ಜಿಲ್ಲೆಯಾದ್ಯಂತ ಶಿಥಿಲಗೊಂಡಿರುವ ಕೆರೆ, ಕಟ್ಟೆ, ತೂಬುಗಳನ್ನು ಅಭಿವೃದ್ದಿ ಪಡಿಸಲು ರೈತ ಸಂಘದಿಂದ ಮನವಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ-ಆ-25, ಜಿಲ್ಲೆಯಾದ್ಯಂತ ಶಿಥಿಲಗೊಂಡಿರುವ ಕೆರೆ, ಕಟ್ಟೆ, ತೂಬುಗಳನ್ನು ಅಭಿವೃದ್ದಿ ಪಡಿಸಲು ವಿಶೇಷ ತಂಡ ರಚನೆ ಮಾಡಿ ಕೆರೆ ನೀರನ್ನು ವ್ಯರ್ಥವಾಗಿ ರೈತರ ತೋಟಗಳಲ್ಲಿ ಹಾನಿಯಾಗುವುದನ್ನು ತಪ್ಪಿಸಲು ಕ್ರಮ ವಹಿಸಬೇಕೆಂದು ರೈತ ಸಂಘದಿಂದ ಸಣ್ಣ ನೀರಾವರಿ ಇಲಾಖೆ ಕಛೇರಿ ಮುಂದೆ ಹೋರಾಟ ಮಾಡಿ ಸಣ್ಣ ನೀರಾವರಿ ಅಧಿಕಾರಿ ಪಾರ್ವತಿರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಕೆರೆ, ರಾಜಕಾಲುವೆ, ಅಭಿವೃದ್ದಿಗೆ ಸರ್ಕಾರದಿಂದ ಬಿಡುಗೆಯಾಗಿದ್ದ ನೂರಾರು ಕೋಟಿ ಹಣವನ್ನು ಅಕ್ರಮ ದಾಖೆಲಗಳನ್ನು ಸೃಷ್ಟಿ ಮಾಡಿ ಕೆರೆ ಅವ್ಯವಸ್ಥೆಗೆ ಕಾರಣವಾಗಿರುವ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಟೆಂಡರ್‍ದಾರರ ಆಸ್ತಿಯನ್ನು ಹರಾಜು ಹಾಕಿ ಕೆರೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾಡÀಳಿತವನ್ನು ಆಗ್ರಹಿಸಿದರು.
30 ವರ್ಷಗಳಿಂದ ತೀವ್ರ ಬರಗಾಲಕ್ಕೆ ತುತ್ತಾಗಿ ಹನಿ ಹನಿ ನೀರಿಗೂ ಆಹಾಕಾರದಿಂದ ತತ್ತರಿಸುತ್ತಿದ್ದ ಜನರಿಗೆ ವರದಾನವಾದ ಮುಂಗಾರು ಮಳೆ ಜಿಲ್ಲೆಯ ಶೇಕಡ 99 ರಷ್ಟು ಕೆರೆಗಳು ಭರ್ತಿಯಾಗಿದ್ದರೂ ಕೆರೆ ನೀರನ್ನು ಉಳಿಸಿಕೊಳ್ಳಲು ಅಧಿಕಾರಿಗಳಿಗೆ ಯೋಗ್ಯತೆ ಇಲ್ಲದಂತಾಗಿದೆ. ಕೆರೆಯ ನೀರನ್ನು ಕೆರೆ ಚೆಲ್ಲಿ ಎಂಬ ಗಾದೆಯಂತೆ ಕೆರೆ ನೀರನ್ನು ರೈತರ ರಸ್ತೆಗಳಿಗೆ ಚಲ್ಲಿ ಎಂಬ ಗಾದೆಯಂತಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಶಿಥಿಲಗೊಂಡಿರುವ ಕೆರೆಗಳ ಅವ್ಯವಸ್ಥೆ ಇದಕ್ಕೆ ಹೊಣೆ ಯಾರು, ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ ಅಧಿಕಾರಿಗಳ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್À