ಅಪೌಷ್ಠಿಕತೆಯ ಬಗ್ಗೆ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಅರಿವು ಮೂಡಿಸಿ -ಡಾ | ಆರ್. ಸೆಲ್ವಮಣಿ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ :- ಮುಂದಿನ ಪೀಳಿಗೆಯು ಆರೋಗ್ಯಕರವಾಗಿರಬೇಕಾದರೆ ಅಪೌಷ್ಟಿಕತೆಯ ಬಗ್ಗೆ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಅರಿವು ಮೂಡಿಸಿ , ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡಿ ಆರೋಗ್ಯಕರ ತಾಯಿ ಮಗುವಿನ ಸಮಾಜ ನಿರ್ಮಿಸಲು ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ || ಆರ್ . ಸೆಲ್ವಮಣಿ ಅವರು ತಿಳಿಸಿದರು . ಇಂದು ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಜಿಲ್ಲಾಡಳಿತ , ಜಿಲ್ಲಾಪಂಚಾಯತ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೋಲಾರ , ಸ್ಪಿರುಲಿನ್ ಫೌಂಡೇಶನ್ , ತುಮಕೂರು ಹಾಗೂ ಬಿ.ಹೆಚ್.ಇ.ಎಲ್ , ಬೆಂಗಳೂರು ರವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪೋಷಣ್ ಮಾಸಾಚರಣೆ ಅನ್ವಯ ಸಸಿ ನೆಡುವ ಕಾರ್ಯಕ್ರಮ , ತೀವ್ರ ಅಪೌಷ್ಟಿಕ ಮಕ್ಕಳಿಗೆ ಸ್ಪಿರುಲಿನಾ ಪೌಂಡೇಶನ್ ವತಿಯಿಂದ ಚಿಕ್ಕಿ ವಿತರಣೆ ಮತ್ತು ಬಿ.ಎಚ್.ಇ.ಎಲ್ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಮಾಸ್ ಮತ್ತು ಸ್ಯಾನಿಟೈಸರ್ ವಿತರಣಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು . ಜಿಲ್ಲೆಯಲ್ಲಿ 2000 ಮಕ್ಕಳು ಅಪೌಷ್ಟಿಕತೆ ಮತ್ತು 100 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಅವರಿಗೆ ಉತ್ತಮ ಪೌಷ್ಠಿಕ ಆಹಾರವನ್ನು ನೀಡಿ ಅಪೌಷ್ಟಿಕತೆಯಿಂದ ಹೊರತಂದು ಸಮಾಜದ ಮುಖ್ಯವಾಹಿನಿಗೆ ತರಬೇಕು . ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯರನ್ನು ಮೊದಲನೇ ಅಥವಾ ಎರಡನೇ ತ್ರೈಮಾಸಿಕದಲ್ಲಿ ಗುರುತಿಸಿ ನೋಂದಾಯಿಸಬೇಕು . ಅವರಿಗೆ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ಒದಗಿಸಲು ಅನುಕೂಲವಾಗುತ್ತದೆ . ಗರ್ಭಿಣಿಯರು ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಿದರೆ ಸೇವಿಸಿ ಆರೋಗ್ಯವಂತ ಮಗು ಜನಿಸಿದರೆ ಒಳ್ಳೆಯ ಸಮುದಾಯ ಕಟ್ಟಲು ಸಾಧ್ಯ ಪೋಷಣ ಅಭಿಯಾನದ ಮೂಲಕ ಗರ್ಭಿಣಿಯರಿಗೆ ಹಾಗೂ ಬಾಲಂತಿಯರಿಗೆ ಅಪೌಷ್ಟಿಕತೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು . ಸಂಭವನೀಯ ಕರೋನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಬಿ.ಎಚ್.ಇ.ಎಲ್ . ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿರುವ ಮಾಸ್ , ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಯಾನ್‌ಗಳನ್ನು ಸದ್ಬಳಕೆ ಮಾಡಿಕೊಂಡು ಅಂಗನವಾಡಿ ಹಂತದಲ್ಲೇ ಕರೋನು ಮೂರನೇ ಅಲೆಯನ್ನು ನಿಯಂತ್ರಿಸಲು ಸಹಕರಿಸಬೇಕು ಎಂದು ಅವರು ತಿಳಿಸಿದರು . ಸ್ಪಿರುಲಿನಾ ಫೌಂಡೇಶನ್ ಪ್ರದಾನ ಸಲಹೆಗಾರರಾದ ಡಾ || ಸಿ.ಎಸ್.ಕೇದಾರ್ ಅವರು ಮಾತನಾಡಿ ಮಕ್ಕಳಿಗೆ ಗರ್ಭದಲ್ಲಿರುವಾಗಿಂದ ಸಾವಿರ ದಿನಗಳ ಕಾಲ ಮದುಳು ಬೆಳೆಯುತ್ತದೆ . ಆ ಸಂದರ್ಭದಲ್ಲಿ ತಾಯಿ ಮತ್ತು ಮಗುವಿಗೆ ಉತ್ತಮ ಪೌಷ್ಠಿಕ ಆಹಾರ ನೀಡಬೇಕು . ಮಕ್ಕಳಿಗೆ ಹೆಚ್ಚಿನ ಪೌಷ್ಟಿಕ ಆಹಾರ ನೀಡಿದರೆ ಅಪೌಷ್ಠಿಕತೆ ನಿರ್ಮೂಲನೆಯಾಗುತ್ತದೆ . ಕಡಿಮೆ ಆಹಾರ ತಿಂದರು ಹೆಚ್ಚಿನ ಶಕ್ತಿ ನೀಡುವಂತೆ ಆಹಾರ ಸೇವಿಸಬೇಕು . ಮಕ್ಕಳಲ್ಲಿ ಅಪೌಷ್ಟಿಕತೆ ನಿರ್ಮೂಲನೆ ಮಾಡುವ ಉದ್ದೇಶದಿಂದ ಸ್ಪಿರುಲಿನಾ ಫೌಂಡೇಶನ್ ಸ್ಪಿರಿನ್ ಅನ್ನು ಮಕ್ಕಳಿಗೆ ನೀಡುತ್ತಿದೆ . ಪ್ರಪಂಚದಲ್ಲಿ 2 ನೇ ಹೆಚ್ಚು ಸ್ಪಿರಿನ್ ಉತ್ಪಾದನೆ ಭಾರತ ದೇಶದಲ್ಲಿ ಮಾಡಲಾಗುತ್ತಿದೆ . ಸ್ಪಿರಿನ್ಸ್ ಅನ್ನು ಹಳ್ಳಿಗಳಲ್ಲಿ ಸ್ವಂತವಾಗಿ ತಯಾರಿಸಬಹುದು ಅವರಿಗೆ ಫೌಂಡೇಶನ್ ವತಿಯಿಂದ ತರಬೇತಿ ಹಾಗೂ ಮಾಹಿತಿಯನ್ನು ನೀಡಲಾಗುವುದು . ರಾಷ್ಟ್ರದಲ್ಲಿ 7 ಲಕ್ಷ ಮಕ್ಕಳು ಸ್ಪಿರಿನ್ ಉತ್ಪಾದನೆಗಳನ್ನು ಸೇವಿಸುತ್ತಿದ್ದಾರೆ ಎಂದು ಅವರು ತಿಳಿಸಿದರು .
ಬಿ.ಎಚ್.ಇ.ಎಲ್.ನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾದ ಬಿ.ಜಾರ್ಜ್ ಅವರು ಮಾತನಾಡಿ ಸಿ.ಎಸ್.ಆರ್.ಅನುದಾನದಲ್ಲಿ ಬೆಂಗಳೂರು ನಗರ , ಗ್ರಾಮಾಂತರ , ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ . ಕೆಲವು ಪ್ರದೇಶಗಳಲ್ಲಿ ಅಂಗನವಾಡಿ ಕಟ್ಟಡ , ಶಾಲೆಗಳ ನಿರ್ಮಾಣ ಮಾಡಲಾಗಿದೆ . ಕೌಶಲ್ಯ ತರಬೇತಿ ಆರೋಗ್ಯ ಕ್ಯಾಂಪ್‌ಗಳನ್ನು ಆಯೋಜಿಸಲಾಗಿದೆ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುತ್ತಿರುವ ಮಾಸ್ಟ್ ಸ್ಯಾನಿಟೈಸರ್‌ ಹಾಗೂ ಥರ್ಮಲ್ ಸ್ಮಾನ್‌ಗಳಿಂದ ಕರೋನಾ ತುರ್ತು ಸಂದರ್ಭದಲ್ಲಿ ತಾಯಿ ಮಕ್ಕಳ ರಕ್ಷಣೆಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು . ಈ ಕಾರ್ಯಕ್ರಮದಲ್ಲಿ ಬಿ.ಹೆಚ್.ಇ.ಎಲ್ , ಉಪ ಪ್ರಧಾನ ವ್ಯವಸ್ಥಾಪಕರಾದ ಜೆ.ಜಾನ್ ಆಂಬೂಸ್ , ಸ್ಪಿರುಲಿನ ಫೌಂಡೇಷನ್ ಅಧ್ಯಕ್ಷರಾದ ಮಹೇಶ್ ಆರ್.ವಿ , ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿ.ಮುನಿರಾಜು , ಉಪ ವಿಭಾಗಧಿಕಾರಿಗಳಾದ ಅನಂದ್ ಮೀನಾ ಪ್ರಕಾಶ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಎಂ.ಜಿ.ಪಾಲಿ , ಜಿಲ್ಲಾ ಶಿಶು ಅಭಿವೃದ್ಧಿ ಅಧಿಕಾರಿಗಳಾದ ರಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .