಾಗಿತ್ವ ಮುಖ್ಯ -ಡಾ | ಕಮಲ.ಎಂ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : ಮಾರಕ ಕೀಟವಾಗಿರುವ ಸೊಳ್ಳೆಯಿಂದ ಹರಡುವಂತಹ ಡೆಂಗೀ , ಚಿಕುಂಗುನ್ಯಾ , ಮಲೇರಿಯಾ , ಮೆದುಳುಜ್ವರ , ಆನೆಕಾಲುರೋಗ ಮತ್ತು ಇತರೆ ಮಾರಣಾಂತಿಕ ಖಾಯಿಲೆಗಳನ್ನು ನಿಯಂತ್ರಣ ಮಾಡಬೇಕಾದರೆ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಲು ಸಮುದಾಯದ ಸಹಭಾಗಿತ್ವ ಮುಖ್ಯ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ || ಕಮಲ.ಎಂ ಅವರು ತಿಳಿಸಿದ್ದಾರೆ . ಡೆಂಗ್ಯೂ , ಚಿಕುನ್ ಸಹ ಒಂದು ಸಾಂಕ್ರಮಿಕರೋಗವಾಗಿದ್ದು , ಈಡೀಸ್ ಈಜಿಪ್ಟ್ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ . ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ ಹಾಗೂ ಈ ಸೊಳ್ಳೆಯು ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತದೆ . ಇದರಿಂದ ಇದ್ದಕ್ಕಿದ್ದಂತೆ ತೀವ್ರಜ್ವರ , ವಿಪರೀತ ತಲೆನೋವು , ಕಣ್ಣುಗಳ ಹಿಂಭಾಗ ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು.ಈ ರೋಗದ ಪ್ರಮುಖ ಲಕ್ಷಣಗಳಾಗಿರು ಈ ಲಕ್ಷಣಗಳು ಕಂಡು ಬಂದ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಮತ್ತು ಸಲಹೆಗಳನ್ನು ಪಡೆಯಬೇಕು . ಕ್ಯೂಲೇಕ್ಸ್ ಎಂಬ ಸೊಳ್ಳೆ ಜಪಾನಿನ ಎನ್ಸೆಫಾಲೀಟೀಸ್ ( ಮೆದುಳು ಜ್ವರ ) , ದುಗ್ಗರಸ ಫೈಲೇರಿಯಾಸಿಸ್ , ವೆಸ್ಟ್ ನೈಲ್ ಜ್ವರಕ್ಕೆ ಕಾರಣವಾಗಬಹುದು . ಅನಾಫಿಲೀಸ್ ಸೊಳ್ಳೆಯಿಂದ ಮಲೇರಿಯಾ ಜ್ವರ ಬರುತ್ತದೆ . ಈ ಸೊಳ್ಳೆಯು ನಿಂತ ನೀರು ಬಾವಿ ಕೆರೆಗಳು ಕ್ವಾರಿಗಳು ಮತ್ತಿತರ ಕಡೆ ಬೆಳೆಯುತ್ತವೆ . ಈ ಸೊಳ್ಳೆಯು ಹೆಚ್ಚಾಗಿ ಸಂಜೆಯ ವೇಳೆ ಕಚ್ಚುವುದು . ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆಯನ್ನು ಪಡೆದರೆ ಮರಣ ಪ್ರಮಾಣವನ್ನು ತಪ್ಪಿಸಬಹುದು ಎಂದು ತಿಳಿಸಿದ್ದಾರೆ . ಸಮುದಾಯದ ಸಹಭಾಗಿತ್ವದೊಂದಿಗೆ ಡೆಂಗ್ಯೂ , ಚಿಕುನ್‌ಗುನ್ಯಾ ಹಾಗೂ ಮೆದುಳು ಜ್ವರದಂತಹ ಅನೇಕ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣ ಮಾಡಬಹುದಾಗಿರುತ್ತದೆ . ದಿನ ಬಳಕೆಯ ತೊಟ್ಟಿ ಮತ್ತು ಡ್ರಂಗಳನ್ನು ವಾರಕ್ಕೊಮ್ಮೆ ತೊಳೆದು ಒಣಗಿಸಿ ನೀರು ತುಂಬಿಸಿ ಮುಚ್ಚಿಡುವುದು , ಮನೆಯ ಸುತ್ತಮುತ್ತ ಘನ ತ್ಯಾಜ್ಯ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದರಿಂದ ಸೊಳ್ಳೆ ನಿಯಂತ್ರಣ ಮತ್ತು ಸೊಳ್ಳೆಗಳಿಂದ ಬರುವ ಕಾಯಿಲೆಗಳನ್ನು ನಿಯಂತ್ರಣ ಮಾಡಬಹುದು . ಚಿಕ್ಕವರು ಗರ್ಭಿಣಿ ತಾಯಂದಿರು ಮತ್ತು ವಯೋವೃದ್ದರು ಸೊಳ್ಳೆ ಪರದೆಗಳನ್ನು ಬಳಸುವುದು ಹಾಗೂ ಮನೆಯಲ್ಲಿ ಸೊಳ್ಳೆ ನಿಯಂತ್ರಣ ಔಷಧಗಳಿಗಳಾದ ಹಿಟ್ ಸ್ಟೇ ಕ್ಯಾಯಿಲ್ , ಓಡೋಮಸ್ ಮುಲಾಮು , ನೈಸರ್ಗಿಕವಾಗಿ ಸಿಗುವ ಬೇವಿನ ಸೊಪ್ಪಿನ ಹೊಗೆಯನ್ನು ಹಾಕುವುದರ ಮೂಲಕ ಸೊಳ್ಳೆಗಳ ನಿಯಂತ್ರಣ ಮಾಡಬಹುದೆಂದು ಅವರು ತಿಳಿಸಿದ್ದಾರೆ .