೧೮ ಪ್ರಾಥಮಿಕ ಆರೋಗ್ಯ ಕೇಂದ್ರ , ಪೊಲೀಸ್‌ ಠಾಣೆ ಸಿಬ್ಬಂದಿಗೆ ರೋಟರಿ ಸೆಂಟ್ರಲ್‌ನಿಂದ ಮಾಸ್ಕತಂಪುಪಾನೀಯ – ಶ್ರೀನಾಥ್

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ

ಕೋಲಾರ : – ಕೋವಿಡ್ ವಾರಿಯರ್ ಆಗಿ ಜೀವದ ಹಂಗು ತೊರೆದು ದುಡಿದವರನ್ನು ಸ್ಮರಿಸುವ ಅಗತ್ಯವಿದೆ , ಅವರ ಸೇವೆಯನ್ನು ಮರೆಯಲಾಗದು ಎಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಅಭಿಪ್ರಾಯಪಟ್ಟರು . ನಗರದಲ್ಲಿ ಪ್ರಂಟ್ ಲೈನ್‌ನಲ್ಲಿ ಕೆಲಸ ಮಾಡಿರುವ ಪತ್ರಕರ್ತರು ಸೇರಿದಂತೆ ತಾಲ್ಲೂಕಿನ ೧೮ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ , ನಗರದ ಎಲ್ಲಾ ಪೊಲೀಸ್ ಠಾಣೆಗಳ ಸಿಬ್ಬಂದಿಗೆ ತಂಪು ಪಾನೀಯಾ ಹಾಗೂ ಎನ್ -೯೫ ಮಾಸ್ಟ್ಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು . ಇಂತಹ ಒಳ್ಳೆಯ ಕಾರ್ಯವನ್ನು ಪತ್ರಕರ್ತರಿಗೆ ತಂಪುಪಾನೀಯ , ಮಾಸ್ಕ್ ನೀಡುವ ಮೂಲಕವೇ ಆರಂಭಿಸುತ್ತಿರುವುದಾಗಿ ತಿಳಿಸಿದ ಅವರು , ಕೊವಿಡ್ ಸಂದರ್ಭದಲ್ಲಿ ಅನೇಕರು ಸಾವಿನ ಭಯದಿಂದ ಮನೆಯಿಂದ ಹೊರಬರಲು ಹೆದರಿದ್ದನ್ನು ಕಂಡಿದ್ದೇವೆ ಎಂದರು . ಆದರೆ ಪತ್ರಕರ್ತರು , ವೈದ್ಯರು.ಶುಶಕಿಯರು , ಪೂಲೀಸರು ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ . ಅವರ ಸೇವೆಯನ್ನು ಮರೆಯುವಂತಿಲ್ಲ ಎಂದು ತಿಳಿಸಿ , ಈ ನಿಟ್ಟಿನಲ್ಲಿ ರೋಟರಿ ಸಂಟ್ಟಲ್ ಅವರ ಸೇವೆಗೆ ಸದಾ ಸಿದ್ಧವಿದೆ ಎಂದು ತಿಳಿಸಿದರು . ರೋಟರಿ ಸಂಟ್ಟಲ್ ಕಾರ್ಯದರ್ಶಿ ಎಸ್‌.ಸುಧಾಕರ್ , ಈಗಾಗಲೇ ಕೋವಿಡ್ ಸಂಕಷ್ಟದಲ್ಲಿ ಅನೇಕ ರೀತಿಯಲ್ಲಿ ನಾವು ಕೆಲಸ ಮಾಡಿದ್ದೇವೆ . ಆಮ್ಲಜನಕ ಸಿಗದೇ ಅನೇಕರು ಸಾವನ್ನಪ್ಪಿದ್ದನ್ನು ಮನಗಂಡು ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯಕೇಂದಗಳಿಗೂ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಕೆಲಸ ಮಾಡಿದ್ದೇವೆ ಎಂದರು .
ಶಾಲೆಗಳಲ್ಲಿ ಮಕ್ಕಳಿಗೆ ಮಾಸ್ಕ್ ವಿತರಿಸಲಾಗಿದೆ , ಪರೀಕ್ಷಾ ಸಂದರ್ಭದಲ್ಲೂ ಮಾಸ್ ಒದಗಿಸಲಾಗಿದೆ ಎಂದು ತಿಳಿಸಿ , ಕೋವಿಡ್ ಸಂದರ್ಭದಲ್ಲಿ ರೋಗಿಗಳ ಮನೆಗಳಿಗೆ ಹೋಗಿ ಔಷಧಿ ಕಿಟ್ ನೀಡಿದ ದಿಟ್ಟತನ ನಮ್ಮ ರೋಟರಿ ಅಧ್ಯಕ್ಷರು ಮಾಡಿದ್ದಾರೆ ಎಂದು ತಿಳಿಸಿದರು . ಕಾರ್ಯಕ್ರಮದಲ್ಲಿ ರೋಟರಿ ಸೆಂಟ್ರಲ್ ನಿರ್ದೇಶಕ ಸೋಮಣ್ಣ , ಜಿಲ್ಲಾ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್ , ಕೋ.ನಾ.ಮಂಜುನಾಥ್ , ಪತ್ರಕರ್ತರ ಸಂಘದ ಖಜಾಂಚಿ ಎ.ಜಿ.ಸುರೇಶ್‌ಕುಮಾರ್ ಮತ್ತಿತರರಿದ್ದರು