೫ ದಶಕಗಳ ಗುರುಭವನದ ಕನಸು ನನಗಾಗಿಸಲು ಸರ್ವ ಪ್ರಯತ್ನ ನ .೧೪ ಶಂಕುಸ್ಥಾಪನೆ , ೨೦೨೩ ಕ್ಕೆ ಉದ್ಘಾಟನೆಯ ಗುರಿ ಡಿಡಿಪಿಐ ನಾಗೇಶ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಗುರುಭವನ ನಿರ್ಮಾಣದ ೫ ದಶಕಗಳ ಕನಸು ನನಸಾಗಿಸಲು ಪ್ರತಿಯೊಬ್ಬರೂ ಕೈಜೋಡಿಸಿ , ನ .೧೪ ಕ್ಕೆ ಶಂಕುಸ್ಥಾಪನೆ ಮತ್ತು ೨೦೨೩ ರ ಸೆ .೫ ಕ್ಕೆ ಉದ್ಘಾಟನೆಗೆ ಕಾಲಮಿತಿಯಡಿ ಕೆಲಸ ಮಾಡೋಣ , ಈ ಸಂಬಂಧ ನ .೨ ರಂದು ಜಿಲ್ಲಾಧಿಕಾರಿಗಳನ್ನು ಭೇಟಿಯಾಗೋಣ ಎಂದು ಡಿಡಿಪಿಐ ಎಸ್.ಜಿ.ನಾಗೇಶ್ ತಿಳಿಸಿದರು .
ಶನಿವಾರ ನಗರದ ಸೌಟ್ ಭವನದಲ್ಲಿ ನಡೆದ ಜಿಲ್ಲಾ ಗುರುಭವನ ನಿರ್ಮಾಣ ಹಾಗೂ ನಿರ್ವಹಣಾ ಸಮಿತಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು . ಯಾವುದೇ ಒಳ್ಳೆಯ ಕೆಲಸ ಮಾಡಲು ಕಾಲಮಿತಿ ಮುಖ್ಯ ಈ ನಿಟ್ಟಿನಲ್ಲಿ ಎಲ್ಲಾ ಅಡ್ಡಿ , ಆತಂಕಗಳನ್ನು ನಿವಾರಿಸಿ ನ .೧೪ ಮಕ್ಕಳ ದಿನಾಚರಣೆಯಂದು ಬ್ರಾಹ್ಮ ಮಹೂರ್ತದಲ್ಲಿ ಗುದ್ದಲಿ ಪೂಜೆ ನೆರವೇರಿಸುವ ಸಂಕಲ್ಪ ಮಾಡಿ ಎಂದು ಸಮಿತಿಯ ಎಲ್ಲಾ ಸದಸ್ಯರಿಗೆ ಕಿವಿಮಾತು ಹೇಳಿದರು .

೧೦ ಕೋಟಿ ಅಂದಾಜು ನ .೨ ರಂದು ಡಿಸಿ ಭೇಟಿ

ಸುಸಜ್ಜಿತ ಗುರುಭವನ ನಿರ್ಮಾಣಕ್ಕೆ ೧೦ ಕೋಟಿ ರೂ ಅಂದಾಜು ವೆಚ್ಚವಾಗಲಿದ್ದು , ಈ ಸಂಬಂಧ ನ .೨ ರಂದು ಸಮಿತಿ ಕಾರ್ಯದರ್ಶಿ , ಸದಸ್ಯರೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಭವನ ನಿರ್ಮಾಣದ ಕುರಿತು ಚರ್ಚಿಸಲು ವಿಧಾನಪರಿಷತ್ ಸದಸ್ಯರು ಹಾಗೂ ಶಾಸಕರ ಸಭೆ ನಡೆಸಲು ಮನವಿ ಮಾಡೋಣ ಎಂದರು .
