ಸ್ಕೌಟ್ಸ್ ಮತ್ತುಗೈಡ್ಸ್ ಸಂಸ್ಥೆಯ ವಿಶ್ವಕಂಠವಸ್ತ್ರ (ಸ್ಕಾರ್ಫ್‍ಡೇ) : ನಗರದ ಉದ್ಯಾನವನದಲ್ಲಿ ಸ್ವಚ್ಚತೆ ಹಾಗೂ ಗಿಡಗಳನ್ನು ನೆಡಲಾಯಿತು.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಸ್ಕೌಟ್ಸ್ ಮತ್ತುಗೈಡ್ಸ್ ಸಂಸ್ಥೆಯ ವಿಶ್ವಕಂಠವಸ್ತ್ರ (ಸ್ಕಾರ್ಫ್‍ಡೇ) ಅಂಗವಾಗಿ ನಗರದ ಪಾಲಸಂದ್ರ ಬಡಾವಣೆಯಉದ್ಯಾನವನದಲ್ಲಿ ಸ್ವಚ್ಚತೆ ಹಾಗೂ ಗಿಡಗಳನ್ನು ನೆಡಲಾಯಿತು.
1907ರಲ್ಲಿ ಲಂಡನ್‍ನ ಬ್ರೌನ್ಸಿ ದ್ವೀಪದಲ್ಲಿಸ್ಕೌಟ್ಸ್–ಗೈಡ್ಸ್ ನ ಮೊದಲ ಪ್ರಾಯೋಗಿಕ ಶಿಬಿರವು ಯಶಸ್ವಿಯಾದ ಹಿನ್ನಲ್ಲೆಯಲ್ಲಿ ,ಈ ದಿನವನ್ನು ಸ್ಕೌಟಿಂಗ್ ಸನ್‍ರೈಸ್‍ಡೇ ಹಾಗೂ ವಿಶ್ವಕಂಠವಸ್ತø(ಸ್ಕಾರ್ಫ್‍ಡೇ)ಎಂದು ಆಚರಿಸಿಕೊಂಡು ಬರಲಾಗುತ್ತಿದೆ.
ಈ ಹಿನ್ನಲೆಯಲ್ಲಿ ನಗರದಲ್ಲಿ ವಿವಿಧರೀತಿಯ ಬಹು ಉಪಯೋಗಿ (ಹಣ್ಣು-ಕಾಯಿ-ಹೂ ಬಿಡುವ ಮತ್ತು ನೆರಳು – ಗಾಳಿ ಕೊಡುವ )30ಕ್ಕೂ ಅಧಿಕ ಗಿಡಗಳನ್ನು ನೆಡಲಾಯಿತ್ತು, ಇದಕ್ಕೂ ಮೊದಲುಅಲ್ಲಿದ್ದ ಮುಳ್ಳು ಗಿಡಗಳು,ಕಸಕಡ್ಡಿ,ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಚಗೊಳಿಸಲಾಯಿತು.
7ನೇ ವಾರ್ಡ್‍ನ ಸದಸ್ಯಎಂ.ಸುರೇಶ್ ಬಾಬು(ಸೂರಿ)ಆಯೋಜಿಸಿದ್ದ ಈ ಸೇವಾ ಕಾರ್ಯಕ್ರಮದಲ್ಲಿ ನಗರಸಭೆಯಉಪಾಧ್ಯಕ್ಷ ಪ್ರವೀಣ್‍ಗೌಡಅವರುಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಪ್ರಸಾದ್ ಬಾಬು,ಜೆ.ಕೆ ಜೈರಾಮ್,ರಾಕೇಶ್,ಸ್ಥಳೀಯ ಮುಖಂಡರಾದಜಗದೀಶ್,ನಾಗದೇವರಾವ್, ಜಿಲ್ಲಾಸ್ಕೌಟ್ಸ್–ಗೈಡ್ಸ್ ನಜಿಲ್ಲಾ ಮುಖ್ಯಆಯುಕ್ತ ಕೆ.ವಿ.ಶಂಕರಪ್ಪ, ಸ್ಕೌಟ್‍ಆಯುಕ್ತ ಕೆ.ಆರ್.ಸುರೇಶ್, ಗೈಡ್‍ಆಯುಕ್ತೆ ಕೆ.ಆರ್.ಜಯಶ್ರೀ, ಜಂಟಿ ಕಾರ್ಯದರ್ಶಿ ಎನ್.ಉಮಾದೇವಿ, ಸಂಘಟನಾಆಯುಕ್ತ ವಿ.ಬಾಬು, ಸಂಘಟಕ ವಿ.ವಿಶ್ವನಾಥ, ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಜಿ.ಮುರಳಿ,ಗೈಡ್ ಕ್ಯಾಪ್ಟನ್‍ರಾದಮ್ಮ ಹಾಗೂ ಯುವ ಸಮಿತಿಯ ಸುಧಾಕರ್, ಕುಪೇಂದ್ರಗೌಡ, ಸುಮನ್, ಹರೀಶ್‍ಕುಮಾರ್ ಮತ್ತಿತರು ಭಾಗವಹಿಸಿದ್ದರು.