ಅಂಚಪಲ್ಲಿ ಚೌಡೇಶ್ವರಿ ದೇವಾಲಯ ಜೀಣೋದ್ದಾರ, ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡಲಾಗುವುದು : ಗುಂಜೂರು ಆರ್. ಶ್ರೀನಿವಾಸರೆಡ್ಡಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ ;ಅಂಚಪಲ್ಲಿ ಗ್ರಾಮದ ಚೌಡೇಶ್ವರಿ ದೇವಾಲಯ ಜೀಣೋದ್ದಾರಕ್ಕೆ ಹಾಗೂ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಸಮಾಜ ಸೇವಕ ಗುಂಜೂರು ಆರ್. ಶ್ರೀನಿವಾಸರೆಡ್ಡಿ ತಿಳಿಸಿದರು.
ತಾಲ್ಲೂಕಿನ ಯಲ್ದೂರು ಹೋಬಳಿ, ಆಚಂಪಲ್ಲಿ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಹಾಗೂ ದೀಪಯೋತ್ಸವ ಕಾರ್ಯಕ್ರಮವನ್ನು ಮಾಡಲಾಗಿತ್ತು. ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀನಿವಾಸರೆಡ್ಡಿ ಈಗಾಗಲೇ ತಾಲ್ಲೂಕಿನಲ್ಲಿ ನನ್ನ ಕೈಯಾದಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇನೆ. ಜೊತೆಗೆ ಕಷ್ಟದಲ್ಲಿ ಇದ್ದವರಿಗೆ ನೇರವಾಗುವ ಕೆಲಸ ಮಾಡಿದ್ದೇನೆ. ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾ ವಾರ್ಡ್ ನೂರಾನಿ ಮಸೀದಿ ಕಟ್ಟಡ ನಿರ್ಮಾಣಕ್ಕೆ ಹಣಕಾಸಿನ ನೇರವನ್ನು ಒದಗಿಸಿದ್ದೇನೆ. ಅಚಂಪಲ್ಲಿ ಶ್ರೀ ಚೌಡೇಶ್ವರಿ ದೇವಾಲಯ ಅಭಿವೃದ್ದಿಗೆ ಹಣಕಾಸಿನ ನೇರವನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಮದಲ್ಲಿ ಎಲ್ಲರೂ ಸೇರಿ ದೇವರಿಗೆ ದೀಪೋತ್ಸವನ್ನು ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ದೇವರು ದೆಯದಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿ ಕೆರೆಗಳು ತುಂಬಿವೆ. ರೈತರಿಗೆ ಅನುಕೂಲವಾಗಲಿದೆ ನಾನು ಈ ಕ್ಷೇತ್ರದ ಅಭಿವೃದ್ದಿಗೆ ಹಗಲಿರಳು ಶ್ರಮಿಸುತ್ತೇನೆ. ನಿಮ್ಮ ಸಹಕಾರ ನನಗೆ ನೀಡಬೇಕೆಂದು ಕೋರುತ್ತಾ ನಿಮ್ಮಜೊತೆ ಮುಂದಿನ ದಿನಗಳಲ್ಲಿ ಸದಾ ಇರುತ್ತೇನೆ ಎಂದ ಇವರು ಮುಂಬರುವ ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದರು.
ವಕೀಲ ಅಚಂಪಲ್ಲಿ ಜಯರಾಮ್‍ಗೌಡ ಮಾತನಾಡಿ ಚೌಡೇಶ್ವರ ದೇವಾಲಯವು ಪುರಾತನ ದೇವಾಲವಾಗಿದ್ದು, ಇಂದು ವಿಶೇಷ ಪೂಜೆಯನ್ನು ಹಮ್ಮಿಕೊಂಡಿದ್ದೇವೆ. ಸುಮಾರು 15 ವರ್ಷಗಳಿಂದ ನಮ್ಮ ಕರೆಯು ತುಂಬಿಲ್ಲ. ಮಳೆಯ ಕಾರಣದಿಂದ ನಮ್ಮ ಆಚಂಪಲ್ಲಿ ಗ್ರಾಮದ ಕೆರೆ ತುಂಬಿದ್ದು ನಮಗೆ ಸಂತಸವಾಗಿದೆ. ಈ ಕೆರೆಯು ಸುಮಾರು 7 ಹಳ್ಳಿಗಳಿಗೆ ಸಂಬಂದಪಟ್ಟ ಕೆರೆಯಾಗಿದ್ದು ಇಂದು ಇದಕ್ಕೆ ಪೂಜೆಯನ್ನು ಸಲ್ಲಿಸಿ ದೇವಿಗೆ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಈ ಒಂದು ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜಶೇಖರ್‍ರೆಡ್ಡಿ. ಉನಿಕಿಲಿ ಬೈರಪ್ಪ, ಶ್ರೀರಾಮ್, ಸುನೀಲ್, ಶಂಷೀರ್, ಅಚಂಪಲ್ಲಿ ಗ್ರಾಮಸ್ಥರಾದ ವೆಂಕಟರವಣಪ್ಪ, ಶ್ಯಾಮಸಿಂಗ್, ಅರ್ಚಕ ಸೋಮಪ್ಪ, ಶಂಕರಪ್ಪ, ಹೆಚ್, ರೆಡ್ಡೆಪ್ಪ, ಎಲ್, ಎಂ, ಮುನಿಕೃಷ್ಣೇಗೌಡ, ಮಂಜುನಾಥ್, ಗ್ರಾಮಸ್ಥರು ಭಾಗವಹಿಸಿದ್ದರು.