ಕಳೆನಾಶಕ ಮತ್ತು ದ್ರವ ರೂಪದ ಗೊಬ್ಬರ ಸಿಂಪರಣೆ ಮಾಡುವುದು ಎಷ್ಟು ಮುಖ್ಯವೋ ಸಿಂಪರಕಗಳ ಆಯ್ಕೆ ಮತ್ತು ಅವುಗಳನ್ನು ಬಳಸುವ ವಿಧಾನ ಅಷ್ಟೇ ಮುಖ್ಯ

ವರದಿ : ಶಬ್ಬೀರ್ ಅಹ್ಮದ್ ,ಶ್ರೀನಿವಾಸಪುರ

ಕೋಲಾರ ; ಬೆಳೆಗಳನ್ನು ಸಂರಕ್ಷಿಸಲು ಪೀಡೆನಾಶಕಗಳನ್ನು, ಕಳೆನಾಶಕಗಳನ್ನು ಮತ್ತು ದ್ರವ ರೂಪದ ಗೊಬ್ಬರಗಳನ್ನು ಸಿಂಪರಣೆ ಮಾಡುವುದು ಎಷ್ಟು ಮುಖ್ಯವೋ ಸಿಂಪರಕಗಳ ಆಯ್ಕೆ ಮತ್ತು ಅವುಗಳನ್ನು ಬಳಸುವ ವಿಧಾನ ಅಷ್ಟೇ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರವು ಆಜಾದಿಕಾ ಅಮೃತ ಮಹೊತ್ಸವದ ಅಂಗವಾಗಿ ರೈತಭಾಂದವರಿಗೆ “ಕೃಷಿಯಲ್ಲಿ ಬಳಸುವ ವಿವಿಧ ಸಿಂಪರಕಗಳು ಮತ್ತು ಅವುಗಳ ಕಾರ್ಯವಿಧಾನ”ದ ಬಗ್ಗೆ ಸಾಮಥ್ರ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ದಿನಾಂಕ: 20.09.2021, ಹಮ್ಮಿಕೊಂಡಿತ್ತು ಎಂದು ಕಾರ್ಯಕ್ರಮದ ಸಂಯೋಜಕಿ ಡಾ. ಅಂಬಿಕಾ ಡಿ. ಎಸ್. ವಿಜ್ಞಾನಿ (ಸಸ್ಯ ಸಂರಕ್ಷಣೆ) ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟೆಯ ಕೃಷಿ ಅಭಿಯಂತರ ಸಹಾಯಕ ಪ್ರಾದ್ಯಾಪಕರಾದ ಶ್ರೀ. ಶ್ರೀನಾಥ. ಎ. ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಬೆಳೆಗಳ ಮೇಲೆ ನೀರಿನಲ್ಲಿ ಕರಗುವ ರಸಗೊಬ್ಬರಗಳು, ಕಳೆನಾಶಕಗಳು, ಪಿಡೆನಾಶಕಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಸಿಂಪಡಿಸಲು ಬಳಸುವ ಸಾಧನವೇ ಸಿಂಪಡಣಾ ಯಂತ್ರ ಮತ್ತು ಅವುಗಳ ಕಾರ್ಯ ವಿಧಾನಗಳಾದ *ರಾಸಾಯನಿಕ ದ್ರಾವಣವನ್ನು ಪರಿಣಾಮಕಾರಿ ಗಾತ್ರದ ಸೂಕ್ಷ್ಮ ಹನಿಗಳಾಗಿ ಒಡೆಯುವುದು. *ಸಸ್ಯಗಳ ಮೇಲೆ ಏಕರೂಪವಾಗಿ ಹನಿಗಳನ್ನು ವಿತರಿಸುವುದು, *ರಾಸಾಯನಿಕಗಳು ಧನಾತ್ಮಕವಾಗಿ ತಲುಪಲು ಸಾಕಷ್ಟು ಒತ್ತಡದೊಂದಿಗೆ ರಾಸಾಯನಿಕಗಳನ್ನು ಅನ್ವಯಿಸುವುದು. *ರಾಸಾಯನಿಕ ದ್ರಾವಣವನ್ನು ಪೋಲಾಗುವುದನ್ನು ತಪ್ಪಿಸಲು ಸಸ್ಯಗಳ ಮೇಲೆ ಅನ್ವಯಿಸುವ ದ್ರವದ ಪ್ರಮಾಣವನ್ನು ನಿಯಂತ್ರಿಸುವುದರ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ನಂತರ ಉತ್ತಮ ಗುಣಮಟ್ಟದ ಸಿಂಪಡಣಾ ಯಂತ್ರವು ಬಯಸಿದ ಗಾತ್ರದಲ್ಲಿ ಸ್ಥಿರವಾದ ಹನಿಗಳನ್ನು ಉತ್ಪಾದಿಸಬೇಕು, ದ್ರವವನ್ನು ಸಾಕಷ್ಟು ಒತ್ತಡದಲ್ಲಿ ತಲುಪಿಸಬೇಕು, ಇದರಿಂದ ಸಿಂಪರಣಾ ದ್ರಾವಣವು ಎಲ್ಲಾ ಎಲೆಗಳನ್ನು ತಲುಪುತ್ತವೆ ಮತ್ತು ಸಸ್ಯದ ಮೇಲೆ ಏಕರೂಪವಾಗಿ ಹರಡುತ್ತವೆ ಎಂದು ತಿಳಿಸಿದರು. ಜೊತೆಗೆ ಸಿಂಪರಣಾ ಯಂತ್ರವು ಹಗುರವಾಗಿರಬೇಕು ಆದರೆ ಸಾಕಷ್ಟು ಬಲವಾಗಿರಬೇಕು, ಸುಲಭವಾಗಿ ಕೆಲಸ ಮತ್ತು ರಿಪೇರಿ ಮಾಡುವಂತಿರಬೇಕು ಎಂದು ಸಾಕಷ್ಟು ಮಾಹಿತಿ ನೀಡಿದರು.
ಕಳೆನಾಶಕಗಳನ್ನು ಸಿಂಪಡಿಸುವಾಗ ಪ್ರತ್ಯೇಕ ಸಿಂಪಡಕಗಳನ್ನು ಉಪಯೋಗಿಸುವುದು ಯಾವುದೇ ಕಾರಣಕ್ಕೆ ಅವುಗಳನ್ನು ಪೀಡೆನಾಶಕ ಸಿಂಪರಣೆಗೆ ಬಳಸಬಾರದು ಅಲ್ಲದೇ, ಕಳೆನಾಶಕ ಸಿಂಪರಣೆ ಮಾಡಲು ಹಾಲೋ ಕೋನ್ ನಾಜಲ್ (ನಳಿಕೆ) ಮತ್ತು ಪೀಡೆÉನಾಶಕಗಳಾಗಿ ಫ್ಲಾಟ್ ಕೋನ್ ನಾಜಲ್ (ನಳಿಕೆ) ಉಪಯೋಗಿಸುವುದು ಸೂಕ್ತ ಎಂದು ತಿಳಿಸಿದರು. ಅಲ್ಲದೇ ರೈತರ ಸಿಂಪರಣೆಯನ್ನು ಮಾಡುವಾಗ ಸಂರಕ್ಷಣಾ ಉಡುಪನ್ನು ಧರಿಸಿ, ಕಾಲಿಗೆ ಬೂಟು, ಕೈಗೆ ಕೈಗವಸಗಳನ್ನು, ಕಣ್ಣಿಗೆ ಕನ್ನಡಕವನ್ನು ಸಿಂಪರಣೆಯನ್ನು ಕೈಗೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಸಿಂಪಡಣೆಯಾದ ವಿವಿಧ ಭಾಗಗಳ ಮತ್ತು ಅವುಗಳ ಕಾರ್ಯಕ್ಷಮತೆ ಹೆಚ್ಚಿಸುವ ವಿಧಾನಗಳನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕೃಷಿಯಲ್ಲಿ ಸಿಂಪರಣೆಗೆ ಬಳಸುತ್ತಿರುವ ದ್ರೋಣದ ಬಳಕೆ ಬಗ್ಗೆ ವಿವರಿಸಿದರು. ಸುಮಾರು 50 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.