ದೆಹಲಿಯ ಯೂನಿಯನ್ ಬ್ಯಾಂಕ್ ಗೋಡೆ ಕೊರೆದು 55 ಲಕ್ಷ ರೂ. ದರೋಡೆ

JANANUDI.COM NETWORK


ನವದೆಹಲಿ : ದೆಹಲಿಯ ಶಹದಾರಾ ಪ್ರದೇಶದಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ನುಗ್ಗಿದ ಕಳ್ಳರ ಗುಂಪೊಂದು ಸುಮಾರು 55 ಲಕ್ಷ ರೂ. ದೋಚಿ ಪರಾರಿಯಾಗಿದೆ. ಭಾನುವಾರ ಈ ಘಟನೆ ನಡೆದಿದೆ ಆದರೆ ಸೋಮವಾರ ಬೆಳಿಗ್ಗೆ ಕೆಲಸಕ್ಕೆ ಬಂದ ನಂತರ ಬ್ಯಾಂಕ್ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದಾಗ ತಿಳಿದುಬಂದಿದೆ. ಆರೋಪಿಗಳು ಯಾರೆಂದು ಇನ್ನೂ ಗುರುತಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳರು ಪಕ್ಕದ ನಿರ್ಮಾಣ ಹಂತದ ಕಟ್ಟಡದ ಗೋಡೆಗಳನ್ನು ಭೇದಿಸುವ ಮೂಲಕ ಬ್ಯಾಂಕ್ ಪ್ರವೇಶಿಸಿದರು. ಅವರು ಸುಮಾರು 55 ಲಕ್ಷ ರೂ.ಗಳನ್ನು ಎಗರಿಸಿದ್ದಾರೆ. ಹಣವನ್ನು ವಾಲ್ಟ್ ನ ಒಂದು ಕೋಣೆಯಲ್ಲಿ ಇಡಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತರ ಕಡೆಗಳಲ್ಲಿ ಇರಿಸಲಾದ ಎಲ್ಲಾ ಲಾಕರ್ ಗಳು, ನಗದು ಮತ್ತು ಆಭರಣಗಳು ಸುರಕ್ಷಿತವಾಗಿವೆ. ಈ ಘಟನೆ ಹಗಲಿನಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫಾರ್ಶ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳರು ಡ್ರಿಲ್ ಸೇರಿದಂತೆ ಎಲ್ಲಾ ಅಗತ್ಯ ಸಲಕರಣೆಗಳೊಂದಿಗೆ ಗೋಡೆಯನ್ನು ಛೇಧಿಸಿ ಒಳ ನುಸುಳಿದ್ದಾರೆ ಎಂದು ಅವರು ಹೇಳಿದರು. ಗೋಡೆ ಮತ್ತು ಲಾಕರ್ ಗಳನ್ನು ಮುರಿಯಲು ಮತ್ತು ಹಣವನ್ನು ಹೊರತೆಗೆಯಲು ಅವರಿಗೆ ಏಳರಿಂದ ಎಂಟು ಗಂಟೆ ತೆಗೆದುಕೊಂಡಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ, ದರೋಡೆಯ ಸುದ್ದಿ ಹರಡಿದ ನಂತರ ಅನೇಕ ಚಿಂತೆಗೀಡಾದ ಗ್ರಾಹಕರು ಬ್ಯಾಂಕಿನ ಹೊರಗೆ ಸಾಲುಗಟ್ಟಿ ನಿಂತಿದ್ದರು ಎಂದು ಎನ್ ಡಿಟಿವಿ ವರದಿ ಮಾಡಿದೆ.
ಇದಕ್ಕೂ ಮುನ್ನ, ಬಿಹಾರದ ಭಾರತೀಯ ಬ್ಯಾಂಕ್ ಎಚ್ ಡಿಎಫ್ ಸಿಯ ಹಾಜಿಪುರ್ ಶಾಖೆಯಲ್ಲಿ ನಾಲ್ಕು ನಿಮಿಷಗಳಲ್ಲಿ ಕಳ್ಳರು ಮನಿ ಹೀಸ್ಟ್ ಮಾದರಿಯಲ್ಲಿ ಕಳ್ಳರು 1,19,00,000 ರೂ.ಗಳನ್ನು ದರೋಡೆ ಮಾಡಿ ಹಣವನ್ನು ಮೂಟೆಗಳಲ್ಲಿ ತೆಗೆದುಕೊಂಡು ಹೋಗಿದ್ದರು. ಹೆಹಲಿ ಯೂನಿಯನ್ ಬ್ಯಾಂಕ್ ದರೋಡೆ ಈಗ ಇತ್ತೀಚಿನ ಎರಡನೇ ಪ್ರಕರಣ ಆಗಿದೆ.