ಯಾವುದೇ ಸಂಘದ ಪದಾಧಿಕಾರಿಗಳಿಗೆ ಸಮಯ ಪಾಲನೆ, ಚಟುವಟಿಕೆಗಳಿಗೆ ಇಲ್ಲದಿದ್ದರೆ ಹಿನ್ನೆಡೆಯಾಗುತ್ತದೆ : ಎಂ.ವೇಮಣ್ಣ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ಯಾವುದೇ ಸಂಘದ ಪದಾಧಿಕಾರಿಗಳಿಗೆ ಸಮಯ ಪಾಲನೆ ಮುಖ್ಯ . ಚಟುವಟಿಕೆಗಳಿಗೆ ಇಲ್ಲದಿದ್ದರೆ ಸಂಘದ ಹಿನ್ನೆಡೆಯಾಗುತ್ತದೆ ಎಂದು ಹಿಂದುಳಿದ ವರ್ಗಗಳ ಗೌರವಾಧ್ಯಕ್ಷ ಹಾಗೂ ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ವೇಮಣ್ಣ ಹೇಳಿದರು . ತಾಲೂಕು ಹಿಂದುಳಿದ ವರ್ಗಗಳ ಸಂಘದಿಂದ ಮಂದಿರದಲ್ಲಿ ಪ್ರವಾಸಿ ಭಾನುವಾರ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ದತ್ತಿ ಪ್ರಶಸ್ತಿ ಪಡೆದ ಶ್ರೀನಿವಾಸಪುರ ತಾಲೂಕಿನ ವಿಜಯವಾಣಿ ವರದಿಗಾರ ಎನ್. ಮುನಿವೆಂಕಟೇಗೌಡ ಅಭಿನಂದನಾ ಅವರಿಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿ , ಸಂಘದ ಪದಾಧಿಕಾರಿಗಳಿಗೆ ಜವಾಬ್ದಾರಿ ಇರುತ್ತದೆ . ಸಂಘಟನೆ ಮಾಡುವುದು ಸುಲಭವಲ್ಲ . ರಾಜ್ಯ ಪತ್ರಕರ್ತರ ಸಂಘ ಶ್ರೀನಿವಾಸಪುರದ ಪತ್ರಕರ್ತರೊಬ್ಬರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿರುವುದು ತಾಲೂಕಿನ ಗರಿಮೆ ಹೆಚ್ಚಿಸಿದಂತಾಗಿದೆ ಎಂದರು . ಹಿಂದುಳಿದ ವರ್ಗಗಳ ಗೌರವಾಧ್ಯಕ್ಷ ಮೋಹನಾಚಾರಿ , ತಾಲೂಕು ಅಧ್ಯಕ್ಷ ಎಸ್‌ . ವೇಣುಗೋಪಾಲ್ , ಜಿಲ್ಲಾ ಕಾರ್ಯದರ್ಶಿ ಪಾಲ್ಗುಣ , ತಾಲೂಕು ಖಜಾಂಚಿ ಅಪ್ಪುರು ಮಂಜು , ಕಾರ್ಯದರ್ಶಿಗಳಾದ ಮಂಜುನಾಥ್ , ರಾಮಮೂರ್ತಿ , ತಾಲೂಕು ಸಂಘಟನಾ ಕಾರ್ಯದರ್ಶಿ ಶಂಕರ್ , ಕೋಲಾರ ಜಿಲ್ಲಾ
ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಶಬ್ಬೀರ್ ಅಹಮ್ಮದ್, ಕಾರ್ಯಕಾರಿ ಸಮಿತಿ ಸದಸ್ಯ ಬಿ ಕೆ ಉಪೇಂದ್ರ , ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಮೇಶ್, ಖಜಾಂಚಿ ಆರ್ ಬಾಬು, ಪತ್ರಕರ್ತರಾದ ಸೋಮಶೇಖರ್ , ಲಕ್ಷ್ಮಣ್ ಬಾಬು , ನಾಗರಾಜ್ ,ಮುರುಳಿ ಮೋಹನ್ ಇತರರಿದ್ದರು . ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ದತ್ತಿ ಪ್ರಶಸ್ತಿ ಪಡೆದ ವಿಜಯವಾಣಿ ಶ್ರೀನಿವಾಸಪುರದ ತಾಲೂಕು ವರದಿಗಾರ ಎನ್.ಮುನಿವೆಂಕಟೇಗೌಡ ಅವರನ್ನು ತಾಲೂಕು ಹಿಂದುಳಿದ ವರ್ಗಗಳ ಸಂಘದಿಂದ ಅಭಿನಂದಿಸಲಾಯಿತು . ಹಿಂದುಳಿದ ವರ್ಗಗಳ ಗೌರವಾಧ್ಯಕ್ಷ ಮೋಹನಾಚಾರಿ , ತಾಲೂಕು ಅಧ್ಯಕ್ಷ ಎಸ್.ವೇಣುಗೋಪಾಲ್ ಇತರರಿದ್ದರು .