ತ್ರಿಪುರಾ ಹಿಂಸಾಚಾರದಲ್ಲಿ ಬಿಜೆಪಿಯೇತರ ಪಕ್ಷಗಳ ಮೌನ ಅಪಾಯಕಾರಿ ಎಸ್.ಡಿ.ಪಿ.ಐ ಆಕ್ರೋಶ

ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಈಶಾನ್ಯ ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರನ್ನು ಗುರಿಯಾಗಿಸಿ ನಡೆಯುತ್ತಿರುವ ವ್ಯಾಪಕ ಹಿಂಸಾಚಾರದ ವಿಷಯದಲ್ಲಿ ಬಿಜೆಪಿಯೇತರ ಪಕ್ಷಗಳ ದಿವ್ಯ ಮೌನ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಬೆಳವಣಿಗೆ ಎಂದು ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಷಾ ಉಸ್ ಜಮಾ ತಿಳಿಸಿದ್ದಾರೆ .
ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು , ಹಿಂದುಳಿದ , ದೀನದಲಿತ ದಲಿತ ಅಲ್ಪಸಂಖ್ಯಾತ ಸಮುದಾಯ ಪರವಾಗಿ ನಿಲ್ಲಬೇಕಾದ ಮುಖ್ಯವಾಹಿನಿ ಜಾತ್ಯತೀತ ಪಕ್ಷಗಳ ಮೌನ ಅಘಾತಕಾರಿ ಎಂದು ಬಣ್ಣಿಸಿದ ಅವರು , ತ್ರಿಪುರಾದಲ್ಲಿ ಮುಸ್ಲಿಮರ ಮೇಲೆ ಸಂಘಪರಿವಾರ ಪ್ರೇರಿತ ಫ್ಯಾಶಿಸ್ಟ್ ಹಿಂಸಾಚಾರ ಶೋಚನೀಯ ಎಂದು ತಿಳಿಸಿದ್ದಾರೆ . ಮಾತ್ರವಲ್ಲ ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲಿನ ಹಿಂಸಾಚಾರಕ್ಕೆ ಪ್ರತಿಕಾರವಾಗಿ ಭಾರತದ ಮುಸ್ಲಿಮರ ಮೇಲೆ ದಾಳಿ ನಡೆಸುವಾಗ ಬಿಜೆಪಿಯೇತರ ಪಕ್ಷಗಳು ಕಣ್ಣುಮುಚ್ಚಿ ಕುಳಿತಿರುವುದು ಸಂವಿಧಾನ ಮೌಲ್ಯಕ್ಕೆ ಅಪಚಾರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು .
ದೇಶದಲ್ಲಿ ಅಸ್ತಿತ್ವದಲ್ಲಿರುವ ಜಾತ್ಯತೀತ ಮುಖವಾಡದ ಪಕ್ಷಗಳು ಮುಸ್ಲಿಮರನ್ನು ಕೇವಲ ಮತಬ್ಯಾಂಕ್ ಆಗಿ ಉಪಯೋಗಿಸುತ್ತಿರುವುದು ದುರಂತ ಮತ್ತು ಪ್ರಜಾಪಭುತ್ವ ವ್ಯವಸ್ಥೆಗೆ ನೀಡುವ ಕೊಡಲಿಯೇಟು ಎಂದು ವಿಷಾದಿಸಿದರು .
ಕಳೆದ ವಾರ ನೆರೆಯ ಬಾಂಗ್ಲಾದೇಶದ ದುರ್ಗಾ ಪೂಜೆಯಲ್ಲಿ ಮೂರ್ತಿಯೊಂದರ ಪದತಳದಲ್ಲಿ ಕು‌ ಆನ್ ಇಟ್ಟ ಹಿನ್ನೆಲೆಯಲ್ಲಿ ಉಂಟಾದ ಗಲಭೆಯಲ್ಲಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲಿನ ದಾಳಿಯನ್ನು ಮುಂದಿಟ್ಟುಕೊಂಡು ತಿಮರಾದ ಮುಸ್ಲಿಮರ ಮೇಲಿನ ದಾಳಿ ಖಂಡನೀಯ . ಈ ನಿಟ್ಟಿನಲ್ಲಿ ಮರಾ ಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ .
ಎಸ್.ಡಿ.ಪಿ.ಐ ಪ್ರಧಾನ ಕಾರ್ಯದರ್ಶಿ ಶಾರೂಕ್‌ ಪಾಷ , ಉಪಾಧ್ಯಕ್ಷ ಯಾಸೀನ್‌ಖಾನ್ , ಮೌಲಾನಾ ವಜೀರ್‌ ಅಹಮದ್‌ , ಪಿರದೋಸ್‌ಪಾಷ , ರಹಮತ್ತುಲ್ಲಾಖಾನ್ ಇನ್ನಿತರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು .