ಶಾಂತಿಯಿಂದ ಜಗತ್ತಿನ ಏಳ್ಗೆ ಸಾಧ್ಯ -ಶಿಕ್ಷಣಾಧಿಕಾರಿ ಸಿ.ಆರ್. ಅಶೋಕ್

ವರದಿ : ಶಬ್ಬೀರ್ ಅಹ್ಮದ್ ,ಶ್ರೀನಿವಾಸಪುರ

ಕೋಲಾರ ಸೆಪ್ಟೆಂಬರ್ 21 : ಇಂದು ವಿಶ್ವ ಶಾಂತಿ ದಿನ. ಶಾಂತಿಯಿಂದ ಜಗತ್ತಿನ ಏಳ್ಗೆ ಸಾಧ್ಯ. ವಿಶ್ವವೇ ಶಾಂತಿಯತ್ತ ಸಾಗು ಎನ್ನುವ ಸಂದೇಶವನ್ನು ವಿಶ್ವ ಸಂಸ್ಥೆ ವಿಶ್ವಕ್ಕೆ ಸಾರಿದ ದಿನವೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳಾದ ಸಿ. ಆರ್ ಅಶೋಕ್ ಅಭಿಪ್ರಾಯ ಪಟ್ಟರು.
ನÀಗರದದಲ್ಲಿಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಬಾಲ್ಡ್‍ವಿನ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಶಾಂತಿ ದಿನಾಚರಣೆಯನ್ನು ಉದ್ಘಾಟಿಸಿ ಮಾತಾನಾಡಿದರು.
ಕ್ರೌರ್ಯದಿಂದ ಏನನ್ನೂ ಸಾಧಿಸಲಾರೆವು. ಶಾಂತಿಯೇ ಬದುಕನ್ನು ಹಸನಾಗಿಸುವ ಮೂಲ ಮಂತ್ರ ಎಂದು ವಿಶ್ವಸಂಸ್ಥೆ ಜಗತ್ತಿಗೆ ಸಾರಿದ ದಿನ. ಪ್ರಪಂಚಕ್ಕೆ ಶಾಂತಿಯ ಮೌಲ್ಯಗಳನ್ನು ಪರಿಚಯ ಮಾಡಿಕೊಡುವ ಸಲುವಾಗಿ ವಿಶ್ವಸಂಸ್ಥೆ ಸೆಪ್ಟೆಂಬರ್ 21 ನ್ನು ವಿಶ್ವ ಶಾಂತಿ ದಿನವನ್ನಾಗಿ ಘೋಷಿಸಿದೆ ಎಂದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಚೇರ್ಮನ್ ಗೋಪಾಲಕೃಷ್ಣ ಗೌಡ ಮಾತನಾಡುತ್ತಾ ಶಾಂತಿ ಸೌಹಾರ್ದತೆಯಿಂದ ಏಳಿಗೆ ಸಾಧ್ಯ. ಶಾಂತಿಯಿಂದ ಸಮಾಜದ ಸುವ್ಯವಸ್ಥೆ ಕಾಪಾಡಲು ಸಾಧ್ಯ. ಶಾಂತಿಯಿಂದ ಯುದ್ಧ ಗಲಭೆ ರಕ್ತಪಾತಗಳನ್ನು ತಡೆಯಲು ಸಾಧ್ಯ ಎಂಬುದನ್ನು ವಿಶ್ವ ಶಾಂತಿ ದಿನ ಸಾರುತ್ತದೆ ಎಂದರು.
ಪ್ರಾಂಶುಪಾಲರಾದ ಸುಜಾತ ಮಾತಾನಡುತ್ತಾ ಯುದ್ಧ ಮತ್ತು ಅಹಿಂಸೆಯನ್ನು ತೊಡೆದು ಹಾಕಿ ಶಾಂತಿ ಸಹಬಾಳ್ವೆಯಿಂದ ಬದುಕಬೇಕು ಎಂಬ ಸಂದೇಶವನ್ನು ಹೊತ್ತು ಪ್ರತಿವರ್ಷ ನವ ಪೀಳಿಗೆಗೆ ಶಾಂತಿಯ ಪ್ರಾಮುಖ್ಯತೆಯನ್ನು ಸಾರುತ್ತ ಮುನ್ನಡೆಯಲು ಈ ದಿನ ಆಚರಿಸಲಾಗುತ್ತದೆ ಎಂದರು.
ಶಿಕ್ಷಣ ಇಲಾಖೆಯ ಇಸಿಓ ಆರ್ ಶ್ರೀನಿವಾಸನ್ ಮಾತಾನಾಡಿ ಮಕ್ಕಳು ಗುರುಹಿರಿಯರಿಗೆ ಗೌರವಿಸುವ, ದೇಶಕ್ಕಾಗಿ ದುಡಿಯುವ, ದೇಶದ ಗೌರವ ಕಾಪಾಡುವ ಹಾಗೂ ಉತ್ತಮ ಪರಿಸರ ನಿರ್ಮಾಣ ಮಾಡುವ ಬಗ್ಗೆ ಆಲೋಚಿಸುವ ಕಡೆಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳು ಮಾನವೀಯತೆಯ ನೆಲೆಯಲ್ಲಿ ಜೀವನವನ್ನು ಅರ್ಥೈಸಿಕೊಂಡು ಸಾಗಬೇಕಾಗಿದೆ. ಈ ದೇಶದ ಬಡತನ ಹಸಿವು ನಿರುದ್ಯೋಗ ಹವಾಮಾನ ವೈಪರೀತ್ಯಗಳಿಂದ ಗಂಭೀರವಾದ ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ. ಹಾಗಾಗಿ ಇಂತಹ ಸಮಸ್ಯೆಗಳಿಂದ ಹೊರ ಬರಲು ಮಕ್ಕಳು ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸಿ ತಮ್ಮ ಬದುಕನ್ನು ಉಜ್ವಲಗೊಳಿಸಿಕೊಂಡಾಗ ಮಾತ್ರ ಇಡೀ ವಿಶ್ವವೇ ಕುಟುಂಬವಾಗಿ ಪರಿವರ್ತನೆ ಆಗುವುದರಲ್ಲಿ ಸಂದೇಶವೇ ಇಲ್ಲ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಶರಣಪ್ಪ ಗಬ್ಬೂರು ಮಾತಾನಾಡಿ ಶಾಂತಿ ನಮ್ಮೊಳಗೆ ಇದೆ. ಬೇರೆಲ್ಲೂ ಅದನ್ನು ಹುಡಕಬೇಡಿ. ಒಗ್ಗಟ್ಟಾಗಿ ಶಾಂತಿಯನ್ನು ರೂಪಿಸುವ ಕಡೆಗೆ ಇಡೀ ಜನ ಸಮುದಾಯ ಚಿಂತಿಸಬೇಕಾಗಿದೆ. ಶಾಂತಿ ಎಂದರೆ ಕೇವಲ ದೇಶ ದೇಶಗಳ ನಡುವೆ ಶಾಂತಿ ಸೌಹಾರ್ದಯುತ ಸಂಬಂಧವಲ್ಲ ಅದು ಮನುಷ್ಯ ಮನುಷ್ಯರ ನಡುವೆ ಸ್ನೇಹಯುತ ವಾತಾವರಣ ಸೃಷ್ಟಿ ಮಾಡುವುದೇ ನಿಜವಾದ ಶಾಂತಿ ಎಂದು ತಿಳಿಕೊಳ್ಳುತ್ತಾ ಕಣ್ಣ ಮುಂದೆ ಕಂಡು ಬರುವ ಇಂತಹ ಅನೇಕ ನಿಗೂಡ ಪ್ರಶ್ನೆಗಳಿಗೆ ಉತ್ತರ ನಮ್ಮಲ್ಲಿಯೇ ಇದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸಂಘದ ಜಿಲ್ಲಾಧ್ಯಕ್ಷ ಜಿ. ಶ್ರೀನಿವಾಸ, ಶಾಲೆಯ ವ್ಯವಸ್ಥಾಪಕರಾದ ಶಾಂತಕುಮಾರ್, ಸಂತೋμï ಕುಮಾರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ನಿರ್ದೇಶಕ ವೆಂಕಟಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂದೀಶ್ ಕುಮಾರ್, ಚಿಟ್ನಹಳ್ಳಿ ರಾಮಚಂದ್ರ ಮತ್ತು ಶಾಲೆಯ ಶಿಕ್ಷಕರು, ವಿದ್ಯಾರ್ಥಿ ಮಿತ್ರರು ಉಪಸ್ಥಿತರಿದ್ದರು.