ಸಮಾಜ ಸೇವಕಿ ಲವೀನಾ ದಾಂತಿ ಇವರಿಗೆ ಜೇಸಿಐ ಸಾಧನಾಶ್ರೀ ಪ್ರಶಸ್ತಿ

JANANUDI.COM NETWORK

ಕುಂದಾಪುರ: ಇಲ್ಲಿನ ಸಹನಾ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಜೇಸಿಐ ಭಾರತ ವಲಯ 15 ರ “ಉನ್ನತಿ” ವ್ಯವಹಾರ ಸಮ್ಮೇಳನದಲ್ಲಿ
ಇನೋಳಿ, ಪಾವೂರಿನ ಲವೀನಾ ದಾಂತಿ ಇವರಿಗೆ ಇಸವಿಯಿಂದ ಸಮಾಜ ಸೇವೆ ಹಾಗೂ ನಾಯಕತ್ವದ ಸಾಧನೆಗಾಗಿ ‘ಸಾಧನಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇನೊಳಿ ಪಾವೂರಿನ ಫೆಡ್ರಿಕ್ ವಾಲ್ಟರ್ ದಾಂತಿ ಇವರ ಪತ್ನಿಯಾದ ಲವೀನಾ ದಾಂತಿ ಶ್ರೀ ಕ್ಷೇತ್ರ ಧರ್ಮಸ್ಥ ಳ ಗ್ರಾಮಾಭಿವೃದ್ದಿಯಲ್ಲಿ ಘಟಕದ ಸದಸ್ಯೆ ಹಾಗೂ ಒಕ್ಕೂಟದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. 5 ವರ್ಷಗಳ ಕಾಲ ಒಕ್ಕೂಟದಲ್ಲಿ ಸೇವೆ. ಕೆನರಾ ಅಭಿವೃದ್ದಿ ಮತ್ತು ಶಾಂತಿ ಸಂಸ್ಥೆ ಮಂಗಳೂರು (ಸಿ.ಒ.ಡಿ.ಪಿ) ಸದಸ್ಯೆಯಾಗಿ 2009 ರಿಂದ ಕಾರ್ಯ ಆರಂಭ. 2014 ರಿಂದ ಮಹಾಸಂಘದ ಅಧ್ಯಕ್ಷೆಯಾಗಿ ಸೇವೆ. ಬಡವರಿಗೆ ಸರಕಾರದಿಂದ ಸಿಗುವ ಸವಲತ್ತುಗಳ ಅರಿವು ಕಾರ್ಯಕ್ರಮ ಮದ್ಯಪಾನದ ವಿರುದ್ದ ಜಾಗ್ರತಿ, ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆಯ ಹಕ್ಕು ಹಾಗೂ ಹೋರಾಟ. 2016 ರಿಂದ ಒಕ್ಕೂಟದಲ್ಲಿ ನಾಯಕತ್ವ. ಪರಿಸರ ಜಾಗೃತಿ, ಸ್ವಚ್ಛತಾ ಕಾರ್ಯಕ್ರಮ, ವನಮಹೋತ್ಸವ ಕಾರ್ಯಕ್ರಮ, ಸಾವಯವ ಕೃಷಿ, ಎರೆ ಹುಳ ಗೊಬ್ಬರ ತಯಾರಿ, ನಬಾರ್ಡ್ ಯೋಜನೆಯಡಿ ಸ್ವಉದ್ಯೋಗ, ಹೊಲಿಗೆ ತರಬೇತಿ ಹಾಗೂ ತೀರ ಬಡವರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ. 