ನೀಟ್‌ನಲ್ಲಿ ಸಾಧಕರಾದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನ ಗ್ರಾಮೀಣರೇ ಸಾಧಕರಾಗಿ ಹೊರಹೊಮ್ಮಿರುವುದು ಶ್ಲಾಘನೀಯ : ಅನಂತರಾಮ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : – ನೀಟ್‌ನಲ್ಲಿ ಸಹ್ಯಾದ್ರಿ ಕಾಲೇಜಿನ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿರುವುದು ಶ್ಲಾಘನೀಯವಾಗಿದ್ದು , ವಿದ್ಯಾರ್ಥಿಜೀವನದಲ್ಲಿನ ನಿಮ್ಮ ನಗು ಶಾಶ್ವತವಾಗಿರಲು ಕಲಿಕೆಯಲ್ಲಿ ಶ್ರದ್ಧೆ , ಪರಿಶಮ ಇರಲಿ ಎಂದು ಹಿರಿಯ ಪತ್ರಕರ್ತ ಹಾಗೂ ಮನ್ವಂತರ ಪ್ರಕಾಶನದ ಸಂಸ್ಥಾಪಕ ಪಾ.ಶ್ರೀ.ಅನಂತರಾಮ್ ಕಿವಿಮಾತು ಹೇಳಿದರು . ನಗರದ ಸಹ್ಯಾದ್ರಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸಾಲಿನ ನೀಟ್ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು . ನೀಟ್ ಪರೀಕ್ಷೆ ನಿಮ್ಮ ಬದುಕಿನ ದಿಕ್ಕು ತೋರಿಸುತ್ತದೆ , ಮತ್ತು ಕಾಲೇಜಿನ ಕಿರಿಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದ್ದು , ನಿಮ್ಮ ಈ ಸಾಧನೆಗೆ ಅಹಂ ಬೇಡ , ಮತ್ತಷ್ಟು ಜವಾಬ್ದಾರಿ ಹೊತ್ತು ಮುನ್ನಡೆಯಿರಿ ಎಂದರು . ಜಿಲ್ಲೆಯಲ್ಲೇ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಸರುಗಳಿಸಿರುವ ಸಹ್ಯಾದಿ ಸಂಸ್ಥೆಯ ೯ ವಿದ್ಯಾರ್ಥಿಗಳು ನೀಟ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ , ಅದರಲ್ಲೂ ಎಲ್ಲರೂ ಗ್ರಾಮೀಣರೇ ಎಂಬುದು ಖುಷಿ ತರುವ ವಿಷಯ ಎಂದರು .
ಪೋಷಕರ ಆಶಯ ಈಡೇರಿಸಿ , ಮೆಡಿಕಲ್ ಇಂಜಿನಿಯರಿಂಗ್ ಮಾಡಿ ತಂದೆತಾಯಿಯನ್ನು ವೃದ್ಧಾಶ್ರಮಗಳಿಗೆ ಬಿಟ್ಟು ವಿದೇಶಗಳಿಗೆ ಹಾರುವ ಪ್ರಯತ್ನ ಬೇಡ , ಈ ದೇಶದಲ್ಲೇ ಸಾಧನೆ ಮಾಡಿ ಎ ೦ ದು ಸಲಹೆ ನೀಡಿದರು
.

ಕೋವಿಡ್ ನಿಂದಾಗಿ ಶೈಕ್ಷಣಿಕ ಹಿನ್ನಡೆ

ಪಾಸ್ತಾವಿಕವಾಗಿ ಮಾತನಾಡಿದ ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷ ಎಂ.ಉದಯಕುಮಾರ್ , ಕೋವಿಡ್ ಹೆಮ್ಮಾರಿಯಿಂದಾಗಿ ದೇಶದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ , ಇದರ ನಡುವೆಯೂ ಆನ್‌ಲೈನ್ ಶಿಕ್ಷಣ ಕಾಣಬೇಕಾಯಿತು ಎಂದರು . ಕೆಲವು ವಿದ್ಯಾರ್ಥಿಗಳು ಪೋಷಕರನ್ನು ವಂಚಿಸಿ ಆನ್‌ಲೈನ್ ತರಗತಿಗಳನ್ನು ಗಮನಿಸದೇ ಶೈಕ್ಷಣಿಕವಾಗಿ ಹಿನ್ನಡೆ ಅನುಭವಿಸಿದ್ದಾರೆ , ವಿದ್ಯಾರ್ಥಿಗಳು ಆನ್‌ಲೈನ್‌ ನೆಪವೊಡ್ಡಿ ಪರಿಶಮ ಹಾಕದಿದ್ದರೆ ಸಾಧನೆ ಅಸಾಧ್ಯ ಎಂದು ಎಚ್ಚರಿಸಿ , ಪರಿಸ್ಥಿತಿಗೆ ತಕ್ಕಂತೆ ನಾವು ಹೊಂದಿಕೊಳ್ಳಲೇಬೇಕಾಗಿದೆ ಎಂದರು . ಆನ್‌ಲೈನ್ , ಆಪ್‌ಲೈನ್ ಎರಡಕ್ಕೂ ಹೊಂದಾಣಿಕೆ ಇಂದು ಅಗತ್ಯವಾಗಿದೆ . ಕೋವಿಡ್ ನಮಗೆ ಈ ಪಾಠ ಕಲಿಸಿದೆ , ಆನ್‌ಲೈನ್‌ನಲ್ಲಿ ೧೮೦ ಟೆಸ್ಟ್ ಮಾಡಿದ್ದೇವೆ , ನಿರಂತರವಾಗಿ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದು , ಅವರ ಕಲಿಕೆಗೆ ಪ್ರೇರಣೆ ನೀಡಿದ್ದೇವೆ ಎಂದು ತಿಳಿಸಿದರು .

ನಿಮ್ಮ ಭವಿಷ್ಯ ನಿಮ್ಮಯ ಕೈಯಲ್ಲೇ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಜಿ.ವಿ.ಕೃಷ್ಣಪ್ಪ , ಆಪ್‌ಲೈನ್ ಶಿಕ್ಷಣವೇ ಕಲಿಕೆಗೆ ಪೂರಕ , ನೀವು ಮನೆಯಲ್ಲಿ ಓದುವುದಕ್ಕಿಂತ ತರಗತಿಯಲ್ಲಿ ಶ್ರದ್ಧೆಯಿಂದ ಪಾಠ ಕೇಳಿ ಅರ್ಥ ಮಾಡಿಕೊಂಡರೆ ಹೆಚ್ಚು ಉಪಯುಕ್ತ ಎಂದು ತಿಳಿಸಿದರು . ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲೇ ಇದೆ . ನಿಮ್ಮ ಹಣೆಬರಹ ನೀವೆ ಬದಲಿಸಿಕೊಳ್ಳಬೇಕು . ಕಠಿಣ ಪ್ರಶ್ನೆಗಳಿಗೆ ಉತ್ತರ ಸಿದ್ಧಪಡಿಸಿ ನೀವು ಓದುವ ಕೊಠಡಿಯಲ್ಲಿ ನೇತುಹಾಕಿ ದಿನವೂ ಗಮನಿಸುತ್ತಿರಿ ಎಂದು ಸಲಹೆ ನೀಡಿ , ಜಶಸಿಗೆ ಧೈರ್ಯವೂ ಮುಖ , ಎಂದು ತಿಳಿಸಿದರು ಸಹ್ಯಾದ್ರಿ ಕಾಲೇಜಿನ ಉಪಾಧ್ಯಕ್ಷ ಮಾರುತಿ ಸಿಂಗಿ , ವಂದನಾರ್ಪಣೆ ನಡೆಸಿಕೊಟ್ಟು, ಮುಂದಿನ ವರ್ಷ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಸಾಧನೆ ಮಾಡಲು ಈ ೯ ಸಾಧಕರು ಪ್ರೇರಣೆಯಾಗಲಿ ಎಂದು ಹಾರೈಸಿದರು .
ಸಹ್ಯಾದ್ರಿ ಕಾಲೇಜಿನಲ್ಲಿ ಸಾಧನೆ ಮಾಡಿ ಎಂಬಿಬಿಎಸ್‌ನಲ್ಲಿ ೫ ನೇ ಬ್ಯಾಂಕ್ ಗಳಿಸಿ ಇದೀಗ ಎಂಡಿ ಮುಗಿಸಿರುವ ಡಾ.ಮೋಹಿತ್‌ ಹಾಗೂ ಇದೇ ಕಾಲೇಜಿನ ವಿದ್ಯಾರ್ಥಿ ಡಾ.ಲೀನಾ , ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಿ , ಸೋಲು ಎದುರಾದರೂ ಅದನ್ನು ಮೆಟ್ಟಿನಿಂತು ಮತ್ತೆ ಗೆಲ್ಲುವ ಪ್ರಯತ್ನ ಮುಂದುವರೆಸಿ ಎಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು .

ಅವಿಭಜಿತ ಜಿಲ್ಲೆಗೆ ಚಂದನ್ ಪಥಮ

ಸಹ್ಯಾದ್ರಿ ಕಾಲೇಜಿನ ತಾಲ್ಲೂಕಿನ ಕುರುಗಲ್ ಗ್ರಾಮೀಣ ಭಾಗದ ವಿದ್ಯಾರ್ಥಿ ಕೆ.ಎಸ್‌ . ಚಂದನ್‌ ಕೆ.ಎಸ್ . ಶ್ರೀಲಕ್ಷ್ಮಿ ಹಾಗೂ ಶಂಕರಪ್ಪ ದಂಪತಿಗಳ ಮಗನಾಗಿದ್ದು ಈ ವಿದ್ಯಾರ್ಥಿಯು ಸಿಇಟಿ ಪರೀಕ್ಷಾ ಫಲಿತಾಂಶದಲ್ಲಿ ಅವಿಭಜಿತ ಕೋಲಾರ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲೆಯ ಕೀರ್ತಿಗೆ ಪಾತನಾಗಿದ್ದು , ತನ್ನ ಅನುಭವವನ್ನು ಹಂಚಿಕೊಂಡರು . ವಿದ್ಯಾರ್ಥಿಯು ಅಗಿಕಲರ್‌ ಬಿಎಸ್ಪಿಯಲ್ಲಿ ೧೧ ನೇಯ ಬ್ಯಾಂಕ್ , ಪಶುವೈದ್ಯಕೀಯ ವಿಭಾಗದಲ್ಲಿ ೩೭ ನಯ ,
ಬಿ ಫಾರ್ಮಾ ಹಾಗೂ ಪಾರ್ಮಾ ಡಿ ಯಲ್ಲಿ ೪೩ , ಇಂಜಿನಿಯರಿಂಗ್ ವಿಭಾಗದಲ್ಲಿ ೭೪ ನೇ ಬ್ಯಾಂಕ್‌ ಗಳಿಸಿದ್ದು , ೨೦೨೧ ರ ಎನ್‌ಇಟಿ ಪರೀಕ್ಷೆಯಲ್ಲಿ ೨೨೦ ಅಂಕಗಳಿಗೆ ಅಂಕಗಳಿಗೆ ೬೭೦ ಅಂಕಗಳನ್ನು ಪಡೆದು ಅಖಿಲಭಾರತ ಮಟ್ಟದಲ್ಲಿ ೪೪೭ ಬ್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ . ಉಳಿದಂತೆ ಕೋಲಾರ ಜಿಲ್ಲೆಗೆ ನೀಟ್‌ನಲ್ಲಿ ಉತ್ತಮ ಪಥಮ ಸ್ಥಾನ ಗಳಿಸಿರುವ ಕೆ.ಎನ್.ಹನುಮೇಗೌಡ , ಮುಳಬಾಗಲು ತಾಲೂಕು ಕೋಲಾರ ಜಿಲ್ಲೆಯ ಕಾಮನೂರು ಗ್ರಾಮದ ರೈತ ಕುಟುಂಬದವರಾಗಿದ್ದು , ಅವರೊಂದಿಗೆ ಇತರ ಸಾಧಕರಾದ ವರಲಕಿ , ಕೀರ್ತನಾ , ಕವಿತಾ , ಎಂ.ಶ್ರೀರಾಮ್ , ಆರ್.ಕುಶಲ , ಶ್ವೇತಾ , ಎ.ಬಿ. ಗಗನರನ್ನು ಸನ್ಮಾನಿಸಲಾಯಿತು . ಉಪನ್ಯಾಸಕ ವಿನಯ್ ಗಂಗಾಪುರ ಕಾರ್ಯಕ್ರಮ ನಿರೂಪಿಸಿ , ವಿದ್ಯಾರ್ಥಿಗಳ ಈ ಸಾಧನೆ ಶ್ರದ್ಧೆ , ಶಿಸ್ತು ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಸಾಕ್ಷೀಕರಿಸಿದೆ ಎಂದು ತಿಳಿಸಿದರು . ವಿದ್ಯಾರ್ಥಿನಿಯರಾದ ಸಾಯಿಮೇಘನಾ ಜೀವಿತಾ ಪ್ರಾರ್ಥಿಸಿದರು . ಉಪನ್ಯಾಸಕರಾದ ಹೆಚ್.ವಿ.ಮಹೇಶ್ ವಂದಿಸಿದರು
.