ಮಾತನಾಡಿ ಕೆರೆಯ ಮೂಲ ಆಧಾರಗಳಾದ ಕಟ್ಟೆ, ಕೋಡಿ, ರಾಜಕಾಲುವೆ, ತೂಬು ಇವು ಮನುಷ್ಯನ ಅಂಗಾಂಗಳಂತೆ ಕೆರೆಯ ಅಂಗಾಗಳು. ಆದರೆ ಮುಂಜಾಗ್ರತೆ ಇಲ್ಲದ ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯತ್ ಆಧಿಕಾರಿಗಳ ಬೇಜವಾಭ್ದಾರಿಯಿಂದ ಜಿಲ್ಲೆಗೆ ಮಳೆಯೇ ಬರುವುದಿಲ್ಲ ಎಂಬ ನಂಬಿಕೆಯಲ್ಲಿದದ ಕೆರೆಯ ಅಬಿವೃದ್ಧಿಗಳಿಗೆ ಬಂದ ಹಣವನ್ನು ಅಕ್ರಮ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಕೆರೆ ಅಬಿವೃದ್ಧಿ ಮಾಡದೆ ನಿರ್ಲಕ್ಷೆ ಮಾಡಿದ ಕಾರಣ ಇಂದು ಕೆರೆ ನೀರನ್ನು ಸಮರ್ಪಕವಾಗಿ ಕೆರೆಯಲ್ಲಿಯೇ ಉಳಿಸಿಕೊಳ್ಳಲದೆ ಶಿಥಿಲಗೊಂಡಿರುವ ಕೆರೆಗಳ ನೀರು ರೈತರ ತೋಟಗಳಿಗೆ ಹಾಗೂ ರಸ್ತೆಗಳಿಗೆ ನುಗ್ಗಿ ಅವಾಂತರಗಳು ಸೃಷ್ಟಿ ಮಾಡಲು ಅಧಿಕಾರಿಗಳ ವೈಪಲ್ಯವೇ ಕಾರಣವೆಂದು ಆಕ್ರೋಷ ವ್ಯಕ್ತಪಡಿಸಿದರು.
ಒಂದು ವಾರದೊಳಗೆ ಜಿಲ್ಲಾದ್ಯಂತ ಶಿಥಿಲಗೊಂಡಿರುವ ಕೆರೆ ರಾಜಕಾಲುವೆ ಅಭಿವೃದ್ದಿ ಪಡಿಸಲು ವಿಶೇಷ ತಂಡ ರಚನೆ ಮಾಡಿ ಕೆರೆ ನೀರು ವ್ಯರ್ಥವಾಗಿ ರೈತರ ಬೆಳೆಗಳು ಹಾಗೂ ರಸ್ತೆಗಳಿಗೆ ನುಗ್ಗಿ ಅವಾಂತರಗಳಿಗೆ ಕಡಿವಾಣ ಹಾಕದೇ ಇದ್ದರೆ, ಜಾನುವಾರುಗಳ ಸಮೇತ ಸಣ್ಣ ನೀರಾವರು ಅಧಿಕಾರಿಗಳ ಮನೆಗಳ ಮುಂದೆ ಆಹೋರಾತ್ರಿ ಹೋರಾಟ ಮಾಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಪಾರ್ವತಿರವರು ಈ ಕೂಡಲೇ ಜಿಲ್ಲಾದ್ಯಂತ ಶಿಥಿಲಗೊಂಡಿರುವ ಕೆರೆ ರಾಜಕಾಲುವೆಗಳನ್ನು ಅಭಿವೃದ್ದಿ ಪಡಿಸಲು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿಗೌಡ, ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ, ಯಲ್ಲಣ್ಣ ಹರೀಶ್, ಮೂರಾಂಡಹಳ್ಳಿ ಶಿವಾರೆಡ್ಡಿ, ಮಂಗಸಂದ್ರ ತಿಮ್ಮಣ್ಣ, ಮಂಗಸಂದ್ರ ನಾಗೇಶ್, ಮಂಗಸಂದ್ರ ಪಿ.ಮುನಿಯಪ್ಪ, ಚಾಂದ್‍ಪಾಷ, ಗೌಸ್‍ಪಾಷ, ಕಿರಣ್, ಕೆ.ಇ.ಬಿ ಚಂದ್ರು, ಮುಂತಾದವರಿದ್ದರು.