2016ರಲ್ಲಿ ಜೆಸಿಐ ಮಂಗಳ ಗಂಗೋತ್ರಿ ಕೊಣಾಜೆ ಸದಸ್ಯೆಯಾಗಿ ಸೇರ್ಪಡೆ. ತದನಂತರ ಸಹ ಕಾರ್ಯದರ್ಶಿಯಾಗಿ ಸೇವೆ, ಬಡ ಮಹಿಳೆ ಶಾರದಮ್ಮ ಅವರಿಗೆ ಜೆಸಿಐ ಮಂಗಳ ಗಂಗೋತ್ರಿ ಹಾಗೂ ಕೆಥೊಲಿಕ್ ಸಭಾ ಫಜೀರು ಘಟಕದ ಜಂಟಿ ಆಶ್ರಯದಲ್ಲಿ ಉಚಿತ ಮನೆ ನಿರ್ಮಾಣ ಹಾಗೂ ಮನೆಗೆ ಉಚಿತ ವಿದ್ಯತ್ತೀಕರಣ ಹಿರಿಯ ನಾಗರಿಕರನ್ನು ರುತಿಸಿ ಅವರಿಗೆ ಸರಕಾರದ ಸಹಯೋಗದೊಂದಿಗೆ ಹಿರಿಯನಾಗರಿಕರಿಗೆ ಕಾರ್ಡ್ ಹಾಗೂ ಪಿಂಚಣಿ ಸಿಗುವಂತ ವ್ಯವಸ್ಥೆಗೆ ಸಹಾಯ. ನಿರಂತರ ಸ್ವಚ್ಛತಾ ಅಭಿಯಾನ, ಪರಿಸರ ಜಾಥಾ. ಕಸದಿಂದ ರಸ, ಬಡ ರೋಗಿಗಳಿಗೆಗೆ ಆಸ್ಪತ್ರೆಗೆ ಸಾಗಿಸಲು ವಾಹನದ ವ್ಯವಸ್ಥೆ ಹಾಗೂ ಧನ ಸಹಾಯ. ಹಿಂಗು ಗುಂಡಿ ನಿರ್ಮಿಸಿ ನೀರು ಹಿಂಗಿಸುವ ಯಶಸ್ವಿ ಯೋಜನೆ, ಸ್ವ ಉದ್ಯೋಗ ತರಬೇರಿ ಶಿಬಿರ ಇದರ ಫಲಾನುಭವಿಗಳು ಇಂದು ಕೋಳಿ ಸಾಕಾಣಿಕೆ, ಹೈನುಗಾರಿಕೆ, ಜೇನು ಕೃಷಿ ಮಾಡಿ, ಕಲೆ ಹಾಗೂ ಹಾಡುಗಾರಿಕೆ ನೃತ್ಯ ನಾಟಕ ಹಾಗೂ ಸಂಗೀತಕ್ಕೆ ಪೆÇ್ರೀತ್ಸಾಹ ಹಾಗೂ ತರಬೇತಿ. ಮಲ್ಲಿಗೆ ಕೃಷಿ: ಮನೆಯಲ್ಲಿಯೇ ಮಲ್ಲಿಗೆ ಗಿಡಗಳನ್ನು ನೆಟ್ಟು ಪೆÇೀಷಿಸಿ ಮಲ್ಲಿಗೆಯನ್ನು ಮಾರುಕಟ್ಟೆಯಲ್ಲಿ ಮಾರಿ ಯಶಸ್ವಿ ಸ್ವ-ಉದ್ಯಮಿ. ಹಾಗೂ ಸ್ವಾವಲಂಬಿಯಾಗಿ ಜೀವಿಸಬಹುದೆಂದು ಇತರರಿಗೆ ಮಾದರಿಯಾಗಿ ತೋರಿಸಿ ಸಮಾಜ ಸೇವೆಯಲ್ಲಿ ತೊಡಗಿರುವ ಇವರನ್ನು ಗುರುತಿಸಿ ಜೆಸಿಐ ಮಂಗಳಗಂಗೋತ್ರಿ, ಲವೀನಾ ದಾಂತಿ ಇವರನ್ನು ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಸಮ್ಮೇಳನದಲ್ಲಿ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಜೆ ಸಿ ಸದಾನಂದ ನಾವಡ, ವಲಯ ಅಧ್ಯಕ್ಷೆ ಸೌಜನ್ಯ ಹೆಗ್ಡೆ, ಸಂಯೋಜಕ ಸಮದ್ ಖಾನ್ ಉಪಾಧ್ಯಕ್ಷ ಜೆಸಿ ಗಿರೀಶ್ ಎಸ್ ಪಿ, ಜೆಸಿ ದರ್ಶಿತ್ ಶೆಟ್ಟಿ , ಜೆಸಿ ಶರತ್ ಕುಮಾರ್, ಜೆಸಿಐ ಕುಂದಾಪುರದ ಅಧ್ಯಕ್ಷ ವಿಜಯ ನರಸಿಂಹ ಐತಾಳ್, ಪೂರ್ವಾಧ್ಯಕ್ಷ ವಿಷ್ಣು ಕೆ ಬಿ, ಇನ್ನಿತರ ಗಣ್ಯರು ಉಪಸ್ಥಿತರಿದ್ದರು .