ಮೋದಿ ಆಡಳಿತದಲ್ಲೇ ಭಾರೀ ಹಣ ಸ್ವಿಸ್ ಬ್ಯಾಂಕ್ ನಲ್ಲಿ ಹೂಡಿಕೆಯಾಗಿದೆ

JANANUDI.COM NETWORK

ನವದೆಹಲಿ,ಜೂ.20: ಮೋದಿ ಅಧಿಕಾರಕ್ಕೆ ಬಂದರೆ ಕಪ್ಪುಹಣವನ್ನು ಸ್ವಿಸ್ ಬ್ಯಾಂಕ್ ನಿಂದ ವಾಪಾಸ್ಸು ತರುತ್ತೇನೆಂದು ಹೇಳಿ ದೆಹಲಿ ಗದ್ದುಗೆ ಏರಿದ್ದರು ಇದೀಗ ಮೋದಿಯ ಆಡಳಿತದಲ್ಲೇ ಅತಿ ಹೆಚ್ಚು ಕಪ್ಪುಹಣವನ್ನು ಸ್ವಿಸ್ ಬ್ಯಾಂಕ್ ನಲ್ಲಿ ಇರಿಸಲಾಗಿದೆ ಎನ್ನುವ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.

    ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯ ವ್ಯಕ್ತಿಗಳು, ಸಂಸ್ಥೆಗಳು ಹಾಗೂ ಹಣಕಾಸು ಸಂಸ್ಥೆಗಳು ಇಟ್ಟಿರುವ ಹಣದ ಮೊತ್ತ  ಈ ಬಾರಿ 20,700 ಕೋಟಿಗೆ ಏರಿಕೆಯಾಗಿದೆ ಎಂದು ಸ್ವಿಟ್ಜರ್ಲ್ಯಾಂಡ್ ನ ಕೇಂದ್ರ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

     ಕಳೆದ 13 ವರ್ಷಗಳಲ್ಲೇ ಭಾರತೀಯರು ಗರಿಷ್ಠ ಮೊತ್ತವನ್ನು ಸ್ವಿಸ್ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದಾರೆ. 2020ರ ವಾರ್ಷಿಕ ವರದಿಯಲ್ಲಿ ಈ ಬ್ಯಾಂಕ್ ಮಾಹಿತಿ ನೀಡಿದ್ದು, ಸೆಕ್ಯೂರೀಟಿಸ್ ಮತ್ತು ಇತರ ಹೂಡಿಕೆಯಿಂದಾಗಿ ಈ ಮೊತ್ತ ಏರಿಕೆಯಾಗಿದೆ.ಇನ್ನು ಅನಿವಾಸಿ ಭಾರತೀಯರು ಬೇರೆ ದೇಶಗಳ ಸಂಸ್ಥೆಗಳ ಹೆಸರಿನಲ್ಲಿ ಇಟ್ಟ ಹಣವನ್ನು ಈ ಅಂಕಿ-ಅಂಶಗಳಲ್ಲಿ ಸೇರಿಸಿಲ್ಲ.

    2019 ರ ಅಂತ್ಯದ ವೇಳೆಗೆ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರ ಹಣದ ಪ್ರಮಾಣದಲ್ಲಿ ಕುಸಿತವಾಗಿತ್ತು. ಆದರೆ 2020 ಅಂತ್ಯಕ್ಕೆ ಈ ಪ್ರಮಾಣ 13 ವರ್ಷಗಳಲ್ಲೇ ಗರಿಷ್ಟ ಪ್ರಮಾಣಕ್ಕೆ ಏರಿಕೆಯಾಗಿದೆ.