ಅನಾಥಾಶ್ರಮ-ವೃದ್ಧಾಶ್ರಮ ವಾಸಿಗಳಿಗೆ ಹೊದಿಕೆಗಳ ವಿತರಣೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಶ್ರೀಗೋಕುಲ ಮಿತ್ರ ಬಳಗದಿಂದ ಶನಿವಾರ ನಗರದ ಶ್ರೀನಲ್ಲೂರಮ್ಮ ಅನಾಥಾಶ್ರಮ ಮತ್ತು ಮುಸ್ಸಂಜೆ ಬಳಗದ ಎಲ್ಲಾ ವಾಸಿಗಳಿಗೆ ಹೊದಿಕೆಯನ್ನು ವಿತರಿಸಲಾಯಿತು.
ಶ್ರೀಗೋಕುಲ ಮಿತ್ರಬಳಗದವತಿಯಿಂದ ಭಾರತ ಸೇವಾದಳ ಜಿಲ್ಲಾಧ್ಯಕ್ಷ, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಹುಟ್ಟುಹಬ್ಬದ ಅಂಗವಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಶ್ರೀನಲ್ಲೂರಮ್ಮ ಆಶ್ರಮದ ಮುಂಭಾಗ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಪತ್ರಕರ್ತರ ಸಂಘದ ಚಟುವಟಿಕೆಗಳಲ್ಲಿ ಸುದೀರ್ಘವಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಎಸ್.ಗಣೇಶ್‍ರ ಹುಟ್ಟುಹಬ್ಬವನ್ನು ಶ್ರೀಗೋಕುಲ ಮಿತ್ರಬಳಗವು ಪ್ರತಿ ವರ್ಷವೂ ಸೇವಾ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಕೋಲಾರ ರೋಟರಿ ಸೆಂಟ್ರಲ್ ಜಿಲ್ಲಾಧ್ಯಕ್ಷ ಸಿಎಂಆರ್ ಶ್ರೀನಾಥ್ ಮಾತನಾಡಿ, ಕೋಲಾರ ಪತ್ರಕರ್ತರ ಬಳಗದಲ್ಲಿ ಅಜಾತ ಶತ್ರುವಾಗಿ ಸಮಾಜಮುಖಿ ಕಾರ್ಯಗಳಿಗೆ ಮಾರ್ಗದರ್ಶಕರಾಗಿ ಜಿಲ್ಲೆಯ ಅಭಿವೃದ್ಧಿಗೆ ಗಣೇಶ್‍ರ ಸೇವೆ ಅನುಕರಣೀಯ ಎಂದರು.
ಕಾರ್ಯಕ್ರಮದಲ್ಲಿ ಶ್ರೀನಲ್ಲೂರಮ್ಮ ಅನಾಥಾಶ್ರಮದ ಎಲ್ಲಾ ಮಕ್ಕಳಿಗೂ ಹೊದಿಕೆಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಈ ಕಾರ್ಯಕ್ರಮದ ನಂತರ ಮುಸ್ಸಂಜೆ ಮನೆ ವೃದ್ಧಾಶ್ರಮ ಮತ್ತು ಅನಾಥಾಶ್ರಮದಲ್ಲಿರುವ ನಿವಾಸಿಗಳೆಲ್ಲರಿಗೂ ಹೊದಿಕೆಗಳನ್ನು ನೀಡಲಾಯಿತು.
ನಂತರ ಬೀದಿ ಬದಿಯಲ್ಲಿ ಮಲಗಿರುವ ಅನಾಥರು ಮತ್ತು ಭಿಕ್ಷುಕರಿಗೆ ಹೊದಿಕೆಗಳನ್ನು ನೀಡಲಾಯಿತು.
ಗೋಕುಲ ಮಿತ್ರ ಬಳಗದ ಸದಸ್ಯರಾದ ಲಕ್ಷ್ಮಣ್, ಕೆ.ಜಯದೇವ್, ಮಣಿ, ಗೋಕುಲ ಚಲಪತಿ, ಎಸ್.ಸುಧಾಕರ್, ಜ್ಯೂಸ್ ನಾರಾಯಣಸ್ವಾಮಿ, ಪಿಡಿಒ ನಾಗರಾಜ್, ಮುನಿವೆಂಕಟ್ ಯಾದವ್, ಪೆಮ್ಮಶೆಟ್ಟಿಹಳ್ಳಿ ಸುರೇಶ್, ಗಿರಿ, ಬುಜ್ಜಿ, ಕ್ಯಾಪ್ಟನ್ ಮಂಜು, ಪ್ರಸಾದ್‍ಬಾಬು, ಊರುಬಾಗಿಲು ಶ್ರೀನಿವಾಸ್, ಖಾದ್ರಿಪುರ ಬಾಬು, ಬಾಲಾಜಿ, ಅಮರನಾಥ ಸ್ವಾಮಿ, ಡಿಎಸ್‍ಎಸ್ ಮಂಜುಳ, ಸರ್ವೋದಯ, ಮಲ್ಲಿಕಾ ಪ್ರಕಾಶ್, ನಾನಿ, ವಿನಯ್, ಪ್ರಸಾದ್, ದಿಲೀಪ್, ಯಲ್ಲಪ್ಪ, ಕೃಷ್ಣಮೂರ್ತಿ, ಡೆಕೋರೇಷನ್ ಶಂಕರ್, ಕೆಎಂಕೆ ಗೋಪಾಲ್, ಅಮ್ಮೇರಹಳ್ಳಿ ಚಲಪತಿ, ವರದೇನಹಳ್ಳಿ ವೆಂಕಟೇಶ್, ಗಂಗಮ್ಮನಪಾಳ್ಯ ರಾಮಯ್ಯ, ಗಾಂ„ನಗರ ಸೋಮಣ್ಣ, ದಾನೇಶ್, ನಿತಿನ್ ಗೋಪಾಲ್, ಸಂಗೊಳ್ಳಿರಾಯಣ್ಣ ನೌಕರರ ಸಂಘದ ಅಧ್ಯಕ್ಷ ಮುನಿರಾಜು, ನಲ್ಲೂರಮ್ಮ ಅನಾಥಾಶ್ರಮದ ಮುಖ್ಯಸ್ಥ ಭುವನೇಶ್ವರ್ ಇತರರು ಹಾಜರಿದ್ದರು.
ಕಾರ್ಯಕ್ರಮದ ಆರಂಭದಲ್ಲಿಯೇ ಅಗಲಿದ ಹಿರಿಯರಾದ ಶ್ರೀಕೋಲಾರಮ್ಮ ಡ್ರೈವಿಂಗ್ ಶಾಲೆಯ ಮುಖ್ಯಸ್ಥ ಆರ್.ಗೋಪಾಲ್ ನಿಧನಕ್ಕೆ ಒಂದು ನಿಮಿಷ ಮೌನದಮೂಲಕ ಸಂತಾಪ ಸಲ್ಲಿಸಲಾಯಿತು.