ರೋಜರಿ ಮಾತ ಕುಂದಾಪುರ ಚಾರಿತ್ರಿಕ 450 ವರ್ಷದ ಸಂಭ್ರಾಮಚರಣೆ – ಭಕ್ತಿ ಸಂಭ್ರಮದ ಬಲಿದಾನದ ಮೂಲಕ ಮಾತೆಗೆ ಗೌರವದ ಸಮಾರೋಪ

JANANUDI.COM NETWOWORK


ಕುಂದಾಪುರ, ಆ.7: ಕೆನರಾ ಜಿಲ್ಲೆಗಳ ಅತ್ಯಂತ ಪ್ರಾಚೀನ ಇಗರ್ಜಿಗಳಲ್ಲಿ ಎರಡನೇಯದು, ಉಡುಪಿ, ಕಾರವಾರ ಜಿಲ್ಲೆಗಳಲ್ಲೆ ಅತ್ಯಂತ ಪ್ರಾಚೀನ, ಹಿರಿಯದುರೋಜರಿ ಮಾತೆಗೆ ಸಮರ್ಪಿಸಲ್ಪಟ್ಟಕುಂದಾಪುರದಇಗರ್ಜಿಗೆ 450 ತುಂಬಿ, 451 ಮೆಟ್ಟಲಿಟ್ಟಿದೆ, 2019 ಆಕ್ಟೋಬರ್ 7ಅರಂದು ಇದೇ ದಿನ ಆರಂಭಗೊಂಡ 450 ವರ್ಷಗಳ ಆಚರಣೊತ್ಸೋವಇಂದು ಸಮಾಪನ ಗೊಳ್ಳುವಾಗ ಮಾತೆಗೌರವ ನೀಡಲು ಹರಸಲುಇಬ್ಬರು ಬಿಶಪ್ ಸ್ವಾಮಿಗಳು ಮತ್ತು ಸುಮಾರು 40 ಜನ ಧರ್ಮಗುರುಗಳು, ಹಲವಾರುಧರ್ಮಭಗಿನಿಯರು, ಹಲಾವಾರು ಭಕ್ತಾದಿಗಳು ಒಟ್ಟಿಗೆ ಸೇರಿ ಪವಿತ್ರ ಬಲಿದಾನದವನ್ನುಅರ್ಪಿಸಲಾಯಿತು
ಪ್ರಧಾನ ಯಾಜಕರಾದ ಅ|ವಂ|ಡಾ|ಜೆರಾಲ್ಡ್‍ ಐಸಾಕ್ ಲೋಬೊ ಬಲಿದಾನವನ್ನು ಅರ್ಪಿಸಿದರು. ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಫ್ರಾನ್ಸಿ ಸೆರಾವೊ ಬಲಿದಾನದಲ್ಲಿ ಭಾಗಿಯಾಗಿ ‘ಒಂದು ಇಗರ್ಜಿ 450 ವರ್ಷಗಳ ಆಚರಣೆ ಮಾಡುವುದು ಒಂದು ಅಪರೂಪದಘಟನೆ, ಮಾತೆ ಧರ್ಮಸಭೆಯ ಶಕ್ತಿ, ಯೇಸು ಕ್ರಿಸ್ತನು ತನ್ನ ಶಿಸ್ಯನಿಗೆ ಇನ್ನು ಮುಂದೆ ಮೇರಿ ಮಾತೆ ನಿನ್ನ ಅಂದರು, ಆದರಿಂದ ಮೇರಿ ಮಾತೆ ನಮ್ಮೇಲ್ಲರ ತಾಯಿ. ಅವಳಿಗೆ ಕಟ್ಟಡ ಸ್ಥಳದ ವಿಷಯವಾಗಿ ಆಚರಣೆ ಮಾಡುವುದು ಮುಖ್ಯವಲ್ಲಾ, ಭಕ್ತಿ ವಿಶ್ವಾಸ ಧ್ರಡ ನಂಬಿಕೆ ಇಟ್ಟು ನಮ್ಮ ಪೂರ್ವಜರು ನಡೆಸಿಕೊಟ್ಟ ವಿಶ್ವಾಸ ಧರ್ಮಕಾರ್ಯಗಳು ಮುಂದುವರಿಸುವ ಜವಾಬ್ದಾರಿ ಇದೆ’ ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಕುಲಪತಿ ವಂ|ಸ್ಟ್ಯಾನಿ ಬಿ ಲೋಬೊ, ಫಾ | ವಾಲೇರಿಯನ್ ಮೆಂಡೋನ್ಸಾ , ಇತರ ಹಿರಿಯ ಧರ್ಮಗುರುಗಳು ಅಲ್ಲದೆ ಫಾ | ವಾಲೇರಿಯನ್ ಮೆಂಡೋನ್ಸಾ ಇತರ ಹಿರಿಯ ಧರ್ಮಗುರುಗಳು ಅಲ್ಲದೆ, ವಿವಿಧಡೆಯಿಂದ ಬಂದ ಧರ್ಮಗುರುಗಳು, ವಲಯದ ಧರ್ಮಗುರುಗಳು, ಹಾಗು ಇಲ್ಲಿನ ತವರು ಮನೆಯ ಧರ್ಮಗುರುಗಳು,ಈಗ ಇತರಕಡೆ ಸೇವೆ ನೀಡುತ್ತೀರುವ ಧರ್ಮಗುರುಗಳು, ಧರ್ಮಭಗಿನಿಯರು, ಇತರ ಧರ್ಮಭಗಿನಿಯರು, ಇಗರ್ಜಿಯ ಭಕ್ತಾಧಿಗಳು ಈ ವಿಶೇಷವಾದ ಸಂಭ್ರಮದ ಭಕ್ತಿ ಶ್ರದ್ದೆಯ ಬಲಿದಾನದಲ್ಲಿ ಭಾಗಿಯಾಗಿ ರೋಜರಿ ಮಾತೆಗೆ ಕ್ರತಜ್ನತೆ ಸಲ್ಲಿ ಸಿದರು.
ಕುಂದಾಪುರ ಚರ್ಚಿನ ಪ್ರಧಾನ ಯಾಜಕ ಅ|ವಂ|ಸ್ಟ್ಯಾನಿ ತಾವ್ರೊ ವಂದಿಸಿದರು. ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಸಹಕರಿಸಿದರು.