ಸರಕಾರದಉಚಿತ ಲಸಿಕಾ ಅಭಿಯಾನದ ಪೂರ್ಣ ಸದುಪಯೋಗವನ್ನು ಪಡೆದುಕೊಂಡಿರುವ ಭಂಡಾರ್ಕಾರ್ಸ್‍ಕಾಲೇಜಿನ ಬಗ್ಗೆ ಸಾರ್ವಜನಿಕ ವಲಯ ಪೋಷಕರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ

JANANUDI.COM NETWORK

ಕುಂದಾಪುರ: ಸರಕಾರದಉಚಿತ ಲಸಿಕಾ ಅಭಿಯಾನದ ಪೂರ್ಣ ಸದುಪಯೋಗವನ್ನು ಪಡೆದುಕೊಂಡಿರುವ ಭಂಡಾರ್ಕಾರ್ಸ್‍ಕಾಲೇಜಿನ ಬಗ್ಗೆ ಸಾರ್ವಜನಿಕ ವಲಯ ಪೋಷಕರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಕರೋನಾ-19 ಸಾಂಕ್ರಾಮಿಕರೋಗದಿಂದ ಶೈಕ್ಷಣಿಕ ವಲಯಕ್ಕೆ ಹೊಡೆತ ಬಿದ್ದಿದೆ. ಈ ತನ್ಮಧ್ಯೆ ಸರಕಾರವು ಹೊಸ ಹೆಜ್ಜೆಯನ್ನಿರಿಸಿ 18 ವರ್ಷ ಮೇಲ್ಪಟ್ಟಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದೆ. ಇದಕ್ಕೆಅನುಸಾರವಾಗಿಉಡುಪಿ ಜಿಲ್ಲಾಆಸ್ಪತ್ರೆ, ಕುಂದಾಪುರತಾಲೂಕಾಆಸ್ಪತ್ರೆ, ಭಾರತೀಯರೆಡ್‍ಕ್ರಾಸ್ ಸಂಸ್ಥೆಯಕುಂದಾಪುರಘಟಕ ಮತ್ತು ಭಂಡಾರ್ಕಾರ್ಸ್‍ಕಾಲೇಜಿನ ಸಹಯೋಗದಲ್ಲಿದಿನಾಂಕ 28, 29 ಜೂನ್ ಮತ್ತು 1ಜುಲೈ 2021 ರಂದು ಮೂರು ದಿನಗಳ ಕಾಲ “ಉಚಿತ ಲಸಿಕಾ ಅಭಿಯಾನ” ವನ್ನುಕಾಲೇಜಿನಲ್ಲಿಆಯೋಜಿಸಲಾಗಿತ್ತು. ಸರಕಾರದ ಈ ಅಭಿಯಾನದ ಸದುಪಯೋಗವನ್ನುಕಾಲೇಜಿನಹೆಚ್ಚಿನ ವಿದ್ಯಾರ್ಥಿಗಳಿಗೆ ತೆಗೆದುಕೊಂಡರು.
ಸರಕಾರದ ಈ ಅಭಿಯಾನ ನಿಜಕ್ಕೂ ಸಾರ್ವಜನಿಕ ವಲಯದಲ್ಲಿತುಂಬಾಮೆಚ್ಚುಗೆಗೆ ಪಾತ್ರವಾಗಿದೆ. ಮುಖ್ಯವಾಗಿ ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಒಂದುರೀತಿಯ ಸಮಾಧಾನ ಮತ್ತುಖುಷಿಯನ್ನುತಂದಿದೆ. ಪಾಲಕರೆ ಹೇಳುವಂತೆ ಇದೊಂದುಗ್ರಾಮಾಂತರದ ವಿದ್ಯಾರ್ಥಿಗಳಿಗೆ ವರದಾನ. ದೂರದ ಹಳ್ಳಿಗಳಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಲಸಿಕೆ ತೆಗೆದುಕೊಳ್ಳುವುದು ಸ್ವಲ್ಪ ಕಷ್ಟವೇ ಎನಿಸುವ ಸಂದರ್ಭದಲ್ಲಿಕಾಲೇಜಿನಲ್ಲಿಆಯೋಜಿರುವ ಈ ಅಭಿಯಾನತುಬಾಉಪಯುಕ್ತ ಮತ್ತು ಶ್ಲಾಘನೀಯ.
