ಶ್ರೀನಿವಾಸಪುರ : ಜನರು ಆರೋಗ್ಯ ಕೇಂದ್ರದ ಪ್ರಯೋಜನ ಪಡೆದು , ತಮ್ಮ ಆರೋಗ್ಯ ಸುಧಾರಿಸಿಕೊಳ್ಳಬೇಕು ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ಜನರು ಆರೋಗ್ಯ ಕೇಂದ್ರದ ಪ್ರಯೋಜನ ಪಡೆದು , ತಮ್ಮ ಆರೋಗ್ಯ ಸುಧಾರಿಸಿಕೊಳ್ಳಬೇಕು ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು . ತಾಲ್ಲೂಕಿನ ನೀಲ್ ಬಾಗ್ ಕ್ರಾಸ್ ಸಮೀಪ ಭಾನುವಾರ ಸತ್ಯಸಾಯಿ ಆರೋಗ್ಯ ಪ್ರತಿಷ್ಠಾನದ ವತಿಯಿಂದ ನಿರ್ಮಿಸಲಾಗಿರುವ ಸಾಂಕ್ರಾಮಿಕವಲ್ಲದ ರೋಗಗಳ ಗಾಮೀಣ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿ , ಗ್ರಾಮೀಣ ಪ್ರದೇಶದ ಜನರನ್ನು ಆರೋಗ್ಯ ಸಮಸ್ಯೆಗಳಿಂದ ಪಾರು ಮಾಡುವ ಉದ್ದೇಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ . ಅವುಗಳ ಜತೆಗೆ ಈ ಭಾಗದ ಜನರ ಅನುಕೂಲಕ್ಕಾಗಿ ಸತ್ಯಸಾಯಿ ಆರೋಗ್ಯ ಪ್ರತಿಷ್ಠಾನ ಇನ್ನೊಂದು ವಿಶಿಷ್ಟವಾದ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದೆ ಎಂದು ಹೇಳಿದರು . ಸತ್ಯಸಾಯಿ ಆರೋಗ್ಯ ಪ್ರತಿಷ್ಠಾನ ಗ್ರಾಮೀಣ ಜನರ ಆರೋಗ್ಯ ಸುಧಾರಣೆಗಾಗಿ ತನ್ನದೇ ಆದ ಯೋಜನೆಗಳನ್ನು ರೂಪಿಸಿ ಜಾರಿಗೆ ತರುತ್ತಿದೆ . ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ . ಅದರ ಪ್ರಯೋಜನ ಪಡದ ಜನರ ಆರೋಗ್ಯ ಸುಧಾರಿಸಿದೆ . ಜನರು ಸಂಸ್ಥೆಯೊಂದಿಗೆ ಸಹಕರಿಸಬೇಕು . ವಿನಯ ಪೂರ್ವಕವಾಗಿ ಸೇವೆ ಪಡೆದುಕೊಳ್ಳಬೇಕು ಎಂದು ಹೇಳಿದರು . ಆಂಧ್ರಪ್ರದೇಶದ ಮದನಪಲ್ಲಿ ತಾಲ್ಲೂಕಿನ ಮಾಜಿ ಶಾಸಕ ಡಾ . ದೇಸಾಯಿ ತಿಪ್ಪಾರೆಡ್ಡಿ , ಡಾ . ಪಿ.ಪಿ.ಬಾಪ್ತಿ , ಡಾ . ಎಂ.ಸಿ.ವಿಜಯ , ಡಾ . ಎ.ಸಿ.ಹಸೀಮ್ , ಮುಖಂಡರಾದ ಶ್ರೀನಿವಾಸರೆಡ್ಡಿ , ರಾಮಸ್ವಾಮಿ ಶೆಟ್ಟಿ , ಕೆ.ಕೆ.ಮಂಜು , ಶಿವಾರೆಡ್ಡಿ , ರಡ್ಡಪ್ಪ , ವೆಂಕಟರವಣ , ಅಪ್ಪಲ್ಲ . ಶಿವಶಂಕರ್ , ನರಸಿಂಹ ನಾಯಕ್ ಇದ್ದರು .