ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿಗಳು – ಕೆ. ಶ್ರೀನಿವಾಸಗೌಡ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿಗಳು – ಕೆ. ಶ್ರೀನಿವಾಸಗೌಡಕೋಲಾರ ಅ.5 : ಶಿಕ್ಷಕರು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಜ್ಞಾನದ ಶಿಲ್ಪಿಗಳಂತೆ ಆದ್ದರಿಂದ ಶಿಕ್ಷಕ ವೃತ್ತಿ ಪವಿತ್ರವಾದದ್ದು ಎಂದು ಶಾಸಕ ಕೆ ಶ್ರೀನಿವಾಸಗೌಡ ತಿಳಿಸಿದರು .
ಕೋಲಾರ ತಾಲ್ಲೂಕು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ವತಿಯಿಂದ ‘ವಿಶ್ವ ಶಿಕ್ಷಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು .
ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಮತ್ತು ಶಿಸ್ತಿನ ಜೊತೆಜತೆಗೆ ಆರೋಗ್ಯಕರ ಸಮಾಜದ ಸೃಷ್ಟಿಗಾಗಿ ಯುವಕ ಯುವತಿಯರಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತಬೇಕು ಹಾಗೂ ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯುತ್ತಮವಾಗಿದೆ ಎಂದು ತಿಳಿಸಿದರು .
ಅಂತರರಾಷ್ಟ್ರೀಯ ಮಟ್ಟದಲ್ಲಿ ಯುನೆಸ್ಕೋ ಮತ್ತು ಐಎಲ್‍ಒಗಳ ಪ್ರಸ್ತಾವನೆಯಂತೆ ಸೆಪ್ಟೆಂಬರ್ 5ರಂದು ವಿಶ್ವ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಎಂದ ಅವರು ಪಶು ಪ್ರಾಣಿ ಪಕ್ಷಿಗಳು ಕೂಡ ತನ್ನ ಶಿಕ್ಷಕ ತರಬೇತುದಾರರ ಬಗ್ಗೆ ಅಪಾರವಾದ ಪ್ರೀತಿ ಮತ್ತು ಬಾಂಧವ್ಯ ಹೊಂದಿರುವಾಗ ಜೀವಜಾಲದ ಉನ್ನತ ಸ್ಥಾನದಲ್ಲಿರುವ ಮಾನವ ತನ್ನ ಅರಿವಿನ ಕಣ್ಣು ತೆರೆಯುವ ಶಿಕ್ಷಕರಿಗೆ ಸದಾ ಋಣಿಯಾಗಿರಬೇಕು ಮತ್ತು ಕೃತಜ್ಞತೆಯಿಂದ ಇರುವುದೇ ದ್ಯೋತಕÀ ಇದರ ಅಗತ್ಯವೇ ಶಿಕ್ಷಕರ ದಿನಾಚರಣೆಯ ಅರ್ಥಪೂರ್ಣ ಸಂದೇಶವಾಗಿದೆ ಎಂದರು .
ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿ ಸಿ.ಆರ್. ಅಶೋಕ್ ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಹಾಕಿಕೊಟ್ಟ ಹಾದಿಯನ್ನು ಪಾಲಿಸುತ್ತಾ ಎರಡಕ್ಷರಕಲಿಸಿದಾತನೇ ಗುರು ಎಂಬಂತೆ ನಮ್ಮ ಬಾಲ್ಯದ ದಿನಗಳಿಂದ ನಮಗೆ ಸದಾ ಒಳ್ಳೆಯ ಆಚಾರ ವಿಚಾರ ನಡೆ ನುಡಿ ಕಲಿಸುವುದೇ ನಿಜವಾದ ಶಿಕ್ಷಣ ಎಂದರು .
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ ವಿದ್ಯಾರ್ಥಿಗಳು ಡಾ ರಾಧಾಕೃಷ್ಣನ್ ಮಾದರಿಯನ್ನು ಇಟ್ಟುಕೊಂಡು ವಿದ್ಯಾರ್ಥಿಗಳ ಜೀವನದಲ್ಲಿ ಕನಸುಗಳನ್ನು ತುಂಬಬೇಕು ಗುರು ಸಾಕ್ಷಾತ್ ಪರಬ್ರಹ್ಮ ಆಗಿ ಮಾನವನು ಅರಿವು ಜ್ಞಾನ ಮತ್ತು ವಿವೇಕಗಳಿಗೆ ಕಾರಣವಾಗಿ ತ್ರಿಮೂರ್ತಿಗಳ ಸ್ವರೂಪವೇ ಆಗಿರೋದ್ರಿಂದ ಶಿಕ್ಷಕರು ಸದಾ ಉತ್ತಮ ನಡೆ, ನುಡಿ, ಕ್ರೀಡೆಗಳಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ ಮಾದರಿಯಾಗಿ ನಿಲ್ಲುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕೆಂದರು.
ಇದೇ ಸಂದರ್ಭದಲ್ಲಿ ಕುರಗಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ರವರನ್ನು ಸನ್ಮಾನಿಸಲಾಯಿತು . ಸಮಾರಂಭದಲ್ಲಿ ರಾಜ್ಯ ಮುಖಂಡ ಆರ್. ಶ್ರೀನಿವಾಸನ್, ಜಿಲ್ಲಾ ಕಾರ್ಯದರ್ಶಿ ಬಿ. ಶ್ರೀನಿವಾಸ್ ಉಪಾಧ್ಯಕ್ಷರಾದ ಕೆ. ಶ್ರೀನಿವಾಸ್ ಮುಖಂಡರುಗಳಾದ ಹೆಚ್.ಆರ್. ನಾರಾಯಣಸ್ವಾಮಿ, ಚಾಮುಂಡೇಶ್ವರಿ ದೇವಿ, ಭಾಗ್ಯಲಕ್ಷ್ಮಮ್ಮ ರಾಮಚಂದ್ರಪ್ಪ, ಜೆ.ಜಗನ್ನಾಥ್, ಪರ್ವೀನ್ ತಾಜ್ ಮುಂತಾದವರು ಉಪಸ್ಥಿತರಿದ್ದರು