ಪಾಲಕರಅಭಿಪ್ರಾಯ:
ಶಂಕರ, ಪಾಲಕರು, ಶಂಕರನಾರಾಯಣ“ಕಾಲೇಜಿನಿಂದ ಈ ಒಂದು ಅವಕಾಶ ಕೊಟ್ಟಿರುವುದುತುಮಬಾ ಒಳ್ಳೆಯದಾಯಿತು. ಇಲ್ಲದೇಇದ್ದರೆ ಬೇರೆಕಡೆಯಲ್ಲಿಕಷ್ಟಸಾಧ್ಯವಾಗಿತ್ತು.ಅಲ್ಲದೇಅಲೆಯುವಂತಹ ಪ್ರಸಂಗವುಎದುರಿಸಬೇಕಾಗಿತ್ತು. ಇಲ್ಲಿನ ವಿದ್ಯಾರ್ಥಿಗಳಿಗೆ ನೀಡಿರುವುದು ಹೆಮ್ಮೆಯ ವಿಷಯಇಲ್ಲದಿದ್ದಲ್ಲಿ ಬೇರೆಕಡೆಯಲ್ಲಿಯಾವಾಗ ಹೇಗೆ ಎನ್ನುವಂತಹಆತಂಕಇರುತ್ತಿತ್ತು. ಇಲ್ಲಿಯೇ ಮಾಡಿರುವ ಈ ಕಾರ್ಯಕ್ರಮ ಒಳ್ಳೆಯ ಮತ್ತು ಮಾದರಿಕಾರ್ಯಕ್ರಮ.”
ಬಾಬಣ್ಣ ಹೆಗ್ಡೆ ಪಾಲಕರು“ಸರಕಾರದ ಈ ಕಾರ್ಯಕ್ರಮಕಾಲೇಜುಆರಂಭವಾಗುವುದಕ್ಕೆ ಮೊದಲು ನೀಡಿರುವುದು ಶ್ಲಾಘನೀಯ. ದೂರದಊರುಗಳಿಂದ ಬರುವವರಿಗೆ ಸಾರಿಗೆಅಭಾವವಿರುವಕಾರಣ ಬೇಗ ಆರಂಭಿಸಬೇಕಿತ್ತು. ಅನ್ನುವುದು ನನ್ನಅಭಿಪ್ರಾಯ”

ವಿದ್ಯಾರ್ಥಿಗಳ ಅಭಿಪ್ರಾಯ
ಯಜುಶಾ, ಪ್ರಥಮ ಬಿ.ಎ (ಇಜೆಪಿ)“ ನಮ್ಮಕಾಲೇಜಿನಲ್ಲಿ ನಡೆದಿರುವ ಲಸಿಕಾ ಅಭಿಯಾನದಕುರಿತುಖುಷಿಯಾಗಿದೆ. ಎಲ್ಲವೂ ಸಹ ಶಿಸ್ತುಬದ್ಧ ಮತ್ತುಅಚ್ಚುಕಟ್ಟಾಗಿ ನಡೆಯಿತು. ಅದೆಷ್ಟೋಜನರಿಗೆ ವ್ಯಾಕ್ಸಿನೇಷನ್ ಕಷ್ಟ ಆಗಿತ್ತು. ಹಾಗಿರುವಾಗ ನಮ್ಮಕಾಲೇಜಿನಲ್ಲಿ ನಡೆದಿರುವ ಈ ಕಾರ್ಯಕ್ರಮತುಂಬಾ ಶ್ಲಾಘನೀಯ.ಈ ಲಸಿಕಾ ಅಭಿಯಾನವನ್ನುಕಾಲೇಜಿನಲ್ಲಿ ನಡೆಸಿಕೊಟ್ಟ ಸರ್ವರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನನ್ನಕಾಲೇಜಿನ ಬಗ್ಗೆ ನನಗೆ ತುಂಬಾ ಹೆಮ್ಮೆ ಅನಿಸುತ್ತದೆ.
ಅರುಂಧತಿ, ತೃತೀಯ ಬಿ.ಎಸ್.ಸಿ (ಎಂಸಿಝಡ್)“ಕಾಲೇಜನ್ನುಆರಂಭಿಸಲು ವ್ಯಾಕ್ಸಿನ್ ಮೊದಲ ಹೆಜ್ಜೆ. ಇದರಿಂದ ವಿದ್ಯಾರ್ಥಿಗಳಿಗೆ ದೈರ್ಯದಿಂದಕಾಲೇಜಿಗೆ ತೆರಳಲು ಸಾಧ್ಯ. ವ್ಯಾಕ್ಸಿನ್‍ಕಾಲೇಜಿನಲ್ಲಿದೊರೆತಿದ್ದರಿಂದ ಬೇರೆ ಆಸ್ಪತ್ರೆಗಳಿಗೆ ವ್ಯಾಕ್ಸಿನ್‍ಗಾಗಿಅಲೆದಾಟತಪ್ಪಿತು. ಅಗತ್ಯವಿದ್ದಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ವ್ಯಾಕ್ಸಿನ್‍ದೊರಕುವಂತೆ ಸೂಕ್ತ ವ್ಯವಸ್ಥೆ ಮಾಡಿದಕಾಲೇಜಿನ ಆಡಳಿತ ಮಂಡಳಿಯವರಿಗೆ ಹಾಗೂ ಜಿಲ್ಲಾ ಮತ್ತುತಾಲೂಕಾಆಸ್ಪತ್ರೆಕುಂದಾಪುರಇವರಿಗೆ ಧನ್ಯವಾದಗಳು.
ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿಯವರಅಭಿಪ್ರಾಯ“ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಸರಕಾರದಅಡಿಯಲ್ಲಿ ಲಸಿಕಾ ಅಭಿಯಾನವನ್ನು ಸಫಲಗೊಳಿಸುವಲ್ಲಿ ಸಹಕರಿಸಿದ ಜಿಲ್ಲಾ ಮತ್ತುತಾಲೂಕಾ ವೈದ್ಯಕೀಯ ಸಿಬ್ಬಂದಿ, ಶಶ್ರೂಷಕಿಯರು, ಆಶಾ ಕಾರ್ಯಕರ್ತೆಯರು ಲಸಿಕಾ ಅಭಿಯಾನದಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ.ದಿನಕರ ಶೆಟ್ಟಿಅವರಿಗೆ ಕೃತಜ್ಞತೆಗಳನ್ನು ಹೇಳುತ್ತೇನೆ.
ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ.ಎಮ್.ದಿನಕರ ಶೆಟ್ಟಿಅಭಿಪ್ರಾಯ“ಕೋವಿಡ್-19 ನಿಯಮದಕಟ್ಟುನಿಟ್ಟಿನ ಪಾಲನೆಯೊಂದಿಗೆ ನಡೆದಿರುವ ಈ ಕಾರ್ಯಕ್ರಮದ ಯಶಸ್ಸಿಗೆ ಕಾಲೇಜಿನ ಆಡಳಿತ ಮಂಡಳಿ, ಸಂಪೂರ್ಣ ಸಹಕಾರವೇಕಾರಣವಾಗಿದೆ. ಸಿಬ್ಬಂದಿವರ್ಗಕೋವಿಡ್‍ಕಾರ್ಯದಲ್ಲಿ ತೊಡಗಿಸಿಕೊಂಡು ಸಹಕರಿಸಿದ್ದಾರೆ. ಯಾವುದೇ ಸರಕಾರದ ಕಾರ್ಯಕ್ರಮಗಳು ಸಂಪೂರ್ಣವಾಗಿಯಶಸ್ಸನ್ನುಕಾಣಬೇಕಾದರೆಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಫಲಾನುಭವಿಗಳು ನಿಷ್ಠೆ ಬಹಳ ಮುಖ್ಯ.ಅವರು ನಿಷ್ಠೆಯಿಂದ ಮುತುವರ್ಜಿ ವಹಿಸಿ ಕಟ್ಟುನಿಟ್ಟಿನ ಕೋವಿಡ್-19 ನಿಯಮಪಾಲನೆಯೊಂದಿಗೆ ಈ ಅಭಿಯಾನದ ಯಶಸ್ಸಿಗೆ ಕಾರಣರಾಗಿದ್ದಾರೆ. ಲಸಿಕಾ ಕೇಂದ್ರಕ್ಕೆ ನಡೆದು ಬರಲುಅಸಾಧ್ಯವಾದಾಗಅಂತಹ ವಿದ್ಯಾರ್ಥಿಗೆಗಾಲಿಕುರ್ಚಿಯನ್ನು ಒದಗಿಸಿದ್ದಾರೆ. ಈ ಅಭಿಯಾನವು ಸಂಪೂರ್ಣ ಯಶಸ್ವಿಯಾಗಿದೆ ಎಂದು ಈ ಪ್ರತಿಷ್ಠಿತ ವಿದ್ಯಾದೇಗುಲದ ಹಳೆ ವಿದ್ಯಾರ್ಥಿ ಮತ್ತು ಮಾನ್ಯಜಿಲ್ಲಾಧಿಕಾರಿಯವರಆದೇಶದ ಮೇರೆಗೆ ಲಸಿಕಾ ನೋಡಲ್‍ಅಧಿಕಾರಿಯಾಗಿ ಹೇಳಲು ಹೆಮ್ಮೆ ಎನಿಸುತ್ತದೆ.
ಒಟ್ಟು ಮೂರು ದಿನಗಳ ಕಾಲ ನಡೆದಈ ಅಭಿಯಾದಲ್ಲಿ ಮೊದಲನೇ ದಿನ 460ಎರಡನೇ ದಿನ 1051 ಮತ್ತು ಮೂರನೇ ದಿನ 451 ಮಂದಿ ಮೊದಲನೇ ಮತ್ತು ಕೆಲವರುಎರಡನೇಡೋಸ್‍ನ್ನುತೆಗೆದುಕೊಂಡಿದ್ದಾರೆ.

ಕಾಲೇಜಿನ ಲಸಿಕಾ ಅಭಿಯಾನದ ಸಂಯೋಜಕರಾದ ಪ್ರೊ.ಸತ್ಯನಾರಾಯಣಅಭಿಪ್ರಾಯ “ ಈ ಕಾರ್ಯಕ್ರಮದ ಯಶಸ್ಸಿಗೆ ಕಾಲೇಜಿನ ಹೆಚ್ಚಿನ ಸಂಖ್ಯೆಯ ಬೋಧಕರು ಮತ್ತು ಭೋದಕೇತರ ಸಿಬ್ಬಂದಿ ಸಹಕಾರವೇಕಾರಣ. ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮೊದಲನೇ ಡೋಸ್‍ನ್ನು ಪಡೆದುಕೊಂಡಿದ್ದಾರೆ.
