ಎಲ್ಲರನ್ನೂ ಒಗ್ಗೂಡಿಸಿಕೊಂಡು ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಬಗೆಹರಿಸುವೆ:ಸಮಾಜ ಸೇವಕ – ಕೆ.ಜಿ.ಎಫ್ ಬಾಬು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : ನನಗೆ ಜಾತಿ ಮುಖ್ಯ ಅಲ್ಲ,ಎಲ್ಲರನ್ನೂ ಒಗ್ಗೂಡಿಸಿಕೊಂಡು ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಬಗೆಹರಿಸುವೆ, ಮುಂದಿನ ದಿನಗಳಲ್ಲಿ ವೇಮಗಲ್ ಹೋಬಳಿಯಾದ್ಯಂತ ಇರುವ ಎಲ್ಲಾ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿ ಇದು ಒಂದು ದಿನದ ಸೇವೆ ಅಲ್ಲ. ನಾನಿರುವ ತನಕ ಮಕ್ಕಳಿಗೊಸ್ಕರ ನನ್ನ ಸೇವೆ‌ ಇದೇ ರೀತಿ ಮುಂದುವರೆಸುವೆ ಎಂದು ಸಮಾಜ ಸೇವಕ ಹಾಗೂ ಅಫ್ನಾ ಕಂನ್ಸಟ್ರಕ್ಷನ್ ಪ್ರೈವೇಟ್ ಲಿ ನ ಮ್ಯಾನೇಜಿಂಗ್ ಡೈರೆಕ್ಟರ್ ಕೆ.ಜಿ.ಎಫ್. ಡಿ. ಬಾಬು ತಿಳಿಸಿದರು.
ಅವರು ಮಂಗಳವಾರ ವೇಮಗಲ್ ಹೋಬಳಿಯ ಕ್ಯಾಲನೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಎಲ್ಲಾ ಮಕ್ಕಳಿಗೆ ತಲಾ 500 ರೂ ಗಳನ್ನು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಿದ್ಯಾ ಪ್ರೋತ್ಸಾಹ ಧನ ಹಾಗೂ ನೋಟ್ ಪುಸ್ತಕಗಳನ್ನು
ವಿತರಿಸಿ ಮಾತನಾಡಿ ನಾನು ವಿದ್ಯೆಯನ್ನು ಕಲಿಯಲಿಲ್ಲ ನಮ್ಮ ಕ್ಷೇತ್ರದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ವಿದ್ಯಾ ಪ್ರೋತ್ಸಾಹ ಧನ ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವುದಾಗಿ ಹೇಳಿದರು.
ಕೋಲಾರ ಕ್ಷೇತ್ರದ ಕಷ್ಟದಲ್ಲಿ ಇರುವಂತಹ ವ್ಯಕ್ತಿಗಳಿಗೆ ನನ್ನ ಕೈಯಿಂದ ಆಗುವ ಸಹಾಯವನ್ನು ಮಾಡಬೇಕು, ಎನ್ನುವ ಉದ್ದೇಶದಿಂದ ಈ ಸಮಾಜ ಸೇವೆಯನ್ನು ಪ್ರಾರಂಭ ಮಾಡಿದ್ದು, ನನ್ನ ಕಂಪನಿಯಲ್ಲಿ ಬರುವ ಆದಾಯದ ಸ್ವಲ್ಪ ಭಾಗವನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೀಡುವುದಾಗಿ ತಿಳಿಸಿದರು.
ಭಾರತೀಯ ದಲಿತ ಸೇನೆ ರಾಜ್ಯಾಧ್ಯಕ್ಷ ದಲಿತ್ ನಾರಾಯಣಸ್ವಾಮಿ ಮಾತನಾಡಿ,
ಕೆ.ಜಿ.ಎಫ್ ಬಾಬು ಕೊಡುಗೈ ದಾನಿಯಾಗಿ ಆಗಮಿಸಿರುವುದು ನಮ್ಮಪುಣ್ಯ. ಸೇವಾ ಮನೋಭಾವದಿಂದ ಸೇವೆ ಸಲ್ಲಿಸಿದಾಗ ಮಾತ್ರ ಜನರ ಮನಸ್ಸು ಗೆಲ್ಲಲು ಸಾಧ್ಯ.ರಾಜಕೀಯ ನಾಯಕರು ಸಾರ್ವಜನಿಕರಿಗೆ ಸಹಾಯ ಮಾಡಲು ಮುಂದಾಗಿಲ್ಲ.ಇಂತಹ ಸಂದರ್ಭದಲ್ಲಿ ಬಾಬು ಸೇವೆ ಸಲ್ಲಿಸಲು ಮುಂದಾಗಿದ್ದಾರೆ. ಅವರು ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ರಾಜಕೀಯವಾಗಿ ಶಕ್ತಿ ತುಂಬಬೇಕು ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಎಸ್ .ಡಿ. ಎಂ. ಸಿ. ಅಧ್ಯಕ್ಷ ನಾರಾಯಣಮೂರ್ತಿ,ನರಸಾಪುರ ಸೈಯದ್ ಪಾಷ, ರಾಮಸಂದ್ರ ಕುಮಾರ್, ಗ್ರಾಪಂ ಉಪಾಧ್ಯಕ್ಷೆ ರತ್ನಮ್ಮ ನಾರಾಯಣಸ್ವಾಮಿ, ಗ್ರಾ.ಪಂ‌.ಸದಸ್ಯರುಗಳಾದ ಶೇಕ್ ಮಹಮ್ಮದ್( ಬಾಬು) ರಾಮಣ್ಣ, ರಾಜೇಂದ್ರ ಪ್ರಸಾದ್, ಮಂಜುನಾಥ್, ಲೋಕೇಶ್, ರಮೇಶ್ ಬಾಬು, ನಳಿನ ಪಿಡಿಓ ಮುನಿರಾಜು, ಅಪ್ಸರ್, ಜಾಪರ್, ಜಾವಿದ್ ಖಾನ್, ‌ಎಸ್ ಡಿ ಎಂಸಿ ಅಧ್ಯಕ್ಷರಾದ ನಾರಾಯಣಮೂರ್ತಿ. ಕ್ಯಾಲನೂರು ಪ್ರಕಾಶ್, ಕಲ್ಪನ, ಮುನಿರಾಜು, ಸಂದೇಶ್, ಅಜೀಂ,‌ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ್.‌ ಗಂಗಾಧರ ಮೂರ್ತಿ, ರಾಮಲಿಂಗಪ್ಪ, ವೇಮಗಲ್ ಕಾಲೇಜು ಪ್ರಾಂಶುಪಾಲ ಮುನಿಕೃಷ್ಣಪ್ಪ, ಶಾಲಾ ವಿದ್ಯಾರ್ಥಿಗಳು, ಗ್ರಾಮದ ಮುಖಂಡರು, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು