ರೋಶನ್ ಬೆಳ್ಮಣ್ ಇವರನ್ನು ಗುರುವಾಗಿ ಸ್ವೀಕರಿಸಿ, ಮ್ಯಾನ್ ಕ್ಯೆನ್ಡ್ ಟ್ರಸ್ಟ್ ರಚಿಸಿ ಜನಸೇವೆ ಮಾಡಿ ಜನಮೆಚ್ಚುಗೆ ಪಡೆದ ರಾಜು ಆರ್.

ಮನುಷ್ಯನಿಗೆ ಛಲ, ಆತ್ಮ ವಿಶ್ವಾಸ, ಧ್ಯೇಯ, ಇಚ್ಚಾಸಕ್ತಿ ಇದ್ದರೆ ತಮ್ಮ ಗುರಿಯನ್ನು ಸಾಧಿಸಬಹುದು ಎಂಬುದಕ್ಕೆ ಈ ಲೇಖನದ ಪ್ರಧಾನರಾದ ರಾಜು ಎಂಬ ಅಲೆಮಾರೀ ಪಂಗಡದ ಯವಕನಾದ ರಾಜು ಅರ್. ಎಂಬವರ, ಸಾಧನೆ ಯಾಕೆಂದರೆ ರಾಜು ಅವರ  ಜಾತಿ  ದೊಂಬಿದಾಸ ಕುಟುಂಬದ ಮೂಲ ಕಸುಬು  ಊರು ಊರು ಊರು ತಿರುಗಿ ಸ್ಟೇಷನರಿ ವಸ್ತುಗಳಾದ ಸೂಜಿ, ಪೀನ, ಕರೆಮಾಣೆ, ಕರೆಮಾಣಿದಾರ, ಉಡುದಾರ, ಟೇಪ್, ದಬ್ಲ, ರಬ್ಬರ್, ಬಾಚ್ಚಣಿಗೆ ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡಿ ಜೀವನ ನಡೆಸುವ ಅಲೇಮಾರಿಯ ಬಡ ಕುಟುಂಬ.ಆ ಕುಟುಂಬದಿದಂದ ಬಂದತ್ತ ರಾಜು, ತನ್ನ ಸಮಾಜ ಸೇವೆಯ ಗುಣದಿಂದ, ಮ್ಯಾನ್ ಕ್ಯೆನ್ಡ್ ಟ್ರಸ್ಟ್ ನ್ನು ಹುಟ್ಟು ಹಾಕಿ, ಹಲವು  ಸಾಧನೆಯನ್ನು ಮಾಡಿ ಸಮಾಜದಲ್ಲಿ ಉನ್ನತ ಮಟ್ಟದ ಹೆಸರು ಪಡೆದುಕೊಂಡಿದ್ದಾನೆ. ಅಲ್ಲದೆ ರಾಜು ಇವತ್ತು, ಕರ್ನಾಟಕ ಅಲೆಮಾರಿ ದೊಂಬಿದಾಸ ಯುವಸೇನೆ (ರಿ) ಬೆಂಗಳೂರು.ಇದರ ರಾಜ್ಯಾಧ್ಯಕ್ಷರಾಗಿದ್ದಾರೆ. ಇವರ ಸಾಧನೆಯನ್ನು ಮೆಚ್ಚಿ ಹತ್ತು ಹಲವು ಸಂಘ ಸಂಸ್ಥೆಗಳು ಗೌರವಿಸಿದ್ದಾರೆ ಹಲವು ಪತ್ರಿಕೆ ಮತ್ತು ಮಾಧ್ಯಮದವರು ಇವರ ಪರಿಚಯವನ್ನು ಪರಿಚಯಿಸಿದ್ದಾರೆ. ನಾವು ಕೂಡ ಇವರ ಜನ ಸೇವೆಯನ್ನು ಮೆಚ್ಚಿ  ಇವರದೊಂದು ಕಿರು ಪರಿಚಯ ಮತ್ತು ಅವರು ಮಾಡಿದ ಸಮಾಜ ಸೇವೆಯ ಪರಿಚಯ ನೀಡುತಿದ್ದೇವೆ. ಬರ್ನಾಡ್ ಡಿಕೋಸ್ತಾ, ಸಂಪಾದಕರು .

       ಅನಾಧಿಕಾಲದಿಂದಲೂ ಪ್ರತಿಯೊಂದು ಧರ್ಮಗಳು ಮಾನವೀಯತೆಗೆ ವಿಶೇಷ ಸ್ಥಾನವನ್ನು ನೀಡುತ್ತಾ ಬಂದಿವೆ, ಕೆಲವರು ಅದರಲ್ಲಿ ವಿಶೇಷ  ಛಾಪು ಮೂಡಿಸುವುದರ ಮೂಲಕ ವಿಭಿನ್ನವಾಗಿ ಜನ ಸೇವೆಯಲ್ಲಿ ತೊಡಗುತ್ತಾರೆ, ಜನಗಳಿಂದ ಆಯ್ಕೆಯಾದ ಜನಪ್ರತಿನಿದಿನಗಳೇ ಜನರ ಕಷ್ಟಗಳಿಗೆ ಸ್ವಂದಿಸಲು 10 ಬಾರಿ ಯೋಚಿಸುವ ಈ ಕಾಲದಲ್ಲಿ, ಕಷ್ಟ ಅಂತ ಬರುವ ನೂರಾರು ಜೀವಗಳಿಗೆ ಆಸರೆಯಾದ ಶಿವಮೊಗ್ಗದ ಯುವಕ ರಾಜು ಆರ್ ರವರು.

    ರಾಜು ಆರ್. ನೋಡಲು ಒರಟು, ಮಾತಿನಲ್ಲಿ ಬಿರುಸು, ಮಾನವೀಯತೆಯಲ್ಲಿ ನಿಜವಾದ ರಾಜ ಎಂಬುದರಲ್ಲಿ ಎರಡು ಮಾತಿಲ್ಲ. ಈ ಲೇಖನದ ಮುಖ್ಯ ಪಾತ್ರದಾರಾಗಿದುವ ರಾಜು ಆರ್. ಹ್ಯೂಮನಿಟಿ ಸಂಸ್ಥೆಯ ಸಂಸ್ಥಾಪಕರಾದ ರೋಷನ್ ಬೆಳ್ಮಣ್  ಇವರ ಶಿಸ್ಯರಾಗಿದ್ದಾರೆ. ರೋಷನ್ ಬೆಳ್ಮಣ್  ಇವರ ಸಾಮಾಜಿಕ ಕಳಕಳಿ, ಅವರ ಕಾರ್ಯ ವೈಖರಿಗೆ ಮನ ಸೋತು ತಾನೂ ಇವರಂತೆ ಸಮಾಜಕ್ಕೆಮಾನವೀಯತೆ ದ್ರಷ್ಠಿಯಿಂದ ಸೇವೆ ನೀಡಬೇಕು,  ಮನಗಂಡು ಮ್ಯಾನ್ ಕ್ಯೆನ್ಡ್ ಟ್ರಸ್ಟ್ ನ್ನು ಹುಟ್ಟು ಹಾಕಿ, ಈ ಸಂಸ್ಥೆಯಿಂದ ಅನೇಕರಿಗೆ ಸಹಾಯ ನೀಡಿದ್ದಾರೆ, ಕೆಲವರ ಮನೆ ಬೆಳಕಾಗಿದ್ದಾರೆ. ಈ ಲೇಖನವು ಮ್ಯಾನ್ ಕ್ಯೆನ್ಡ್ ಟ್ರಸ್ಟ್ ನ್ನು ಹುಟ್ಟು ಹಾಕಿದ ರಾಜು ಅವರ ಕಥೆ. ಇವರ ಜೀವನ ಮಾನವೀಯತೆಯಿಂದ  ಸಮಾಜಕ್ಕೆ ನೆರವಾಗಲು ಆದರ್ಶಪ್ರಾಯ ಎಂಬುದರಲ್ಲಿ ಸಂದೇಹವಿಲ್ಲ.

ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೋಕಿನ ಎಸ್ ತಿಮ್ಮನಹಳ್ಳಿ ಗ್ರಾಮದ ಸಣ್ಣರಂಗಪ್ಪ ಮತ್ತು ಮಲ್ಲಮ್ಮರವರ  ಒಂಬತ್ತು ಜನ ಮಕ್ಕಳಲ್ಲಿ ರಾಜು ರವರು ಎಂಟನೆಯವರು, “ರಾಜು ರವರು ಚಿಕ್ಕ ವಯಸ್ಸಿನಲ್ಲಿ ಊರಿನಲ್ಲಿ ಅತಿ ಹೆಚ್ಚು ತರ್ಲೆ ಮಾಡುವ ಹುಡುಗರಲ್ಲಿ ಮೊದಲಿಗರು”  ಎಂದು ಅವರೆ ಹೇಳಿಕೊಳ್ಳುತ್ತಾರೆ. ಇವರು ತಮ್ಮ  ತಂದೆ ತೀರಿಹೋದ ನಂತರ 7 ನೇ ತರಗತಿ ಸ್ಕೂಲ್ ಬಿಟ್ಟು ತಾಯಿಯವರ ಜೊತೆ ಊರೂರು ತಿರುಗಿ ಸೂಜಿ, ಪೀನ, ಕರೆಮಾಣೆ, ಮಾರಾಟ ಮಾಡುತಿದ್ದರು.

        ಆಮೇಲೆ ತಾಯಿಯ ಒತ್ತಾಯಕ್ಕೆ ಮತ್ತೆ ಶಾಲೆಗೆ ಸೇರಿ 7ನೇ ತರಗತಿ ಪಾಸ್ ಮಾಡಿದರು, ನಂತರ ಎಸ್, ಎಸ್, ಎಲ್, ಸಿ ಪಾಸ್ ಮಾಡಿ ಆಮೇಲೆ ಶಿವಮೊಗ್ಗದ ಆಯನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಕಲಿಯುವ ಸಮಯದಲ್ಲಿ ಸಮಾಜಸೇವೆಯ ಬಗ್ಗೆ ಆಸಕ್ತಿ ಬೆಳೆಯಿತು ಅಂತಾ ರಾಜು ಹೇಳುತ್ತಾರೆ. ಅಂದಿನಿಂದಲೂ ರಾಜು ಎಲೆಮಾರೆ ಕಾಯಿಯಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.

     ಗುರಿ ಮತ್ತು ಗುರುಗಳು ಇಲ್ಲದಿದ್ದರೆ ಯಶಸ್ಸು ಕಷ್ಟ ಎನ್ನುತ್ತಾರೆ ರಾಜು, ಸಮಾಜ ಸೇವೆಗೆ ಮುಂದಡಿ ಇಡಲು ಇವರಿಗೆ ಗುರುವಾಗಿ ನಿಂತಿದ್ದು ಬೆಳ್ಮಣ್ ನ ಹ್ಯೂಮನಿಟಿ ಸಂಸ್ಥೆಯ ಸಂಸ್ಥಾಪಕರಾದ ರೋಷನ್ ಬೆಳ್ಮಣ್ ರವರು,ಎಂದು ಸಂತೋಷದಿಂದ ಹೇಳಿಕೊಳ್ಳುತ್ತಾರೆ. ಹಾಗೇ ಗುರಿಗಳಾಗಿ ನಿಂತಿದ್ದು,  ಸರ್ಕಾರಿ ಶಾಲೆಗಳನ್ನು ಉಳಿಸುವುದು, ವಿದ್ಯಾಭ್ಯಾಸದಿಂದ ವಂಚಿತವಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು, ವೈದ್ಯಕೀಯ ಚಿಕಿತ್ಸೆ ವಂಚಿತ ಬಡವರಿಗೆ ಸಹಕಾರ ನೀಡುವುದು 

     ಸ್ನೇಹಿತರಾದ ನಾಗರಾಜ್, ದರ್ಶನ್, ರೇಣುಕಾ ಕಹಾರ್ ಸಿಂಗ್ ರವರ ಜೊತೆಯಲ್ಲಿ 2018 ಹ್ಯೂಮಾನಿಟಿ ಟ್ರಸ್ಟ್ ನ ಆರ್ಥಿಕ ಸಹಾಯದಿಂದ ಮ್ಯಾನ್ ಕ್ಯೆನ್ಡ್ ಟ್ರಸ್ಟ್ 2019 ಚಿಕ್ಕಮಗಳೂರು ಜಿಲ್ಲೆಯ ಸಮಾನ ಮನಸ್ಕರು ಸೇರಿ ಬಣಕಲ್ ಮ್ಯಾನ್ ಕ್ಯೆನ್ಡ್ ಕ್ಲಬ್ ಸ್ಥಾಪಿಸಲು ನೆರವಾದರೂ.

