ದುಡಿಯುವ ಕೈಗೆ ಕೆಲಸ ಕೊಡದೆ ಜೆಸಿಬಿ ಮೂಲಕ ಕಾಮಗಾರಿ ಮಾಡುತ್ತಿರುವವರ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿ

ವರದಿ : ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ

ಕೋಲಾರ-ಸೆ-20, ನರೇಗಾ ಕಾಮಗಾರಿಯನ್ನು ದುಡಿಯುವ ಕೈಗೆ ಕೆಲಸ ಕೊಡದೆ ಜೆಸಿಬಿ ಮೂಲಕ ವಿವಿಧ ಕಾಮಗಾರಿಗಳನ್ನು ಮಾಡುತ್ತಿರುವವರ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿ ಪಂಚಾಯಿತಿಗಳಲ್ಲಿನ ಭ್ರಷ್ಟಾಚಾರತೆ ತನಿಖೆ ಮಾಡಲು ಸೂಕ್ತ ಅಧಿಕಾರಿಗಳಿಂದ ತನಿಖೆ ಮಾಡಬೇಕೆಂದು ರೈತ ಸಂಘದಿಂದ ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಮುಂದೆ ಜೆ.ಸಿ.ಬಿ ಸಮೇತ ಹೋರಾಟ ಮಾಡಿ, ಉಪ ಕಾರ್ಯದರ್ಶಿಗಳಾದ ಸಂಜೀವಪ್ಪರವರಿಗೆ ಮನವಿ ನೀಡಿ, ಆಗ್ರಹಿಸಲಾಯಿತು.
ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷಗಳು ಕಳೆದರೂ ಹಳ್ಳಿಗಳ ಅಭಿವೃದ್ಧಿ ಮರುಚಿಕೆಯಾಗಿದೆ. ಕೇಂದ್ರ ಸರ್ಕಾರದ ದುಡಿಯುವ ಕೈಗೆ ಕೆಲಸ ನೀಡದೆ ನರೇಗ ಯೋಜನೆ ಇಂದು ಜೆ.ಸಿ.ಬಿ ಯೋಜನೆಯಾಗಿ ಮಾರ್ಪಟ್ಟು ಬಡವರ ಹೆಸರಿನಲ್ಲಿ ಜಾಬ್‍ಕಾರ್ಡ್‍ಗಳನ್ನು ಸೃಷ್ಟಿ ಮಾಡಿ ಜೆ.ಸಿ.ಬಿ ಮುಖಾಂತರ ಕೆಲಸ ಮಾಡಿ ಬಡವರ ಹೆಸರಿನಲ್ಲಿ ಹಣವನ್ನು ಪಡೆದುಕೊಂಡು ಅವರ ಅನ್ನವನ್ನು ಅಧಿಕಾರಿಗಳಿಗೆ ಜನ ಪ್ರತಿನಿಧಿಗಳಿಗೆ ಚಿನ್ನದ ಮೊಟ್ಟೆ ಇಡುವ ಯೋಜನೆಯಾಗಿದೆ ಎಂದು ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಅಧಿಕಾರಿಗಳ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ರವರು ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶಗಳ ಬಡ ಕೂಲಿಕಾರ್ಮಿಕರಿಗೆ ಅನುಕೂಲವಾಗಲೆಂದು ದುಡಿಯುವ ಕೈಗಳಿಗೆ ಕೆಲಸ ನೀಡಲು ಸಾವಿರಾರು