ಕುಂದಾಪುರ ಕಥೊಲಿಕ್ ಸಭಾದಿಂದ ಭಾಷಣ ಸ್ಪರ್ಧೆ

JANANUDI.COM NETWORK

ಕುಂದಾಪುರ, ಆ.17; ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಸಮಿತಿಯ ನಿರ್ದೇಶನದಂತೆ ಕುಂದಾಪುರ ಚರ್ಚ್ ಕಥೊಲಿಕ್ ಸಭಾ ಘಟಕವು, 5 ರಿಂದ 7 ನೇ ತರಗತಿಯವರಿಗೆ “ಮಕ್ಕಳು ಮತ್ತು ದೇಶ ಪ್ರೇಮ” ಕನ್ನಡ ಮತ್ತು ಕೊಂಕಣಿ ಭಾಶೆಗಳಲ್ಲಿ, 8 ಮತ್ತು 10 ನೇ ತರಗತಿಯವರಿಗೆ “ಮಾಧ್ಯಮ ಸ್ವಾತಂತ್ರ್ಯ” ಕನ್ನಡ ಮತ್ತು ಕೊಂಕಣಿ ಭಾಶೆಗಳಲ್ಲಿ 16 ರಿಂದ 25 ವರ್ಷದವರಿಗಾಗಿ ಸಮಾಜದ ಅಭಿವ್ರದ್ದಿಯಲ್ಲಿ ಕಥೊಲಿಕ್ ಸಭೆಯ ಪಾತ್ರ” ಕನ್ನಡ ಮತ್ತುP Éೂಂಕಣಿ ಭಾಶೆಗಳಲ್ಲಿ ಭಾಷಣ ಸ್ಪರ್ಧೆಯು ಕುಂದಾಪುರ ಚರ್ಚಿನ ಸಭಾ ಭವನದಲ್ಲಿ ಎರ್ಪಡಿಸಲಾಗಿತ್ತು.
5-6 ಕ್ಲಾಸಿನ ಕೊಂಕಣಿಯ ಸ್ಪರ್ಧೆಯಲ್ಲಿ ಮೆಲ್ರಿಯಾ ಫೆರ್ನಾಂಡಿಸ್, ಕನ್ನಡದಲ್ಲಿ ಅಜ್ಲಿನ್ ಡಿಸೋಜಾ 8- 10 ಕ್ಲಾಸಿನ ಸ್ಪರ್ಧೆಯ ಕನ್ನಡದಲ್ಲಿ ಸ್ಟೆನಿಲ್ಲಾ ಡಿಸೋಜಾ, ವೀಯೊಲಾ ಬರೆಟ್ಟೊ, ಡೆಲ್ವಿಯಾ ಬರೆಟ್ಟೊ, ಕೊಂಕಣಿಯಲ್ಲಿ ವಿಯೆನ್ನಾ ಡಿಸೋಜಾ, ಈಥನ್ ಡಿಸೋಜಾ, 16-25 ವಯ್ಸಕರ ಕನ್ನಡದ ವಿಭಾಗದಲ್ಲಿ ವೆನಿಶಾ ಡಿಸೋಜಾ, ಅನುಕ್ರಮವಾಗಿ ಸ್ಥಾನ ಪಡೆದರು. ಕುಂದಾಪುರ ಘಟಕದ ಕಥೊಲಿಕ್ ಸಭೆಯ ಅಧ್ಯಕ್ಷ ಬರ್ನಾಡ್‍ಡಿಕೋಸ್ತಾ, ಸ್ವಾಗತಿಸಿದರು. ಕುಂದಾಪುರ ಘಟಕದ ಕಥೊಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕರು, ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು. ಜೆನ್ನಿ ಡೆಸಾ, ಹಂಗಳೂರು, ಜೊಯ್‍ಸ್ಟನ್ ಡಿಸೋಜಾ ಬಸ್ರೂರು ಮತ್ತು ಡ್ರಿಮಾ ಡಿಸೋಜಾ ಬೈಂದೂರು ತೀರ್ಪುಗಾರರಾಗಿದ್ದರು. ಕಾರ್ಯದರ್ಶಿ ಅಲ್ಡ್ರಿನ್ ಡಿಸೋಜಾ ಮತ್ತು ಖಜಾಂಚಿ ಶೈಲಾ ಡಿಆಲ್ಮೇಡಾ ಸ್ಪರ್ಧೆಯನ್ನು ನಡೆಸಿಕೊಟ್ಟರು, ಪದಾಧಿಕಾರಿಗಳಾದ ಪ್ರೇಮಾಡಿಕುನ್ಹಾ, ಡಾ|ಸೋನಿ ಡಿಕೋಸ್ತಾ ಮುಂತಾದವರು ಉಪಸ್ಥಿತರಿದ್ದರು.