ಭಕ್ತಿ ಪೂರ್ವಕವಾಗಿ ಸದಾ ನೆನಪಲ್ಲಿಟ್ಟು ಕೊಳ್ಳುವಂತಹ ಸಾಮಪನಗೊಂಡ ಕುಂದಾಪುರ ರೋಜರಿ ಮಾತಾ ಚರ್ಚಿನ 450ನೇ ವರ್ಷಾಚರಣೆ ಸಂಭ್ರಮ

JANANUDI.COM NETWORK

ಭಕ್ತಿ ಪೂರ್ವಕವಾಗಿ ಸದಾ ನೆನಪಲ್ಲಿಟ್ಟುಕೊಳ್ಳುವಂತಹ ಸಾಮಪನಗೊಂಡ ಕುಂದಾಪುರ ರೋಜರಿ ಮಾತಾ ಚರ್ಚಿನ 450ನೇ ವರ್ಷಾಚರಣೆ ಸಂಭ್ರಮ
ಸಭಾ ಕಾರ್ಯಕ್ರಮಕ್ಕೆ ಮುನ್ನ ಕ್ರತ್ನಜತೆಯ ಭಕ್ತಿ ಪೂರ್ವಕ ಅದ್ದೂರಿ ಬಲಿದಾದನದ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನಿಯ ಡಾ.ಜೆರಾಲ್ಡ್ ಐಸಾಕ್ ಲೋಬೊ, ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ. ಡಾ|ಫ್ರಾನ್ಸಿಸ್ ಸೆರಾವೊ ಇವರುಗಳ ನೇತೃತ್ವದಲ್ಲಿ ಹಲವಾರು ಧರ್ಮಗುರುಗಳ ಉಪಸ್ಥಿತಿಯಲ್ಲಿ ಜರಗಿದ್ದು, ನಿನ್ನೆನೆ ಈ ಸುದ್ದಿ ಜಾಲಾ ಪ್ರಕಟಿಸಿದ್ದು ಈ ವರದಿ ಎರಡನೇ ಹಂತದ ಸಭಾ ಕಾರ್ಯಕ್ರಮದ ಭಾಗವಾಗಿದೆ – ಸಂಪಾದಕ ಬರ್ನಾಡ್ ಡಿಕೋಸ್ತಾ

ಕುಂದಾಪುರ, ಆ.8: “ಕರ್ನಾಟಕ ಕರಾವಳಿಯ ಉಡುಪಿ ಧರ್ಮಪ್ರಾಂತ್ಯದಲ್ಲಿರುವ ಅತಿ ಪುರಾತನ ಚರ್ಚು ಎಂಬ ಹೆಗ್ಗಳಿಕೆಗೆ ಕುಂದಾಪುರ ರೋಜರಿ ಮಾತೆ ಇಗರ್ಜಿ ಪಾತ್ರವಾಗಿದ್ದು 450 ವರ್ಷಗಳ ಹಿಂದೆ ಹಾಕಿದ ಕ್ರೀಸ್ತರ ವಿಶ್ವಾಸದ ಬುನಾದಿ ಇದಾಗಿದೆ. ಅಂದು ಹಾಕಿದ ಚಿಕ್ಕ ಬೀಜ ಇಂದು ಹೆಮ್ಮರವಾಗಿ ಬೆಳೆದು ಅದಕ್ಕೆ ಗೆಲ್ಲುಗಳು ರೆಂಬೆಗಳಾಗಿ ಬೆಳೆದು ಅವುಗಳಲ್ಲಿ ನಾವು ಜೀವಿಸುತ್ತಿದ್ದೆವೆ. ಕ್ರೈಸ್ತ ಸಭೆಯ ಬೆಳಕನ್ನು ಮುಂದಿನ ಜನಾಂಗಕ್ಕೆ ನೀಡುವ ಕೆಲಸ ಇಲ್ಲಿ ನಡೆದಿರುವುದು ಶ್ಲಾಘನೀಯವಾಗಿದೆ” ಎಂದು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನಿಯ ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅವರು ಗುರುವಾರ ಕುಂದಾಪುರ ಹೋಲಿ ರೋಸರಿ ಚರ್ಚಿನ 450ನೆ ಭಕ್ತಿ ಪೂರ್ವಕವಾಗಿ ಸದಾ ನೆನಪಲ್ಲಿಟ್ಟುಕೊಳ್ಳುವಂತಹ 7-10-2021 ರಂದು ಸಾಮಪನಗೊಂಡ ಕುಂದಾಪುರ ರೋಜರಿ ಮಾತಾ ಚರ್ಚಿನ 450ನೇ ವರ್ಷಾಚರಣೆ ಸಂಭ್ರಮ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.


“450 ವರ್ಷಗಳಿಂದ ಧರ್ಮಸಭೆಯಲ್ಲಿ ಇಟ್ಟ ನಂಬಿಕೆ ವಿಶ್ವಾಸ ಗಟ್ಟಿಗೊಳಿಸುವುದರ ಜೊತೆಗೆ ನಮ್ಮ ಪೂರ್ವಜರಂತೆ ನಾವೆಲ್ಲರೂ ಒಂದೇ ಮನಸ್ಸು ಮತ್ತು ಹೃದಯವುಳ್ಳರಾಗಿ ಪರರ ನೋವಿಗೆ ಸ್ಪಂದಿಸುವಂತವರಾಗಬೇಕು, ಈ ಪಯಣ ಇಲ್ಲಿಗೆ ನಿಲ್ಲುವುದಿಲ್ಲ. ನಾವು ಒಂದು ಕುಟುಂಬದಂತೆ, ಒಂದು ಹ್ರದಯ ಒಂದೇ ಮನಸಿನಿಂದ ಒಟ್ಟಾಗಿ ಒಂದು ಸಮುದಾಯ ಕಟ್ಟಬೇಕು, ಒಂದೇ ಹ್ರದಯ ಒಂದೇ ಮನಸಿನಿಂದ ನಾವು ಜೀವಿಸುವ ಅಗತ್ಯವಿದೆ.ನಮ್ಮ ಪೂರ್ವಜರ ವಿಶ್ವಾಸವನ್ನು ಮುಂದುವರೆಸುವ ಜವಾಬ್ದಾರಿ ನಮಗಿದೆ. ಈ ಚರ್ಚ್ ಬೆಳವಣಿಗೆಯಲ್ಲಿ ನಮ್ಮ ಪೂರ್ವಜರ ಬೆವರು ಅದು ರಕ್ತದ ಬೆವರಡಗಿದೆ, ಹಾಗಾಗಿ ಇಂದು ಅವರನ್ನು ನಾನು ನೆನೆಯುತ್ತೇನೆ, ಮೇರಿ ಮಾತೆ ದೇವರಲಿ ಅಪಾರ ನಿಷ್ಠೆಯನ್ನು ತೋರಿಸಿದರು. ಅವಳು ತನ್ನ ತನ್ನ ಜೀವನದಲ್ಲಿ ಪ್ರಮಾಣಿಕತೆ, ಸರಳತೆ ಸತ್ಯದ ಮೂಲಕ ಇನ್ನೊಬ್ಬರಿಗೆ ಆದರ್ಶೆಯಾಗಿದ್ದು ಅವರು ತೋರಿಸಿದ ಆದರ್ಶದಂತೆ ಮುನ್ನಡೆಯೋಣ” ಎಂದರು.


