JANANUDI.COM NETWORK
ಉತ್ತರ ಪ್ರದೇಶದ ಮೂಲದ ವಿಶ್ವಾಸ್ ಸೈನಿ(39) ಸತತ 130 ದಿನಗಳ ಕಾಲ ಕೊರೊನಾ ವೈರಸ್‌ನೊಂದಿಗೆ ಆಸ್ಪತ್ರೆಯಲ್ಲಿ ಹೋರಾಡಿ ಕೊನೆಗೂ ಕೊರೊನಾ ಗೆದ್ದು ಮನೆಗೆ ಬಂದಿದ್ದಾರೆ. ವಿಶ್ವಾಸ್ ಸೈನಿ ಕೊರೊನಾ ಪಾಸಿಟಿವ್ ಆದ ಹಿನ್ನೆಲೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಕೊರೊನಾ ಗುಣವಾಗದ ಹಿನ್ನೆಲೆಯಲ್ಲಿ ಸತತ 130 ದಿನಗಳ ಕಾಲ ಚಿಕಿತ್ಸೆ ಪಡೆಯ ಬೇಕಾಯ್ತು. ಇದೀಗ ಕೊರೊನಾ ವಿರುದ್ಧದ ಹೋರಾಟದಲ್ಲಿ ಅವರು ಗೆದ್ದಿದ್ದಾರೆ.
ಸೈನಿ ಅವರು ಕೊರೊನಾದಿಂದ ಮುಕ್ತವಾಗಿದ್ದಾರೆ. ಎಪ್ರಿಲ್ 28 ರಂದು ಅವರಿಗೆ ಕೊರೊನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಇರುವುದು ತಿಳಿದುಬಂದಿತ್ತು. ಆದರೆ ಆರಂಭದಲ್ಲಿ ಅವರಿಗೆ ಮನೆಯಲ್ಲಿ ಅವರ ಆರೋಗ್ಯ ಸ್ಥಿತಿ ತೀರ ಹದಗೆಟ್ಟು ಮೀರತ್‌ನ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಪ್ರಮುಖವಾಗಿ ಅವರಿಗೆ ವೆಂಟಿಲೇಟರ್ ಮೂಲಕವೇ ಚಿಕಿತ್ಸೆ ನೀಡಲಾಗುತ್ತಿತ್ತು, ಹೀಗೆ ಸತತ 130 ದಿನಗಳ ಕಾಲ ಅವರಿಗೆ ಚಿಕಿತ್ಸೆ ನೀಡಿದ ಬಳಿಕ ಇದೀಗ ಅವರು ಗುಣಮುಖರಾಗಿದ್ದಾರೆ. ಸದ್ಯ ಕೊರೊನಾದ್ದಿಂದ ಅವರು ಮುಕ್ತರಾಗಿದ್ದಾರೆ, ಆದರೆ ಈಗಾಲೂ ಅವರಿಗೆ ಉಸಿರಾಟದ ಸಮಸ್ಯೆ ಇದೆ.