ವಿದ್ಯಾರ್ಥಿಯಲ್ಲಿ ಪ್ರತಿಭೆ ಗುರುತಿಸಿ ಅವರಿಗೆ ಸೂಕ್ತ ರೀತಿಯಲ್ಲಿ ತರಬೇತಿ ನೀಡಿ ರಾಜ್ಯ ರಾಷ್ಟಮಟ್ಟದಲ್ಲಿ ಗುರುತಿಸುವಂತೆ ಮಾಡಿ

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರ
ಒಬ್ಬ ವಿದ್ಯಾರ್ಥಿಯಲ್ಲಿ ಯಾವ ಪ್ರತಿಭೆ ಇದೆ ಎಂದು ಗಮನಿಸಿ ಅವರಿಗೆ ಸೂಕ್ತ ರೀತಿಯಲ್ಲಿ ತರಬೇತಿ ನೀಡಿ ರಾಜ್ಯ ರಾಷ್ಟಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ದೈಹಿಕ ಶಿಕ್ಷಕರ ಪಾತ್ರ ಮಹತ್ವವಳ್ಳದ್ದು ಎಂದು ದೈಹಿಕ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ರಮೇಶ್‍ರೆಡ್ಡಿ ತಿಳಿಸಿದರು.

ತಾಲ್ಲೂಕಿನ ರೋಣೂರು ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಒಂದು ದಿನದ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ರಮೇಶ್‍ರೆಡ್ಡಿ ವಿದ್ಯಾರ್ಥಿಗಳಿಗೆ ಶಿಸ್ತು, sಸಮಯ ಪ್ರಜ್ಞೆ, ಸೇವಾ ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಬೆಳಸುವ ಜವಾಬ್ದಾರಿ ದೈಹಿಕ ಶಿಕ್ಷಕರದ್ದಾಗಿದೆ. ಮಕ್ಕಳಲ್ಲಿ ದೇಶ ಪ್ರೇಮ ವೈಯುಕ್ತಿಕ ಸ್ವಚ್ಚತೆ, ಸಹಕಾರ, ಮನೋಭಾವ, ಭಾವ್ಯೆಕತೆ ಬೆಳಸುವುದು ಹಾಗೂ ದೈಹಿಕ, ಮಾನಸಿಕ, ಆರೋಗ್ಯವಂತ ಪ್ರಜೆಗಳಾಗಿ ರೂಪಿಸುವಲ್ಲಿ ದೈಹಿಕ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ನನ್ನ ಕಾಲಾವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿದ್ದೇನೆ. ಈ ತಾಲ್ಲೂಕಿನ ಶಿಕ್ಷಕರು ಸಂಪೂರ್ಣ ಸಹಕಾರ ನೀಡಿದ್ದರೂ ಸಂಘ ಗೌರವಿತವಾಗಿ ನಡೆದುಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ಹಾಗೆಯೇ ನಡಿಸಿಕೊಂಡು ಹೋಗಬೇಕು. ನಮ್ಮ ದೈಹಿಕ ಶಿಕ್ಷಕರ ಸಂಘ ರಾಜ್ಯದಲ್ಲಿಯೇ ಒಂದು ಮಾದರಿ ಸಂಘವಾಗಿ ನಿರ್ಮಾಣವಗಬೇಕು ಈ ಸಂಘಕ್ಕೆ ನನ್ನ ಉಸಿರುವರಿಗೂ ಸಹ ನನ್ನ ಸಹಕಾರ ಇರುತ್ತದೆ. ನನ್ನ ಅವಧಿಯಲ್ಲಿ ನನಗೆ ಸಹಕರಿಸಿದ ಶಿಕ್ಷಕ ವೃಂದವರಿಗೆ ನನ್ನ ಧನ್ಯವಾದಗಳು ತಿಳಿಸಿದರು. ಸರ್ಕಾರಿ ನೌಕರರ ಅಧ್ಯಕ್ಷ ಬಂಗವಾದಿ ನಾಗರಾಜ್ ಮಾತನಾಡಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಇಬ್ಬರೂ ಸಮರ್ಪಕವಾಗಿ ಸೇವೆ ಮಾಡಿದರೆ ಶಾಲೆಯ ಶೈಕ್ಷಣಿಕ ಅಭಿವೃದ್ದಿಗೆ ನಾಂದಿಯಾಗುತ್ತದೆ. ಇವರು ಇಬ್ಬರು ಉತ್ತಮ ರೀತಿಯಲ್ಲಿ ಸೇವೆ ಮಾಡಿ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಬೇಕು ಎಂದರು. ದೈಹಿಕ ಶಿಕ್ಷಣದಿಂದ ಪ್ರತಿಯೊಬ್ಬರಿಗೂ ಮಾನಸಿಕ ದೈಹಿಕವಾಗಿ ಸಧೃಡರಾಗಲು ಕಾರಣವಾಗುತ್ತದೆ. ಈ ತಾಲ್ಲೂಕಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ತುಂಬಾ ಬಲಿಷ್ಟಬಾಗಿದೆ. ನೀವು ಎಲ್ಲರೂ ಶ್ರಮವಹಿಸಿ ಕೆಲಸ ಮಾಡಿದ್ದೀರಿ ಸಂಘಕ್ಕೆ ಅಧ್ಯಕ್ಷರಾದ ರಮೇಶ್‍ರೆಡ್ಡಿಯವರು ತುಂಬ ಶ್ರಮವಹಿಸಿ ಕೆಲಸ ಮಾಡಿದ್ದಾರೆ ಜಿಲ್ಲೆಯಲ್ಲಿಯೇ ಒಂದು ಮಾದರಿ ಸಂಘವನ್ನಾಗಿ ಮಾಡಿದ್ದಾರೆ ನಿಮ್ಮಯೊಂದಿಗೆ ನಾನು ಸದಾ ಇರುತ್ತೇನೆ ಎಂದರು. ಜಿಲ್ಲಾ ದೈಹಿಕ ಸಂಘದ ಉಪಾಧ್ಯಕ್ಷ ಪರಿವೀಕ್ಷಣಾಧಿಕಾರಿ ಕೆ.ವಿ. ನಾರಾಯಣಸ್ವಾಮಿ ಮಾತನಾಡಿ ಶಾಲೆಯಲ್ಲಿ ಶಿಸ್ತು ಸಮಾಜದೊಂದಿಗೆ ಬಾಂದವ್ಯ, ವಿದ್ಯಾರ್ಥಿಗಳ ರಕ್ಷಣೆ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹೆಚ್ಚಿನ ಮುತುವರ್ಜಿ ಇರುವದರಿಂದ ಶಾಲೆ ಬೆಳಗಲು ಸಾಧ್ಯ ಎಂದರು. ದೈಹಿಕ ಶಿಕ್ಷಕರು ತುಂಬ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಉತ್ತಮ ಕ್ರಿಡಾಕೂಟಗಳನ್ನು ನಡೆಸಿ ಜಿಲ್ಲೆಯಲ್ಲಿಯೇ ನಮ್ಮ ತಾಲ್ಲೂಕು ಒಳ್ಳೆಯ ಹೆಸರನ್ನು ಪಡೆದುಕೊಂಡಿದೆ. ಉತ್ತಮ ಪ್ರಶಂಸೆಯನ್ನು ತಂದುಕೊಟ್ಟಿದೆ ಶಿಕ್ಷಕರು ಉತ್ತಮ ವ್ಯಕ್ತಿತ್ವನ್ನು ರೂಪಿಸಿಕೊಳ್ಳಬೇಕು ಎಂದ ಇವರು ಶಾಲೆಗೆ ಬೇಕಾದ ಉಪಕರಣಗಳನ್ನು ಖರೀದಿಸುವಾಗ ಗುಣಮಟ್ಟದಿಂದ ಇರಬೇಕು ಮಕ್ಕಳನ್ನು ಶಾಲೆಗೆ ಬರುವಂತೆ ಪ್ರರೇಪಿಸುವ ಕೆಲಸ ಮಾಡಬೇಕು ಎಂದರು.

