ಶ್ರೀನಿವಾಸಪುರ ದಲಿತ ಬಡ ರೈತ ವೆಂಕಟಸ್ವಾಮಿ ಕುಟುಂಬದ ಮೇಲಿನ ಅರಣ್ಯ ಇಲಾಖೆ ಸಿಬ್ಬಂದಿ ದೌಜನ್ಯಕ್ಕೆ ಕ್ರಮ ಕೈಗೊಂಡಿಲ್ಲ : ದಲಿತ ಸಂಘರ್ಷ ಸಮಿತಿಯ ಪ್ರತಿಭಟನೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

filter: 0; fileterIntensity: 0.0; filterMask: 0; module: h; hw-remosaic: 0; touch: (-1.0, -1.0); modeInfo: ; sceneMode: SFHDR; cct_value: 0; AI_Scene: (-1, -1); aec_lux: 183.07315; hist255: 0.0; hist252~255: 0.0; hist0~15: 0.0;

ಶ್ರೀನಿವಾಸಪುರ, ಉಪ್ಪರಪಲ್ಲಿ ಗ್ರಾಮದ ದಲಿತ ಬಡ ರೈತ ವೆಂಕಟಸ್ವಾಮಿ ಇವರ ಕುಟುಂಬದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಜಮೀನಿನ ವಿವಾದದಲ್ಲಿ ದೌಜನ್ಯ ಮಾಡಿ ಗಾಯಪಡಿಸಿದ್ದು ಇದುವರಿಗೂ ಪೋಲೀಸ್ ಇಲಾಖೆ ಇವರ ಮೇಲೆ ಇಲ್ಲಿಯ ತನಕ ಕ್ರಮ ಕೈಗೊಂಡಿಲ್ಲ ಎಂದು ಅಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ತಾಲ್ಲೂಕು ಕಛೇರಿಯ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬಾಗವಹಿಸಿ ಮತನಾಡಿದ ದಲಿತ ಮುಖಂಡ ಕೊರ್ನಹಳ್ಳಿ ಟಿ. ನಾರಾಯಣಸ್ವಾಮಿ ಇದೇ ತಾಲ್ಲೂಕು ನೆಲವಂಕಿ ಹೋಬಳಿ, ಉಪ್ಪರಪಲ್ಲಿ ಗ್ರಾಮದ ದಲಿತ ಕುಟುಂಬಗಳಿಗೆ ಮಲ್ಲಂಪಲ್ಲಿ ಸರ್ವೆ ನಂಬರ್ 35 ರಲ್ಲಿ ಸರ್ಕಾರಿ ಗೋಮಾಳದಲ್ಲಿ ಮಂಜೂರಾಗಿದ್ದು, ಮಂಜೂರನಂತೆ ಸಾಗಾವಳಿ ಚೀಟಿ ನೀಡಿದ್ದು, ಇದೇ ತಿಂಗಳು 16 ರಂದು ಸುಮಾರು 5 ಗಂಟೆಗೆ ಬಡರೈತ ವೆಂಕಟಸ್ವಾಮಿ ತಮ್ಮ ಜಮೀನಿನಲ್ಲಿ ಉಳಿಮೆ ಮಾಡುತ್ತಿದ್ದಾಗ ಏಕಾ ಏಕಿ ಪಾರೀಸ್ಟರ್ ಶ್ರೀನಾಥ್, ಅನಿಲ್, ಗಾರ್ಡ ಗೋಪಾಲರೆಡ್ಡಿ ಎಂಬುವರು ಗುಂಪು Pಟ್ಟಿಕೊಂಡು ಕೆಲಸ ಮಾಡುತ್ತಿದ್ದ ಬಡರೈತನನ್ನು ಅವಾಚ್ಯ ಶಬ್ಧಗಳಿಂದ ಬೈದು ಬೂಟ್‍ಕಾಲುಗಳಿಂದ ಹೊಡೆದು ಕೈಗಳಿಂದ ದೊಣ್ಣೆಗಳನ್ನು ಇಡಿದು ನೆಲಕ್ಕೆ ಉರಳಿಸಿ ಹೊಡೆದಿದ್ದಾರೆ. ನೋಂದವರು ಸರ್ಕಾರಿ ಅಸ್ವತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದು ಇದುವರಿಗೂ ಸಂಬಂದಪಟ್ಟ ರಾಯಲ್ಪಾಡು ಪೋಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿ ಪರಿಶಿಷ್ಟ ಜಾತಿಯ ಅಡಿಯಲ್ಲಿ ಕೂಡಲೆ ಆರೋಪಿಗಳನ್ನು ಬಂದಿಸಿ ದಲಿತ ಕುಟುಂಬಳಿಗೆ ರಕ್ಷಣೆ ನೀಡಬೇಕಾದ ಪೋಲೀಸ್ ಇಲಾಖೆಯಾಗಲೀ, ತಹಶೀಲ್ದಾರ್ ಆಗಲೀ ಯಾವುದೇ ಕ್ರಮ ಕೈಗೊಂಡಿಲ್ಲ, ಕೂಡಲೆ ಅರಣ್ಯ ಅಧಿಕಾರಿಗಳ ವಿರುದ್ದ ಎಫ್.ಐ.ಆರ್ ದಾಖಲೆ ಮಾಡಿ ನೋಂದ ಕುಟುಂಬಕ್ಕೆ ನ್ಯಾಯವನ್ನು ಒದಗಿಸಬೇಕು ಇಲ್ಲದ ಪಕ್ಷದಲ್ಲಿ ಹಂತ ಹಂತವಾಗಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೆಚ್ಚರಿಕೆ ನೀಡಿದರು.
ದಲಿತ ಹಿರಿಯ ಮುಖಂಡ ರಾಮಾಂಜಮ್ಮ ಮಾತನಾಡಿ ಬಡ ರೈತ ವೆಂಕಟಸ್ವಾಮಿ ಸರ್ವೆ ನಂ. 35 ರಲ್ಲಿ ಸರ್ಕಾರಿ ಗೋಮಾಳದಲ್ಲಿ 2.20 ಗುಂಟೆ ಸುಮಾರು 10 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಲು ಕಾರ್ಯನಿರತರಾದ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳು ವೆಂಕಟಸ್ವಾಮಿ ಮಗ ವೆಂಕಟರವಣ ಮೇಲೆ ದೌರ್ಜನ್ಯ ವೆಸಗಿ ಗಾಯಪಡಿಸಿ ಅಸ್ವತ್ರೆಯಲ್ಲಿ ಸಹ ಚಿಕಿತ್ಸೆಯನ್ನು ಪಡೆಯುತ್ತಿದ್ದರೂ ಸಹ ಇದುವರಿಗೂ ಪೋಲೀಸ್ ಇಲಾಖೆಯಾಗಲೀ ಕಂದಾಯ ಇಲಾಖೆಯಾಗಲೀ ಹೋಗಿ ಅವರ ಸಮಸ್ಯೆಯನ್ನು ಆಲಿಸಿಲ್ಲ. ರಾಯಲ್ಪಾಡು ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ 1 ವಾರ ಕಳಿಯುತ್ತಾ ಬಂದರೂ ಇದುವರಿಗೂ ಪ್ರಕರಣ ದಾಖಲೆ ಮಾಡಿಲ್ಲ. ಪೋಲೀಸ್ ಇಲಾಖೆ ಅಧಿಕಾರಿಗಳ ಪರವಾಗಿ ಕೆಲಸ ಮಾಡುತ್ತಿದೆ ನೋಂದ ಕುಟುಂಬಕ್ಕೆ ನ್ಯಾಯವನ್ನು ಒದಗಿಸದೆ ಇದ್ದಲ್ಲಿ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆಂದರು.
ಇದೇ ಸಂದರ್ಭದಲ್ಲಿ ದಲಿತ ಮುಖಂಡರಾದ ರೋಜರನಹಳ್ಳಿ ವೆಂಕಟರವಣಪ್ಪ, ಉಪ್ಪರಪಲ್ಲಿ ತಿಮ್ಮಯ್ಯ, ಡಿ.ಪಿ.ಎಸ್. ಅಗ್ರಹಾರ ವೆಂಕಟೇಶಪ್ಪ, ಮಟ್ಟಕನ್ನಸಂದ್ರ ನಾರಾಯಣಸ್ವಾಮಿ, ಮಲ್ಲಗಾನಹಳ್ಳಿ ಪಾಪಣ್ಣ, ಕೂಸ್ಸಂದ್ರ ರೆಡ್ಡೆಪ್ಪ ಚಲ್ದಿಗಾನಹಳ್ಳಿ ಈರಪ್ಪ, ಉಪ್ಪರಪÀಲ್ಲಿ ಚಲಪತಿ, ಹೆಚ್. ನಾಗರಾಜಪ್ಪ, ಇನ್ನೂ ಹಲವಾರು ದಲಿತ ಮುಖಂಡರು ಉಪಸ್ಥಿತರಿದ್ದರು.