ಕಾರ್ಯಕ್ರಮ್ರದಲ್ಲಿ ಉಪಸ್ಥಿತರಿದ್ದ ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ. ಡಾ|ಫ್ರಾನ್ಸಿಸ್ ಸೆರಾವೊ ಮಾತನಾಡಿ 450 ವರ್ಷಗಳಿಂದ ಈ ಭಾಗದಲ್ಲಿ ಕ್ರಿಸ್ತರ ಮೇಲಿನ ವಿಶ್ವಾಸ ಗಟ್ಟಿಯಾಗಿ ನಿಂತಿದ್ದು ಈ ಶ್ರಮ ಪೂರ್ವಜದಾಗಿದೆ, ಸಂಭ್ರಮ ಸಂಭ್ರಮಿಸುವುದು ಮುಖ್ಯವಲ್ಲ.ನಮ್ಮ ಜೀವನದಲ್ಲಿ ಆಚರಣೆಗೆ ಆಸ್ಪದ ಕೊಡಬೇಕು, ಕವಿಗಳು ಹೇಳಿದಂತೆ ಗಾಂಧಿಜಿಯ ಚಿತ್ರ ಬಿಡಿಸಬೇಡ, ಅವರ ಮೂರ್ತಿ ಮಣ್ಣಲ್ಲಿ ಮಾಡಬೇಡ ಮಳೆ ನೀರಲ್ಲಿ ಕೊಚ್ಚಿ ಹೋಗಬಹುದು, ಕಲ್ಲಲ್ಲಿ ಕೆತ್ತ ಬೇಡ, ಕಾಗೆ ಪಕ್ಷಿಗಳು ಹೊಲಸು ಮಾಡಿಯಾವು, ನಿನ್ನ ಜೀವನದಲ್ಲಿ ಅವರ ತತ್ವವನ್ನು ಅಳವಡಿಸಿ ನಡೆ, ಹಾಗೆಯೇ ನಾವು ಮೇರಿ ಮಾತೆಯ ಆದರ್ಶಗುಣಗಳನ್ನು ಅಲವಡಿಸಿಕೊಂಡು ನಡೆದು, ಈ ಸಂಭ್ರಮಕ್ಕೆ ನೀಜ ಅರ್ಥ ನೀಡೊಣ’ ಎಂದು ಸಂದೇಶ ನೀಡಿದರು.