ಕಾರ್ಯಕ್ರಮವನ್ನುಕುಂದಾಪುರತಾಲೂಕಾಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ರಾಬರ್ಟರೆಬೆಲ್ಲೋ ಉದ್ಘಾಟಿಸಿದರು. ವ್ಯಾಕ್ಸಿನತೆಗೆದುಕೊಂಡಾಗಕೋವಿಡ್ ಸಾಂಕ್ರಾಮಿಕರೋಗ ಬಂದರೂ ಸಹ ಅದರತೀವ್ರತೆಯನ್ನುಕಡಿಮೆ ಮಾಡುತ್ತದೆ. ಇದುತುಂಬಾ ಸುರಕ್ಷಿತ ವ್ಯಾಕ್ಸಿನ್‍ಆಗಿರುವುದರಿಂದ ನೀವು ಹೆದರುವಅಗತ್ಯವಿಲ್ಲ. ಅಲ್ಲದೇ ಈಗಲೂ ನಾವು ಜಾಗ್ರತೆಯಿಂದಇರಬೇಕು. ಮಾಸ್ಕಧರಿಸುವುದುಅಂತರಕಾಪಾಡುವುದು ಆಗಾಗ ಕೈ ತೊಳೆಯುವುದನ್ನು ಸರಿಯಾಗಿ ಮಾಡಬೇಕುಎಂದು ಹೇಳಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೆಜಿನ ಪ್ರಾಂಶುಪಾಲರಾದಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು
ಈ ಸಂದರ್ಭದಲ್ಲಿ ವೇದಿಕೆಯಲ್ಲಿಉಡುಪಿ ಜಿಲ್ಲಾಆಸ್ಪತ್ರೆಯಡಾ.ಪ್ರೇಮಾನಂದ, ಉಡುಪಿ ಜಿಲ್ಲಾ ಲಸಿಕಾ ಅಭಿಯಾನದ ನೋಡಲ್ ಅಧಿಕಾರಿಗಳಾದ ಡಾ.ದಿನಕರ ಶೆಟ್ಟಿ, ಡಾ.ಲತಾ ನಾಯಕ್, ಡಾ ರಶ್ಮಿ, ಡಾ.ಸೋನಿ, ಶ್ರೀ ಜಯಕರ ಶೆಟ್ಟಿ, ಮತ್ತುಆಲ್ಡ್ರಿನ್‍ಡಿಸೋಜಾ, ರೆಡ್‍ಕ್ರಾಸ್‍ಘಟಕ, ಕುಂದಾಪುರ ಭಂಡಾರ್ಕಾರ್ಸ್ ಪದವಿ ಪೂರ್ವಕಾಲೆಜಿನ ಪ್ರಾಂಶುಪಾಲರಾದಡಾ.ಜಿ.ಎಂ.ಗೊಂಡಕಾಲೇಜಿನಲ್ಲಿ ನಡೆದ ವ್ಯಾಕ್ಸಿನ್‍ಡ್ರೈವ್‍ಇದರ ಸಂಯೋಜಕರಾದ ಪ್ರೊ.ಸತ್ಯನರಾಯಣ ಉಪಸ್ಥಿತರಿದ್ದರು.
ಎಲ್ಲಾ ವಿದ್ಯಾರ್ಥಿಗಳು ಇದರಉಪಯೋಗವನ್ನು ಪಡೆದುಕೊಳ್ಳುವಂತೆ ಮಾಡುವಲ್ಲಿಕಾಲೇಜಿನ ಪ್ರಾಂಶುಪಾಲರು ಮತ್ತುತಂಡರೆಡ್‍ಕ್ರಾಸ್‍ಘಟಕ, ಕುಂದಾಪುರ ಸರಕಾರಿಅಸ್ಪತ್ರೆಯ ಆರೋಗ್ಯಾಧಿಕಾರಿಗಳು ಮತ್ತು ಸಿಬ್ಬಂದಿ, ಉಡುಪಿ ಜಿಲ್ಲಾಆಸ್ಪತ್ರೆಯವರ ಪ್ರಯತ್ನಕ್ಕೆ ಒಳ್ಳೆಯ ಸಾಫಲ್ಯವನ್ನು ಈ ಅಭಿಯಾನವುತಂದುಕೊಟ್ಟಿದೆ.