ತಾಡಿಗೋಳ್ನಲ್ಲಿ ವಿದ್ಯಾರ್ಥಿನಿಯರ ಹಾಗೂ ಪೋಷಕರ ಮೇಲೆ ದೌರ್ಜನ್ಯವೆಸಿಗಿದವರ ಮೇಲೆ ಶೀಘ್ರ್ರವೇ ಶಿಕ್ಷೆಯಾಗಬೇಕು

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರ: ತಾಡಿಗೋಳ್ ಕ್ರಾಸ್‍ನಲ್ಲಿ ವಿದ್ಯಾರ್ಥಿನಿಯರ ಹಾಗೂ ಅವರ ಪೋಷಕರ ಮೇಲೆ ದೌರ್ಜನ್ಯವೆಸಿಗಿದವರ ಮೇಲೆ ಶೀಘ್ರ್ರವೇ ಶಿಕ್ಷೆಯಾಗಬೇಕು ಸಮಾಜದಲ್ಲಿ ಮಹಿಳೆಯರು ಸ್ವತಂತ್ರವಾಗಿ ಬದಕಲು ವಾತವರಣವನ್ನು ಸೃಷ್ಠಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದಿಂದ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕಿನ ಗೌನಿಪಲ್ಲಿ, ತಾಡಿಗೋಳ್ ಕ್ರಾಸ್, ಇಂದಿರಾಭವನ ವೃತ್ತ ತಾಲ್ಲೂಕು ಕಛೇರಿಯ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖಂಡರಾದ ಶಾಂತಮ್ಮ ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತವೆ. ಇದರಿಂದ ಹೆಣ್ಣು ಮಕ್ಕಳು ಭಯಬೀತರಾಗಿ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹೆಣ್ಣು ಮಕ್ಕಳ ರಕ್ಷಣೆಯ ಹೊಣೆ ಹೊತ್ತಿರುವಂತಹ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ. ಇತ್ತೀಚಿಗೆ ತಾಡಿಗೋಳ್ ಕ್ರಾಸ್‍ನಲ್ಲಿ ನಡೆದ ಘಟನೆ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದರು.
ಹೆಣ್ಣು ಮಕ್ಕಳ ಮೇಲೆ ಸುಮಾರು 50 ರಿಂದ 60 ಜನರು ಗುಂಪು ಕಟ್ಟಿಕೊಂಡು ಸ್ಕೂ ಡೈವರ್, ದೊಣ್ಣೆಗಳು, ಮುಂತಾದ ಮಾರಕಾಸ್ತುಗಳಿಂದ ಹಲ್ಲೆ ಮಾಡಿ ಹೆಣ್ಣು ಮಕ್ಕಳಿಗೆ ಕೂದಲು ಹಿಡಿದು ಎಳೆದಾಡಿ ಮುಖ-ಮೂತಿ ನೋಡದೆ ಹಿಗ್ಗಾ-ಮುಗ್ಗಾ ಥಳಿಸಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಮಾಡಿರುತ್ತಾರೆ. ಜಿಮ್ ಅನಿಲ್ ಎಂಬ ವ್ಯಕ್ತಿ ಗ್ರಾಮ ಪಂಚಾಯಿತಿ ಸದಸ್ಯಳ ಮಗನಾಗಿದ್ದು ತನ್ನ ತಾಯಿಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಜಿಮ್‍ನಲ್ಲಿ ಸಧೃಡ ಯುವಕರನ್ನು ತೆಯಾರು ಮಾಡಿ ದೇಶಕ್ಕೆ ನೀಡುವ ಬದಲು ಇಂತಹ ಕ್ರೂರ ಹೇಯ ಕೃತ್ಯಗಳನ್ನು ನಡೆಸಲು ಗುಂಪು ಮಾಡಿರುವುದು ವಿಪರ್ಯಾಸ ಆಗಿದೆ. ಕೂಡಲೆ ಜಿಮ್ ಅನಿಲ್ ಎಂಬ ವ್ಯಕ್ತಿಯ ಜಿಮ್ ಲೈಸ್ಸ್‍ನ್ನು ರದ್ದು ಮಾಡಬೇಕು ಬಸ್‍ನಲ್ಲಿ ಪ್ರಯಾಣ ಮಾಡಲು ಎಲ್ಲಾ ಬಸ್‍ಗಳಲ್ಲಿ ಸಿಸಿ ಟಿ ವಿ ಕ್ಯಾಮರ್ ಆಳವಡಿಸಬೇಕು. ಬಸ್‍ಗಳಲ್ಲಿ ಮಹಿಳೆಯರಿಗೆ ಮಹಿಳಾ ಸೀಟ್‍ಗಳನ್ನು ಮಹಿಳೆಯರಿಗೆ ಮೀಸಲಿಡಬೇಕು ಹಾಗೆಯೇ ನೊಂದ ಹೆಣ್ಣು ಮಕ್ಕಳಿಗೆ ಅವರ ವಿದ್ಯಾಭ್ಯಾಸ ಮುಂದುವರಿಯಲು ಬೇಕಾದ ಎಲ್ಲಾ ಸುರಕ್ಷತಾ ವ್ಯವಸ್ತೆಯನ್ನು ಒದಗಿಸಿಕೊಡಬೇಕು.
ಕಾಲೇಜುಗಳ ಹಾಗೂ ಬಸ್ ನಿಲ್ದಾಣಗಳ ಬಳಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ಚುಡಾಯಿಸಿ ಕಿರುಕುಳ ನೀಡುವ ಪುಂಡ ಪೋಕಿರಿಗಳ ಸದೆಬಡಿಯಲು ಕೋಲಾರಮ್ಮ ಪಡೆ ಮತ್ತು ಓಬವ್ವ ಪಡೆಗಳಂತಹ ರಕ್ಷಣಾ ಪಡೆಗಳನ್ನು ಸಮರ್ಪಕವಾಗಿ ರೂಪಿಸಿ ಜಾರಿಗೆ ತರಬೇಕು ನೊಂದವರಿಗೆ ಪರಿಹಾರವಾಗಿ ಅರ್ಥಿಕ ಸಹಾಯ ವಷ್ಟೆ ಅಲ್ಲದೆ ಮಾನಸಿಕವಾಗಿ ಅವರಿಗೆ ದೈರ್ಯವನ್ನು ತುಂಬುವ ಕೆಲಸ ಮಾಡಬೇಕು ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಕೂಡಲೆ ಒದಗಿಸಬೇಕು ಈ ಘಟನೆಯಲ್ಲಿ ಬಾಗಿಯಾಗಿರುವ ಆರೋಪಿಗಳಿಗೆ ಕಠಿಣ ಕಾನೂನುಕ್ರಮ ಜರುಗಿಸಬೇಕು. ಮಹಿಳೆಯರ ರಕ್ಷಣೆಗೆ ಪ್ರಮುಖ್ಯತೆ ನೀಡಿ ಸುರಕ್ಷಿತ ಸಮಾಜ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು. ಇದೇ ಸಮಯದಲ್ಲಿ ತಹಶಿಲ್ದಾರ್ ಎಸ್.ಎಂ.ಶ್ರೀನಿವಾಸ್ ಮನವಿ ಪತ್ರ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಯ ಮುಖಂಡರಾದ ವೆಂಕಟಾಚಲಪತಿ, ಎ. ನಳನಿಗೌಡ, ಲಕ್ಷ್ಮೀ, ಶಿಲ್ಪ, ನೇತ್ರ. ಕೋಲಾರ ಮಹಿಳಾ ಸಮಾಖ್ಯಾ ಸಿಬ್ಬಂದಿಯಾದ ಕೆ.ಅರುಣ, ಪದ್ಮ, ರುಚಿತ, ಶ್ಯಾಮಲ, ಅನುಷ, ಶಶಿರಾಜ್, ಶ್ರೀನಾಥ, ವೇಣು, ಪವನ್, ಇನ್ನೀತರರು ಉಪಸ್ಥಿತರಿದ್ದರು.