ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಗೋಪೂಜೆ ಕಾರ್ಯಕ್ರಮ

ವರದಿ:  ವಾಲ್ಟರ್  ಮೊಂತೇರೊ, ಬೆಳ್ಮಣ್ಣು


ಗೋವುಗಳು ಮನುಷ್ಯನ ಬದುಕಿನ ಅವಿಭಾಜ್ಯ ಅಂಗ – ಸತೀಶ್ ಪೂಜಾರಿ
ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ವತಿಯಿಂದ ಕುಂಟಲಗುಂಡಿಯಲ್ಲಿ ಗೋಪೂಜೆ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರಶಾಂತ್ ಪೂಜಾರಿ ವಹಿಸಿ ಮಾತಾನಾಡಿದವರು ಸನಾತನ ಹಿಂದೂ ಸಂಸ್ಕೃತಿಯಲ್ಲಿ ಗೋವುಗಳಿಗೆ ಪಾವಿತ್ರ್ಯ ಸ್ಥಾನವಿದ್ದು ಅವುಗಳು ಮುಕ್ಕೋಟಿ ದೇವರ ಆವಾಸ ಸ್ಥಾನವಾಗಿ ಬಿಂಬಿತವಾಗಿದೆ. ಯಾವ ದೇಶದಲ್ಲಿ ಗೋ ಸಂಪತ್ತನ್ನು ಸಂರಕ್ಷಣೆಗೆ ಒತ್ತು ನೀಡುತ್ತಾರೋ ಆ ದೇಶದಲ್ಲಿ ದಾರಿದ್ರ್ಯ ದೂರವಾಗಿ ಸುಭಿಕ್ಷೆಯಿಂದ ಕಂಗೊಳಿಸುತ್ತದೆ ಎಂದು ತಿಳಿಸಿದರು.
ತಾಯಿಯ ಹಾಲನ್ನು ಕುಡಿದು ಬೆಳೆವ ನಾವು ಸಾಯುವ ತನಕ ಗೋವಿನ ಹಾಲನ್ನು ಕುಡಿಯುತ್ತೇವೆ. ಕೇವಲ ಲಾಭನಷ್ಟದ ಲೆಕ್ಕಾಚಾರದಲ್ಲಿ ಗೋವನ್ನು ಸಾಕದೆ, ಮನುಕುಲದ ಕಾಮಧೇನುವಾಗಿ ನಾವೆಲ್ಲ ಪೂಜಿಸಬೇಕಾಗಿದೆ ಎಂದು ಸಂಘದ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ತಿಳಿಸಿದರು.
ಗೋವುಗಳು ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಜೀವನ ಪರ್ಯಂತ ನಮಗೆ ಹಾಲುಣಿಸುವ ಗೋಮಾತೆಗೆ ಋಣಿಯಾಗಿ ಬದುಕಬೇಕಿದೆ ಎಂದು ಸಂಘದ ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿಯವರು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ನಿಕಟ ಪೂರ್ವಾಧ್ಯಕ್ಷ ಬೋಳ ಉದಯ ಅಂಚನ್, ಪೂವಾಧ್ಯಕ್ಷರಾದ ರಘುವೀರ್ ಶೆಟ್ಟಿ, ರಾಜೇಶ್ ಕೋಟ್ಯಾನ್, ಅಬ್ಬನಡ್ಕ ಸತೀಶ್ ಪೂಜಾರಿ, ಕಾರ್ಯದರ್ಶಿ ಕಾಸ್ರಬೈಲು ಸುರೇಶ್ ಪೂಜಾರಿ, ಉಪಾಧ್ಯಕ್ಷ ಸುರೇಶ್ ಪೂಜಾರಿ ಅಬ್ಬನಡ್ಕ, ಜೊತೆ ಕಾರ್ಯದರ್ಶಿ ಪುಷ್ಪ ಕುಲಾಲ್, ಕೋಶಾಧಿಕಾರಿ ವೀಣಾ ಪೂಜಾರಿ, ಅಂತರಿಕ ಲೆಕ್ಕ ಪರಿಶೋಧಕರು, ಹರಿಪ್ರಸಾದ್ ಆಚಾರ್ಯ, ಸದಸ್ಯರಾದ ಹರೀಶ್ ಪೂಜಾರಿ ಗೋಳಿಕಟ್ಟೆ, ಲಲಿತಾ ಅಚಾರ್ಯ, ಪದ್ಮಶ್ರೀ ಪೂಜಾರಿ, ಸುಲೋಚನಾ ಕೋಟ್ಯಾನ್, ಆರತಿ ಕುಮಾರಿ, ಆಶ್ವಿನಿ ಪ್ರಭಾಕರ್, ಹರಿಣಾಕ್ಷಿ ಪೂಜಾರಿ, ಅಶ್ವಿನಿ ಪೂಜಾರಿ, ಕೀರ್ತನ್ ಕುಮಾರ್, ರಾಜೇಂದ್ರ ಶೆಟ್ಟಿಗಾರ್, ಪ್ರಶಾಂತ್ ಬೋಳ ಮೊದಲಾದವರಿದ್ದರು.