ಇದೇ ಸಮಯದಲ್ಲಿ ತಾಲ್ಲೂಕು ದೈಹಿಕ ಶಿಕ್ಷಕರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವ ಆದ್ಯಕ್ಷರಾಗಿ ರಮೇಶ್‍ರೆಡ್ಡಿ ತಾಲ್ಲೂಕು ಅಧ್ಯಕ್ಷರಾಗಿ ವೆಂಕಟಸ್ವಾಮಿ ಪ್ರಧಾನ ಕಾರ್ಯದರ್ಶಿಯಾಗಿ ಆರ್. ಕೃಷ್ಣಯ್ಯ, ಖಜಾಂಚಿಯಾಗಿ ರೆಡ್ಡೆಮ್ಮ ಆಯ್ಕೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೆಚ್.ವಿ. ಆಶೋಕ್ ಕುಮಾರ್, ಸಿ.ಆರ್.ಪಿ. ವೆಂಕಟರೆಡ್ಡಿ. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟಸ್ವಾಮಿ ಸಾಂಸ್ಕøತಿಕ ಕಾರ್ಯದರ್ಶಿ ಕಾವ್ಯಶ್ರೀ, ನರಸಮ್ಮ, ಇನ್ನಿತರರು ಉಪಸ್ಥಿತರಿದ್ದರು.