ಕಾರ್ಯಕ್ರಮದಲ್ಲಿ ಕಳೆದ 450 ವರ್ಷಗಳಲಿ ಈ ಚರ್ಚಿನಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳು, ಸಹಾಯಕ ಧರ್ಮಗುರುಗಳು, ಕಾಲೇಜಿನ ಪ್ರಾಂಶುಪಾಲರು, ಚರ್ಚಿನಲ್ಲಿ ಹುಟ್ಟಿಬೆಳೆದು ಧರ್ಮಗುರುಗಳಾದವರಿಗೆ ಹಾಗೇಧರ್ಮಭಗಿನಿಯರಿಗೆ, ಚರ್ಚಿನ ಪಾಲನಾ ಮಂಡಳಿಯ ಪ್ರಸ್ತೂತ ಸೇವೆ ನೀಡುತ್ತಿರುವ ಉಪಾಧ್ಯಕ್ಷ, ಕಾರ್ಯದರ್ಶಿ, ಈ ಹಿಂದೆ ಸೇವೆ ನೀಡಿದ ಉಪಾಧ್ಯಕ್ಷ, ಕಾರ್ಯದರ್ಶಿಗಳಿಗೆ 20 ಆಯೋಗಗಳ ಸಂಚಾಲಕರಿಗೆ, ಇಂದು ಮತ್ತು ಈ ಹಿಂದೆ ಸೆವ್ ನೀಡಿದ ವಾಳೆಯ ಗುರಿಕಾರರಿಗೆ ಹಾಗೂ ಪ್ರತಿಯೊಬ್ಬ ದಾನಿಗಳಿಗೆ ರೊಜರಿ ಮಾತಾ ಮೂರ್ತಿ ಮತ್ತು ಶಾಲುಗಳನ್ನು ನೀಡಿ ಗೌರವಿಸಲಾಯಿತು.
ಸಾಹಿತಿ ಬರ್ನಾಡ್ ಡಿಕೋಸ್ತಾರ ನೇತ್ರದ್ವದಲ್ಲಿ ರಚನೆಯಾದ 450ನೇ ವμರ್Áಚರಣೆ ಸವಿನೆನಪಿಗಾಗಿ ರಚನೆಯಾದ ಸ್ಮರಣ ಸಂಚಿಕೆಯನ್ನು ಕರ್ನಾಟಕ ಪ್ರಾಂತ್ಯದ ಪೆÇ್ರವಿನ್ಸಿಯಲ್ ಸುಪಿರೀಯರ್ ಸಿಸ್ಟರ್ ಮರಿಯಾ ಶಮಿತಾ ಬಿಡುಗಡೆಗೊಳಿಸಿದರು. ಚರ್ಚಿನ ಸಂಗೀತ ನಿರ್ದೇಶಕ ದಿವಂಗತ ಪಾಸ್ಕಲ್ ಡಿಸೋಜಾರ ನೆನಪಲ್ಲಿ ರಚನೆಯಾದ, ಫಾ|ಆಲ್ವಿನ್ ಸೀಕ್ವೆರಾ ಇವರ ಭಕ್ತಿಗೀತೆಗಳ ಧ್ವನಿ ಸುರುಳಿಯನ್ನು ಕುಂದಾಪುರ ಪುರಸಭೆಯ ಅಧ್ಯಕ್ಷರಾದ ವೀಣಾ ಭಾಸ್ಕರ್ ಮೆಂಡನ್ ಬಿಡುಗಡೆ ಮಾಡಿದರು.450ನೇ ವರ್ಷಾಚರಣೆ ಸವಿನೆನಪಿಗಾಗಿ ವೈದ್ಯಕೀಯ ನಿಧಿಯ ಚಾಲನೆಯನ್ನು ಧರ್ಮಾಧ್ಯಕ್ಷ ಅತಿ ವಂದನಿಯ ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರಿಗೆ ಚೆಕ್ ಹಸ್ತಾಂತರಿಸುವ ಮೂಲಕ ನೀಡಲಾಯಿತು.
450 ವರ್ಷಗಳ ಇತಿಹಾಸದ ಜಳಕನ್ನು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಎಲ್ ಜೆ ಫೆನಾರ್ಂಡಿಸ್ ಮುಂದಿಟ್ಟರು. ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಕುಲಪತಿ ವಂ|ಸ್ಟ್ಯಾನಿ ಬಿ ಲೋಬೊ, ಸ್ಥಳೀಯ ಸಂತ ಜೋಸೇಪ್ ಕಾನ್ವೆಂಟ್ ಮುಖ್ಯಸ್ಥರಾದ ಸಿಸ್ಟರ್ ಸಂಗೀತಾ, ಚರ್ಚಿನ ಸಹಾಯ ಧರ್ಮಗುರು ವಂ|ವಿಜಯ್ ಡಿಸೋಜಾ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಆಶಾ ಕರ್ವಾಲ್ಲೊ, 20 ಆಯೋಗಗಳ ಸಂಚಾಲಕರಾದ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು


ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಸ್ವಾಗತಿಸಿ, ಆಚರಣಾ ಸಮಿತಿಯ ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ ವಂದಿಸಿದರು. ವಿಲ್ಸನ್ ಒಲಿವೇರಾ ಮತ್ತು ರೇಶ್ಮಾ ಫೆನಾರ್ಂಡಿಸ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮ ಮುಗಿದ ನಂತರ ಎಲ್ಲರಿಗೂ ಊಟದ ಏರ್ಪಾಡನ್ನು ಏರ್ಪಡಿಸಿದ್ದರು. ಏಣಸಿÂದಕ್ಕಿಂತ ಭಕ್ತಾದಿಗಳು ಹೆಚ್ಚು ಸೇರಿದ್ದು ರೋಜರಿ ಮಾತೆಯ ಮೇಲಿದ್ದ ಭಕ್ತಿ ಗೌರವ ಅಭಿಮಾನ ಎದ್ದು ತೋರುವಂತಾಯ್ತು.