ಜತೆಗೆ ಡಿಸಿಯವರ ಅಧ್ಯಕ್ಷತೆಯಲ್ಲಿ ಜಿಲ್ಲೆಯಲ್ಲಿರುವ ಕೈಗಾರಿಕೆಗಳ ಮುಖ್ಯಸ್ಥರ ಸಭೆ ನಡೆಸುವ ಮೂಲಕ ಸಿಎಸ್‌ಆರ್‌ ನಿಧಿ ಸಂಗ್ರಹಿಸಿ ಗುರುಭವನ ನಿರ್ಮಾಣದ ಕನಸು ನನಸಾಗಿಸೋಣ , ಶಿಕ್ಷಕರ ಕಲ್ಯಾಣ ನಿಧಿಯ ನೆರವು ಪಡೆಯೋಣ , ಇದಕ್ಕೆ ಎಲ್ಲಾ ಶಿಕ್ಷಕ ಸಂಘಟನೆಗಳ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು . ಒಳ್ಳೆಯ ಕೆಲಸಕ್ಕೆ ವ್ಯಕ್ತಿ ಮುಖ್ಯವಲ್ಲ , ವ್ಯವಸ್ಥೆ ಮುಖ್ಯ , ಈಗಾಗಲೇ ಗುರುಭವನ ನಿರ್ಮಿಸುವ ಸ್ಥಳದಲ್ಲಿರುವ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಒಪ್ಪಿಗೆ ಸಿಕ್ಕಿದೆ , ಅಲ್ಲಿನ ಹಳೆ ಕಟ್ಟಡ ಕೆಡವಲೂ ಲೋಕೋಪಯೋಗಿ ಇಲಾಖೆ ಅನುಮತಿ ನೀಡಿದೆ , ಆ ಕಟ್ಟಡದಲ್ಲಿನ ಮರ , ಹಲಗೆಗಳನ್ನು ನಿಯಮಾನುಸಾರ ಹರಾಜು ಪ್ರಕ್ರಿಯೆ ನಡೆಸಿ ಅದರಿಂದ ಬಂದ ಹಣವನ್ನು ಸರ್ಕಾರಕ್ಕೆ ಸಂದಾಯ ಮಾಡುವ ಕಾರ್ಯ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು .
ಶಿಕ್ಷಣಾಧಿಕಾರಿ ಸಿ.ಆರ್‌.ಅಶೋಕ್ ಸ್ವಾಗತಿಸಿ , ಡಿಡಿಪಿಐ ಅವರ ಕ್ರಿಯಾಶೀಲತೆಯಿಂದ ಗುರುಭವನ ನಿರ್ಮಿಸುವ ಸಂಕಲ್ಪ ಇಂದು ಎಲ್ಲರಲ್ಲೂ ಮೂಡಿದೆ , ಈ ಕನಸು ನನಸಾಗಿಸಲು ಸಂಘಟನೆಗಳು ಕೆಲಸ ಮಾಡಬೇಕು ಎಂದರು . ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ ಮಾತನಾಡಿ , ಡಿಸಿಯವರಿಗೆ ಮನವಿ ಮಾಡಿ ಗುರುಭವನ ಕಟ್ಟಲು ಕೈಗಾರಿಕೆಗಳ ಸಿಎಸ್‌ಆರ್ ನಿಧಿ ಪಡೆಯಬೇಕು , ವಿಧಾನಪರಿಷತ್ ಸದಸ್ಯರ ಕ್ಷೇತಾಭಿವೃದ್ಧಿಯ ನೆರವು , ಕೆಲವು ಶಿಕ್ಷಕರು ತಮ್ಮ ತಂದೆ , ತಾಯಿ ಹೆಸರಿನಲ್ಲಿ ಭವನ ಕಾಮಗಾರಿಗೆ ಅಜೀವ ಸದಸ್ಯತ್ವದ ಹೆಸರಲ್ಲಿ ತಲಾ ೧ ಲಕ್ಷ ನೀಡಲು ಮುಂದ ಬಂದಿದ್ದು , ಅದನ್ನು ಸಂಗ್ರಹಿಸಬೇಕು ಎಂದರು .
ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಯ್ಯಗೌಡ , ಗುರುಭವನ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದೇವೆ , ಎಲ್ಲರನ್ನು ಒಟ್ಟಾಗಿ ಕರೆದೊಯ್ದು , ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಕಾಮಗಾರಿ ಆರಂಭಿಸಲು ಸರ್ವರೀತಿಯಲ್ಲೂ ಪ್ರಯತ್ನಿಸವುದಾಗಿ ತಿಳಿಸಿ , ತಾವೂ ಒಂದು ಲಕ್ಷ ದೇಣಿಗೆ ನೀಡುವುದಾಗಿ ನುಡಿದರು . ಸಮಿತಿ ಕಾರ್ಯದರ್ಶಿ ಹಾಗೂ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ , ಡಿಡಿಪಿಐ ಎಸ್.ಜಿ.ನಾಗೇಶ್ ಅವರು ಇತರೆಲ್ಲಾ ಅಧಿಕಾರಿಗಳಿಗಿಂತ ಭಿನ್ನವಾಗಿದ್ದು , ಗುರುಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ , ಅವರ ಈ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಅಭಿನಂದಿಸಿ , ಅಗತ್ಯವಾದಲ್ಲಿ ಶಿಕ್ಷಕರ ಒಂದು ದಿನದ ವೇತನ ಭವನ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡೋಣ ಎಂದರು . ಶಿಕ್ಷಕರ ಸಂಘದ ಚಾಮುಂಡೇಶ್ವರಿ , ತಮ್ಮ ತಂದೆ ಹೆಸರಲ್ಲಿ ೧ ಲಕ್ಷ ರೂ ದೇಣಿಗೆ ನೀಡುವುದಾಗಿ ತಿಳಿಸಿದರೆ , ನೌಕರರ ಕ್ರೀಡಾಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಇಂಚರನಾರಾಯಣಸ್ವಾಮಿ , ನಾಟಕ ಪ್ರದರ್ಶನದ ಮೂಲಕ ಬಂದ ಆಧಾಯವನ್ನು ಭವನಕ್ಕೆ ನೀಡುವುದಾಗಿ ಭರವಸೆ ನೀಡಿದರು . ಸಿ.ಬೈರೇಗೌಡ ಇಂಜಿನಿಯರಿಂಗ್ ಕಾಲೇಜಿನ ಡಾ.ಶಿವರಾಜ್ , ಗುರುಭವನ ನಿರ್ಮಾಣಕ್ಕೆ ನಕ್ಷೆ ಮಾಡಿಕೊಡುವುದರ ಜತೆಗೆ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು . ಸಭೆಯಲ್ಲಿ ಇಲಾಖೆಯ ಅಧೀಕ್ಷಕರಾದ ಮಂಜುನಾಥಗೌಡ , ವಿವಿಧ ತಾಲ್ಲೂಕುಗಳ ಗುರುಭವನ ಸಮಿತಿಯ ಪದಾಧಿಕಾರಿಗಳಾದ ರಾಜಪ್ಪಮಾಲೂರು ಸುಧಾಕರ್ , ಮುಳಬಾಗಿಲು ಜಗದೀಶ್ , ಮುಳಬಾಗಿಲು ಜಿ.ಸಿ.ನಾಗರಾಜ್ , ಶ್ರೀನಿವಾಸಪುರದ ವರದರೆಡ್ಡಿ , ನಿವೃತ್ತ ಶಿಕ್ಷಕ ನಂಜುಂಡಪ್ಪ ಮತ್ತಿತರರು ಗುರುಭವನ ನಿರ್ಮಾಣಕ್ಕೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುವ ಭರವಸೆ ನೀಡಿ , ಈ ನಿಟ್ಟಿನಲ್ಲಿ ಡಿಡಿಪಿಐ ನಾಗೇಶ್ ಅವರ ಬದ್ಧತೆ , ಇಚ್ಚಾಶಕ್ತಿಯನ್ನು ಶ್ಲಾಘಿಸಿದರು .
ಸಭೆಯಲ್ಲಿ ಡಿಡಿಪಿಐ ಕಚೇರಿಯ ಸಾಂಖ್ಯಿಕ ಅಧಿಕಾರ ರವೀಂದ್ರ , ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್ , ಕಚೇರಿ ಅಧೀಕ್ಷಕ ಗೋವಿಂದಗೌಡ , ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ಎಂ.ಎನ್.ಶ್ರೀನಿವಾಸಮೂರ್ತಿ , ಎಸ್.ನಾರಾಯಣಸ್ವಾಮಿ , ನಾಗರಾಜ್ , ಮಾರ್ಕಂಡೇಶ್ವರ್ , ಮುರಳಿ , ಶರಣಪ್ಪ , ಅಧಿಕಾರಿಗಳಾದ ಸುಲೋಚನಾ , ವಸಂತ , ಕೆ.ವಿ.ನಾರಾಯಣಸ್ವಾಮಿ , ಮದಿಅಳಗನ್ ಮತ್ತಿತರರು ಉಪಸ್ಥಿತರಿದ್ದರು .