ಶ್ರೀನಿವಾಸಪುರ : ತಾಲ್ಲೂಕಿನ ಗಾಂಡ್ಲಹಳ್ಳಿ ಗ್ರಾಮದಲ್ಲಿ ಜೆ ಡಿ ಎಸ್ ಪಕ್ಷದ ಕಾರ್ಯಕರ್ತರ ಸಂಘಟನಾ ಸಮಾವೇಶ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ತಾಲ್ಲೂಕಿನ ಗಾಂಡ್ಲಹಳ್ಳಿ ಗ್ರಾಮದಲ್ಲಿ ಜೆ ಡಿ ಎಸ್ ಪಕ್ಷದ ಕಾರ್ಯಕರ್ತರ ಸಂಘಟನಾ ಸಮಾವೇಶವನ್ನು ದಳಸನೂರು ಹಾಗೂ ಮಾಸ್ತೆನಹಳ್ಳಿ ಗ್ರಾಮಪಂಚಾಯಿತಿಗಳ ಪಕ್ಷದ ಮುಖಂಡರ ಆದ್ವೈರ್ಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶ್ರೀನಿವಾಸಪುರ ತಾಲ್ಲೂಕಿನ ಮಾಸ್ತೆನಹಳ್ಳಿ ಹಾಗೂ ದಳಸನೂರು ಗ್ರಾಮ ಪಂಚಾಯಿತಿಗಳ ಪಕ್ಷದ ಮುಖಂಡರ ಆದ್ವೈರ್ಯದಲ್ಲಿ ಗಾಂಡ್ಲಹಳ್ಳಿ ಗ್ರಾಮದಲ್ಲಿ ಜೆ ಡಿ ಎಸ್ ಪಕ್ಷದ ಕಾರ್ಯಕರ್ತರ ಸಂಘಟನಾ ಸಮಾವೇಶ, ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಎರಡೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗಳಲ್ಲಿ ಪ್ರಮುಖವಾದ ಗಾಂಡ್ಲಹಳ್ಳಿ ಕೋಡಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಇದೇ ಸಂದರ್ಭದಲ್ಲಿ ಮಾತನಾಡಿದ ಜೆ ಡಿ ಎಸ್ ಪಕ್ಷದ ಕೋಲಾರ ಜಿಲ್ಲಾ ಅಧ್ಯಕ್ಷ ಹಾಗೂ ಕ್ಷೇತ್ರದ ಮಾಜಿ ಶಾಸಕ ಜಿ ಕೆ ವೆಂಕಟಶಿವಾರೆಡ್ಡಿ ನಾವು ಕೋಲಾರ ಜಿಲ್ಲಾಧ್ಯoತ ಪಕ್ಷದ ಸಂಘಟನೆಯನ್ನು ಬಳಪಡಿಸುವ ಪಣ ತೊಟ್ಟಿದ್ದು ಜಿಲ್ಲೆಯ 6 ಕ್ಷೇತ್ರಗಳ ಪೈಕಿ ಕನಿಷ್ಠ 5 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಅದೇ ರೀತಿ ಪಕ್ಷವನ್ನು ಇನ್ನಷ್ಟು ಹೆಚ್ಚಾಗಿ ಬಳಪಡಿಸಬೇಕಾದರೆ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಂಘಟನೆ ಕಟ್ಟಬೇಕಿದೆ, ಪ್ರತಿಯೊಬ್ಬ ಕಾರ್ಯಕರ್ತನು ಪಕ್ಷದ ಜವಾಬ್ದಾರಿಯನ್ನು ವಹಿಸಿ ಪಕ್ಷದ ಬಗ್ಗೆ ಮತದಾರರಿಗೆ ಅರಿವು ಮೂಡಿಸುವ ಕೆಲಸ ಮಾಡಿ ಎಂದು ಕಾರ್ಯಕರ್ತರಲ್ಲಿ ಕಿವಿ ಮಾತು ಹೇಳಿದರು.ಇನ್ನು ಕೋಲಾರ, ಚಿಕ್ಕಬಳ್ಳಾಪುರ ಬಯಲುಸೀಮೆ ಜಿಲ್ಲೆಗಳಲ್ಲಿ ಸುಮಾರು ವರ್ಷಗಲ್ಲಿ ನೀರಿನ ಕೊರತೆಯಿಂದ ರೈತರು ಕಂಗಾಲಾಗಿದ್ದರು. ಸದ್ಯ ದೇವರ ಕೃಪೆ ಹಾಗೂ ಪ್ರಕೃತಿಯಿಂದ ಬಂದ ಮಳೆಗೆ 90% ರಷ್ಟು ಕೆರೆಗಳು ತುಂಬಿ ಕೊಡಿ ಹೋಗುತ್ತೀವೆ. ಆದ್ರೆ ಕೆ ಸಿ ವ್ಯಾಲಿ ನೀರು ಈ ಮಳೆಯ ನೀರಿನಲ್ಲಿ ಬೆರೆದು ರೈತರ ಬೆಳೆಗಳಿಗೆ ಒಂದಿಷ್ಟು ತೊಂದರೆಯಾಗುತ್ತಿರುವುದು ದುರ್ದೈವ. ಆದ್ರು ಕೂಡ ಈ ಮಳೆ ನೀರಿನಿಂದ ರೈತರು ಬೆಳೆಗಳನ್ನು ಬೆಳೆದು ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸಂತೋಷದ ವಿಷಯ. ಅದೇ ರೀತಿ ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷವಾದ ಜೆ ಡಿ ಎಸ್ ಅನ್ನು ಅಧಿಕಾರಕ್ಕೆ ತರುವ ಮೂಲಕ ರೈತರ ಸೇವೆಗೆ ಮುಂದಾಗಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.ಸಮಾವೇಶದಲ್ಲಿ ಮುಳಬಾಗಿಲು ಕ್ಷೇತ್ರದ ಪ್ರಭಾವಿ ಶಾಸಕ ಸಮೃದ್ಧಿ ಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ನಾರಾಯಣಸ್ವಾಮಿ, ಶ್ರೀನಿವಾಸ್, ಗೋಪಾಲ್, ನಂಜುಂಡೇಗೌಡ, TPS ಸದಸ್ಯ ನಾಗೇಶ್, TPS ಮಂಜುನಾಥ್, ಪಾಳ್ಯ ಬೈರೆಡ್ಡಿ, ವೆಂಕಟರೆಡ್ಡಿ, ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.