ಶ್ರೀನಿವಾಸಪುರ ಪ್ರತಿ ಮನೆ ಮನೆಗೆ ಅಗತ್ಯವಾದ ಕುಡಿಯುವ ನೀರು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ:ಅಮಿತ್ ಶುಕ್ಲಾ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ ಪ್ರತಿ ಮನೆ ಮನೆಗೆ ಅಗತ್ಯವಾದ ಕುಡಿಯುವ ನೀರು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ ಎಂದು ರಾಷ್ರ್ಟಿಯ ಜಲ ಜೀವನ್ ಮಿಷನ್ ನಿರ್ಧೇಶಕರಾದ ಅಮಿತ್ ಶುಕ್ಲಾ ತಿಳಿಸಿದರು.
ತಾಲ್ಲೂಕಿನ ಹೊದಲಿ ಗ್ರಾಮ ಪಂಚಾಯತಿ ಸೇರಿದ ಆವಲಕುಪ್ಪ ಗ್ರಾಮಕ್ಕೆ ಬೇಟಿ ನೀಡಿ ಸರ್ಕಾರಿ ಶಾಲೆಯಲ್ಲಿ ಅಳವಡಿಸಿರುವ ನೀರಿನ ಗುಣಮಟ್ಟ ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ನೀರಿನ ಪ್ರಾಮುಖ್ಯತೆ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ಮಾತನಾಡಿದ ಅಮಿತ್ ಶುಕ್ಲಾ ನಮ್ಮ ಉದ್ದೇಶ ಪ್ರತಿಯೊಂದು ಮನೆ ಮನೆಗೂ ಶುದ್ಧ ಕುಡಿಯುವ ನೀರನ್ನ ಪೂರೈಸಿ ಜನರ ಆರೋಗ್ಯವನ್ನ ಕಾಪಾಡುವುದೆ ನಮ್ಮ ಉದ್ದೇಶ ಪ್ಲೋರಿಡ್ ರಹಿತ ನೀರಿನ್ನ ಗ್ರಾಮದ ಜನತೆಗೆ ಒದುಗಿಸುವ ಜೊತೆಗೆ ಪ್ರತಿಯೊಬ್ಬರೂ ಶುದ್ಧವಾದ ನೀರನ್ನು ಕುಡಿಯ ಬೇಕು ಎಂದರು.
ಹೊದಲಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾದ ಕೃಷ್ಣ ಹಾಗೂ ಜಲಗಾರರಿಂದ ಸಂಪೂರ್ಣವಾಗಿ ನೀರಿನ ಮಾಹಿತಿಯನ್ನು ಪಡೆದು ದಿನಕ್ಕೆ ಎಷ್ಟು ಬಾರಿ ನೀರನ್ನು ಗ್ರಾಮಕ್ಕೆ ಬಿಡುತ್ತಿದ್ದೀರಿ ನೀರು ಶುದ್ಧವಾಗಿದೆಯೇ ಎಂದು ಸಂಪೂರ್ಣವಾಗಿ ಮಾಹಿತಿಯನ್ನು ಪಡೆದು. ಅಂತರ್ಜಲ ಮಟ್ಟವನ್ನು ಅಭಿವೃದ್ಧಿಪಡಿಸಲಾಗುವುದು ಎಲ್ಲ ಇಲಾಖೆಗಳು ಸೇರಿ ಯೋಜನೆಯನ್ನು ರೂಪಿಸಬೇಕು ಮುಂದಿನ 30-40 ವರ್ಷಗಳಿಗೆ ನೀರಿನ ಲಭ್ಯತೆಯ ಬಗ್ಗೆ ಗಮನ ಅರಿಸಬೇಕು ಬರಪೀಡತÀ ಪ್ರದೇಶವಾಗಿರುವುದರಿಂದ ಇಸ್ರೇಲ್‍ನ ಮಾದರಿ ಹನಿ ನೀರಾವರಿ ಪದ್ಧತಿಯನ್ನು ರೈತರು ಅಳವಡಿಸಿಕೊಂಡು ಉತ್ತಮವಾಗಿ ಕೃಷಿಯನ್ನ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ಬೋರ್‍ವೆಲ್‍ಗಳ ಮರು ಪೂರ್ಣ ಮಾಡಲು ಯೋಜನೆಗಳನ್ನ ರೂಪಿಸಿಕೊಳ್ಳಬೇಕು ಪ್ಲೋರಿಡ್ ಅಂಶ ಇರುವಕಡೆ ಚೆಕ್ಕು ಡ್ಯಾಮ್‍ಗಳನ್ನು ನಿರ್ಮಿಸಿ ನೀರನ್ನ ಇಂಗಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರಿಯ ಜಲಜೀವನ್ ಮಿಷನ್ ಯೋಜನೆಯ ಮ್ಯಾನೇಜರ್ ಹಾಗೂ ಸ್ಪೆಷಲಿಸ್ಟ್ ಅನೂಪ್ ದ್ವಿವೇದಿ, ಸ್ವಚ್ಛ ಭಾರತ್ ಜಿಲ್ಲಾ ಸಂಯೋಜಕ ಜಗದೀಶ್, ಇ.ಇ.ಮಂಜುನಾಥ್, ಹೊದಲಿ ಗ್ರಾಮ ಪಂಚಾಯತಿ ಅಧ್ಯಕ್ಷಿಣಿ ಗೀತಾ ರಾಮಚಂದ್ರ, ಗ್ರಾಮ ಪಂಚಾಯತಿ ಸದಸ್ಯ ಗೋವಿಂದರೆಡ್ಡಿ, ಡಿ ಪಿ ಎಂ ಹರೀಶ್, ಎ ಇ ಇ ನಾರಾಯಣಸ್ವಾಮಿ, ನರೇಗ ಯೋಜನೆ ನಿರ್ದೇಶಕ ರಾಮಪ್ಪ, ಇಂಜಿನಿಯರ್‍ಗಳಾದ ಸಂತೋಷ್, ಜೆ ಇ ಕೃಷ್ಣಾಚಾರಿ, ಕೆ ಟಿ ನಾಗರಾಜ್, ಜಲಮಿಷನ್ ಅಧಿಕಾರಿಗಳಾದ ಕೃಷ್ಣಮೂರ್ತಿ ಆವಲಕುಪ್ಪ ಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ಸಿಂಗ್, ಆವಲಕುಪ್ಪ ಗ್ರಾಮದ ಹಿರಿಯ ಮುಖಂಡ ಜಯರಾಮರೆಡ್ಡಿ, ಕೃಷ್ಣಾರೆಡ್ಡಿ, ಬಾಲಾಂಜಿ, ನರೇಶ್, ಜಲಗಾರ ಶ್ರೀನಿವಾಸ್, ಅಂಗನವಾಡಿ ಕಾರ್ಯಕರ್ತೆ ಪ್ರೇಮ, ಆಶಾ ಕಾರ್ಯಕರ್ತೆ ವೆಂಕಟರತ್ನಮ್ಮ, ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.