ಮಲೇರಿಯಾ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗ,ನಮ್ಮ ಪರಿಸರದ ಸ್ಚಚ್ಚತೆ ಕಾಪಾಡಿಕೊಂಡರೆ, ಆರೋಗ್ಯ ತಂತಾನೆ ವೃದ್ದಿಸುತ್ತದೆ : ಡಾ| ಶಂಕರ್ ಪ್ರಸಾದ್.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ರಾಯಲ್ಪಾಡು 1 : ಮಲೇರಿಯಾ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಂಡರೆ ನಮ್ಮ ಆರೋಗ್ಯ ತಂತಾನೆ ವೃದ್ದಿಸುತ್ತದೆ ಎಂದು ಡಾ|| ಶಂಕರ್ ಪ್ರಸಾದ್ ತಿಳಿಸಿದರು.
ರಾಯಲ್ಪಾಡಿನ ಗ್ರಾಮಪಂಚಾಯಿತಿ ಕಚೇರಿಯಲ್ಲಿ ಬುಧವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾ.ಪಂ. ಸಂಯುಕ್ತಾಶ್ರಯದಲ್ಲಿ ಮಲೇರಿಯಾ ಮಾಸಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಿಡಿಒ ಕೆ.ವಿ.ನರೇಂದ್ರಬಾಬು ಮಾತನಾಡಿ ಮಾನವನ ದಿನ ನಿತ್ಯ ಬಳಕೆಯ ಆಹಾರ ಪದ್ದತಿ ಹಾಗೂ ಆರೋಗ್ಯ ಕಾಳಜಿ ನಿರ್ಲಕ್ಷ್ಯತೆ ಪರಿಣಾಮ ಹಲವಾರು ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡುತ್ತಿದ್ದು, ಆದ್ದರಿಂದ ನಾಗರೀಕರು ಜಾಗೃತಿರಾಗಿ ತಮ್ಮ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದರು.
ಗ್ರಾ.ಪಂ. ಅಧ್ಯಕ್ಷರಾದ ಅರುಣವೆಂಕಟ್ ಮಾತನಾಡಿ ಆರೋಗ್ಯ ಇಲಾಖೆ ಹಾಗು ಗ್ರಾ.ಪಂ. ಸಿಬ್ಬಂದಿ ಎಲ್ಲರೂ ಒಗ್ಗೂಡಿ ಸಾಂಕ್ರಮಿಕ ರೋಗಗಳನ್ನು ತಡೆಗಟ್ಟು ಸಲುವಾಗಿ ಗ್ರಾಮಗಳಿಗೆ ಬೇಟಿ ನೀಡಿ ರೋಗಗಳ ಬಗ್ಗೆ ಅರಿವು ನೀಡಬೇಕಾಗಿದೆ ಎಂದರು.
ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಎಸ್.ವೆಂಕಟರಮಣಪ್ಪ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ವಿಶ್ವನಾಥಚಾರಿ , ಲಲಿತಮ್ಮ, ಪದ್ಮಾವತಿ,ಸುಜಾತ,ಹಾಗು ಆಶಾ ಕಾರ್ಯಕತೇಯರು,ಜಲಗಾರರು , ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ಪೋಟು 1 : ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾ.ಪಂ. ಸಂಯುಕ್ತಾಶ್ರಯದಲ್ಲಿ ಮಲೇರಿಯಾ ಮಾಸಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಅರುಣವೆಂಕಟ್,ನರೇಂದ್ರಬಾಬು,ಶಂಕರ್ ಪ್ರಸಾದ್ ಚಾಲನೆ ನೀಡಿದರು