JANANUDI.COM NETWORK
ದುಬೈ, ಜೂ.20: ಕೋವಿಡ್ ಹಿನ್ನೆಲೆಯಲ್ಲಿ ದುಬೈ ಪ್ರಯಾಣಕ್ಕೆ ವಿಧಿಸಿದ್ದ ನಿರ್ಬಂಧವನ್ನು ದುಬೈ ಎಮಿರೇಟ್ಸ್ ವಾಪಾಸ್ಸು ತೆಗೆದುಕೊಂಡಿದೆ. ಜೂನ್ 23ರಿಂದ ವಿಮಾನ ಹಾರಾಟಕ್ಕೆ ಕೆಲದೇಶಗಳಿಗೆ ಅನುಮತಿಯನ್ನು ನೀಡಿದೆ.
ಶೇಖ್ ಮನ್ಸೂರ ಬಿನ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಮ್ ನೇತ್ರತ್ವದಲ್ಲಿ ದುಬೈನ ನೈಸರ್ಗಿಕ ವಿಕೋಪ ಮತ್ತು ಬಿಕ್ಕಟ್ಟು ನಿರ್ವಹಣೆಯ ಉನ್ನತ ಮಟ್ಟದ ಸಮಿತಿ ಸಭೆ ಬಳಿಕ ಭಾರತ, ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾ ದೇಶಗಳಿಗೆ ಜೂನ್ 23ರಿಂದ ವಿಮಾನ ಹಾರಾಟ ಪ್ರಾರಂಭಗೊಳಿಸಲು ಅನುಮತಿ ನೀಡಲಾಗಿದೆ ಇದೇ ಸಮಯದಲ್ಲಿ. ಪ್ರಯಾಣಿಕರಿಗೆ ಕೆಲ ನಿರ್ಬಂಧವನ್ನು ಕೂಡ ವಿಧಿಸಲಾಗಿದೆ.
ಪ್ರಯಾಣಿಕರಿಗೆ ಕೆಲ ನಿರ್ಬಂಧಗಳು ಹೀಗಿವೆ
ಯುಎಇ ಮಾನ್ಯತೆ ಪಡೆದ ಎರಡು ಡೋಸ್ ಕೋವಿಡ್ ಲಸಿಕೆ ಪ್ರಯಾಣಿಕರು ಪಡೆದಿರಬೇಕು.
ಭಾರತದಿಂದ ದುಬೈಗೆ ಪ್ರಯಾಣಿಸುವ ಪ್ರಯಾಣಿಕರು 4 ಗಂಟೆ ಮೊದಲು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಬೇಕು.
ದುಬೈನಲ್ಲಿ ಮತ್ತೆ ಪರೀಕ್ಷೆ ಮಾಡಿಸಬೇಕು ಎಂದು ಸೂಚನೆ ನೀಡಲಾಗಿದೆ.