ಕೋಟಿ ಅನುದಾನಗಳನ್ನು ಬಿಡುಗಡೆ ಮಾಡುತ್ತಿದ್ದರೆ ಅದನ್ನು ಸಮರ್ಪಕವಾಗಿ ನಿರ್ವಹಿಸಬೇಕಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸರ್ಕಾರಕ್ಕೆ ಸವಾಲು ಎಂಬಂತೆ ದುಡಿಯೋಣ ಅಭಿಯಾನ ಇಂದು ಜೆಸಿಬಿ ಮುಖಾಂತರ ಕಾಮಗಾರಿ ಮಾಡಿ ಜನಸಾಮಾನ್ಯರ ಕಣ್ಣು ತಪ್ಪಿಸಿ ಹಣ ಮಾಡೋಣ ಬಾ ಎಂಬ ಅಭಿಯಾನವಾಗಿ ಬದಲಾಗಿದೆ. ಹುತ್ತೂರು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನರೇಗಾ ಯೋಜನೆಯ ರಸ್ತೆ, ಕೆರೆಗಳಲ್ಲಿ ಬದು ನಾಲೆಗಳ ನಿರ್ಮಾಣ ಕೆರೆ-ಕುಂಟೆ ಸ್ವಚ್ಛತೆ ಸ್ಮಶಾನ, ಗೋಕುಂಟೆ, ನಮ್ಮ ಹೊಲ ನಮ್ಮ ರಸ್ತೆ, ಕಾಲುವೆ ಅಭಿವೃದ್ದಿ ಹಾಗೂ ಗ್ರಾಮೀಣ ಪ್ರದೇಶಗಳ ಕೆಲವು ಕಾಮಗಾರಿಗಳನ್ನು ರಾಜಾರೋಷವಾಗಿ ದುಡಿಯುವ ಬಡವರ ಕೈಗೆ ಕೆಲಸ ಕೊಡದೆ ರಾತ್ರೋರಾತ್ರಿ ಜೆಸಿಬಿ ಮುಖಾಂತರ ಕಾಮಗಾರಿಯನ್ನು ಮುಗಿಸುತ್ತಿದ್ದರೂ ಅಧಿಕಾರಿಗಳ ಮೌನವೇಕೆ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ಮಾತನಾಡಿ ನರೇಗಾದಲ್ಲಿ ಕೆಲಸ ಮಾಡುವ ಮೊದಲು ಆ ಕಾಮಗಾರಿಗೆ ಆಗುವ ಅಂದಾಜು ವೆಚ್ಚ, ಕೂಲಿ ಕಾರ್ಮಿಕರ ಪಟ್ಟಿ (ಎನ್ಎಂಆರ್) ಕ್ರಿಯಾಯೋಜನೆ ಮತ್ತಿತರ ಕಾನೂನಾತ್ಮಕ ನಿಯಮಗಳನ್ನು ಪಾಲನೆ ಮಾಡುವ ಜೊತೆಗೆ ಕಾಮಗಾರಿ ಮಾಡುವ ಸ್ಥಳವನ್ನು ಸಂಬಂಧಪಟ್ಟ ಎಂಜಿನಿಯರ್ ಹಾಗೂ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ಮಾಡಿ ಜಿಪಿಎಸ್ ಪೂರ್ಣಗೊಳಿಸಿದ ನಂತರ ಪ್ರತಿದಿನ ಕಾಮಗಾರಿಯ ಸ್ಥಳಕ್ಕೆ ಹೋಗಿ ಕೂಲಿ ಕಾರ್ಮಿಕರ ಪೆÇೀಟೋಗಳನ್ನು ತೆಗೆದು ಕಾಮಗಾರಿಯ ಸಂಪೂರ್ಣ ದಾಖಲೆಗಳನ್ನು ಕಡತ ಮಾಡಬೇಕು. ಆದರೆ ಇಂದು ಅದು ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ನಾವೇ ರಾಜ ನಾವೇ ಮಂತ್ರಿ ಎಂಬಂತೆ ತಮಗೆ ಇಷ್ಟ ಬಂದ ಕಾಮಗಾರಿಗಳನ್ನು ಹಾಕಿಸಿಕೊಂಡು ಲಕ್ಷರೂಪಾಯಿ ವೆಚ್ಚವಾಗುವ ಕಾಮಗಾರಿಗೆ 5 ಲಕ್ಷದಿಂದ 50 ಲಕ್ಷದವರೆಗಿನ ಅಂದಾಜು ಪಟ್ಟಿ ಕ್ರಿಯಾ ಯೋಜನೆ ತಯಾರು ಮಾಡಿ ಸ್ಥಳ ಪರಿಶೀಲನೆ, ಪೋಟೋ ಹಾಗೂ ಜಿ.