      “ಶಿವಮೊಗ್ಗ  ಮೆಗ್ಗಾನ್ ಹಾಸ್ಪಿಟಲ್ ಆವರಣದಲ್ಲಿ ಪ್ಲಾಸ್ಟಿಕ್ ಪುನರ್ ಬಳಕೆ ಕಾರ್ಯಕ್ರಮ. ಹ್ಯೂಮಾನಿಟಿ ಟ್ರಸ್ಟ್ ನ ಸಹಕಾರದಿಂದ ಶಿವಮೊಗ್ಗ ಗಾಜನೂರು ಅಗ್ರಹಾರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಸ್ಮಾರ್ಟ್ ಕ್ಲಾಸ್ ಮಾಡಲು ಲ್ಯಾಪ್ ಟಾಪ್, ಭದ್ರಾವತಿಯ ದಡಮಘಟ್ಟ ಹೆಣ್ಣು ಮಕ್ಕಳ ಉರ್ದು ಶಾಲೆಗೆ ಶೌಚಾಲಯ ದುರಸ್ಥಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ನ್ಯೂ ಟೌನ್ ಉರ್ದು ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ, ಚಿಕ್ಕಬಳ್ಳಾಪುರ ಗೌರಿಬಿದನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಅತಿಥಿ ಶಿಕ್ಷಕರ ಗೌರವ ವೇತನ, ಹಾಸನ ಜಿಲ್ಲೆಯ ಅರಸೀಕೆರೆಯ ಶ್ರೀ ಕಾಲಬೈರವೇಶ್ವರ ಪ್ರೌಡಶಾಲೆಗೆ ಡೆಸ್ಕ್ ಟಾಪ್ ಮತ್ತು ಪ್ರಿಂಟರ್, ಡಿ ಕಾರೇಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಒಂದು ವರ್ಷದ ಸಂಪೂರ್ಣ ನೋಟ್ ಪುಸ್ತಕಗಳು ಮತ್ತು ಕ್ಯಾನ್ಸರ್, ಹೃದಯ ಸಂಬಂದಿ ಖಾಯಿಲೆ, ತುರ್ತು ರಕ್ತದ ಅವಶ್ಯಕತೆ, ವಿದ್ಯಾರ್ಥಿಗಳ ಜೊತೆ ಸಂವಾದ, ಕೊರೋನಾ ಲಾಕ್ ಡೌನ್ ಸಮಯದಲ್ಲಿ ಹಸಿವಿನಿಂದ ನರಳುತ್ತಿರುವ ನೂರಾರು ಕುಟುಂಬಳನ್ನು ಗುರುತಿಸಿ ದಾನಿಗಳ ನೆರವಿನಿಂದ ದಿನಸಿ ಕಿಟ್, ತಯಾರಿಸಿದ ಆಹಾರ ಕಿಟ್ ವಿತರಣೆ, ಪೊಲೀಸ್ ಇಲಾಖೆಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ, ಇಂತಹ ನೂರಾರು ಪುಣ್ಯ ಕಾರ್ಯಗಳನ್ನು ಮಾಡಲು ಹ್ಯೂಮನಿಟಿ ಟ್ರಸ್ಟ್ ನ ರೋಷನ್, ದಾನಿಗಳ ಮತ್ತು ಅಭಿಮಾನಿಗಳ ಸಹಕಾರದಿಂದ ಇಂತಹ ಹಲವಾರು ಯಶಸ್ವಿ ಕಾರ್ಯಕ್ರಮ ನಡೆಸಲು ಸಾಧ್ಯವಾಯಿತ್ತು” ಎಂದು ಹೇಳುತ್ತಾರೆ ರಾಜು ಅವರು.

     ರಾಜು ಅವರ ಜೀವನ ಸಮಾಜದಲ್ಲಿ ಇಂದು ಕೆಲವು ಯುವಕರು ಅವರ ಹತ್ತಿರ ಅಪಾರ ಪ್ರತಿಭೆ ಇದ್ದರೂ ತಮ್ಮ ಜೀವನವನ್ನು  ಮೋಜು ಮಸ್ತಿಗೆಂದೇ ಮೀಸಲಿಟ್ಟು ಕಾಲಹರಣ ಮಾಡುವ ಯುವ ಪೀಳಿಗೆಗೆ ರಾಜು ರವರ ಸೇವಾ ಗುಣ, ಸೇವಾ ಶೈಲಿ ಮಾರ್ಗದರ್ಶನವಾಗಲಿ ಏಂದು ಹಾರೈಸುತ್ತೇವೆ.

    ಬಣಕಲ್ ಮ್ಯಾನ್ ಕ್ಯೆನ್ಡ್ ಕ್ಲಬ್ ಸ್ಥಾಪಿಸಿ ಸಮಾಜಕ್ಕೆ ಒಳಿತದಾದ ಹತ್ತು ಹಲವು ರೀತಿಯಿಂದ ಸಮಾಜ ಸೇವೆ ಮಾಡಿದ, ಮಾಡುತ್ತೀರುವ ರಾಜು ಆರ್. ಮತ್ತು ಅವರ ಸ್ನೇಹಿತರಿಗೆ, ಬಳಗದವರಿಗೆ ಜನನುಡಿ.ಕಾಮ್ ಅಭಿನಂದಿಸುತ್ತದೆ  ಮತ್ತು ಇನ್ನೂ ಹೆಚ್ಚಿನೆ ಯಶಸ್ಸು ಸಾಧಿಸಲೆಂದು ಹಾರೈಸುತ್ತದೆ.

       .