ಪಿ.ಎಸ್. ಮಾಡುವ ಮುಖಾಂತರ ಕಾಮಗಾರಿ ಪ್ರಾರಂಭ ಮಾಡಿ ಅಂತ್ಯದ ವರೆಗೂ ಪ್ರತಿನಿತ್ಯ ಪರಿಶೀಲನೆ ಮಡಬೇಕಾದ ಅಧಿಕಾರಿಗಳು ನಾಪತ್ರೆಯಾಗಿದ್ದಾರೆಂದು ಅಸಮದಾನ ವ್ಯಕ್ತಪಡಿಸಿದರು. ಒಂದುವಾರದೊಳಗೆ ಜಿಲ್ಲಾದ್ಯಂತ 158 ಪಂಚಾಯಿತಿ 1950 ಹಳ್ಳಿಯಲ್ಲಿನ ಕಾಮಗಾರಿಗಳ ಅವ್ಯವಹಾರ ಹಾಗೂ 14 ಮತ್ತು 15 ರ ಹಣಕಾಸು ಯೋಜನೆಯಲ್ಲಿನ ಭ್ರಷ್ಟಾಚಾರತೆ ತನಿಖೆ ನಡೆಸಲು ವಿಶೇಷ ತಂಡ ರಚನೆ ಮಾಡಿ ಹಳ್ಳಿಗಳ ಅಭಿವೃದ್ಧಿ ಹಣವನ್ನು ನುಂಗಿ ನೀರು ಕುಡಿದಿರುವ ಕಾಮಗಾರಿ ಹಾಗೂ ಅಧಿಕಾರಿಗಳು ಜನ ಪ್ರತಿನಿಧಿಗಳ ವಿರುದ್ದ ಕ್ರಮ ಕೈಗೊಳ್ಳದೇ ಹೋದರೆ ಸಾವಿರಾರು ಟ್ರಾಕ್ಟರ್‍ನೊಂದಿಗೆ ಮಾನ್ಯ ಮುಖ್ಯ ಮಂತ್ರಿಗಳ ಮನೆಯನ್ನು ಮುತ್ತಿಗೆ ಹಾಕುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ಕಾರ್ಯದರ್ಶಿ ಸಂಜೀವಪ್ಪರವರು ನೀವು ಹೇಳುತ್ತಿರುವುದು ಸತ್ಯವಾಗಿದೆ. ಜೆ.ಸಿ.ಬಿ ಗಳ ಮೂಲಕ ಕೆಲಸ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಿ ನರೇಗಾ ಯೋಜನೆಯಲ್ಲಿ ಸರ್ಕಾರದ ಆದೇಶದಂತೆ ದುಡಿಯುವ ಕೈಗಳಿಗೆ ಕೆಲಸ ಕೊಡುವ ಭರವಸೆ ನೀಡಿದರು.
ಹೋರಾಟದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್, ಮರಗಲ್ ಮುನಿಯಪ್ಪ, ಮೂರಾಂಡಹಳ್ಳಿ ಶಿವಾರೆಡ್ಡಿ, ನಲ್ಲಾಂಡಹಳ್ಳಿ ಕೇಶವ, ಯಲ್ಲಪ್ಪ, ಹರೀಶ್, ಮಂಗಸಂದ್ರ ತಿಮ್ಮಣ್ಣ, ನಗರ ಸಂಚಾಲಕ ಮಂಗಸಂದ್ರ ನಾಗೇಶ್, ವೆಂಕಟೇಶಪ್ಪ, ಅಶ್ವಥಪ್ಪ, ಕುವಣ್ಣ, ಸುಪ್ರಿಂಚಲ , ನಳಿನಿ.ವಿ, ನಾಗರತ್ನಮ್ಮ, ಚೌಡಮ್ಮ. ನಾಗವೇಣಿ ವೆಂಕಟರತ್ನಮ್ಮ, ಚಂದ್ರಪ್ಪ, ಮುಂತಾದವರು ಇದ್ದರು.