ವಿರಾಜಪೇಟೆ ಪೋಲೀಸರ ಹೊಡೆತಕ್ಕೆ ಮಾನಸಿಕ ವಿಶೇಷ ಚೇತನ ವ್ಯಕ್ತಿ ರಾಯ್ ಡಿಸೋಜಾ ಸಾವು; ನ್ಯಾಯಕ್ಕಾಗಿ ನಾಗರಿಕರ ಪ್ರತಿಭಟನೆ

JANANUDI.COM NETWORK

ಮಡಿಕೇರಿ, ಜೂ.13: ಲಾಕ್ ಡೌನ್ ಕಾರಣದ ನೇಪಕ್ಕಾಗಿ ವಿರಾಜಪೇಟೆ ಪೋಲೀಸರಿಂದ ಥಳಿತಕ್ಕೊಳಗಾಗಿದ್ದ ಮಾನಸಿಕ ವಿಶೇಷ ಚೇತನ ವ್ಯಕ್ತಿ ರಾಯ್ ಡಿಸೋಜಾ ಶನಿವಾರ ಮ್ರತ ಪಟ್ಟಿದ್ದಾನೆ.

    ವಿಶೇಷ ಮಾನಸಿಕ ಚೇತನ ಎಪಿಲೆಪ್ಟಿಕ್ (epileptic) ರೋಗಿಯಾಗಿದ್ದ ರಾಯ್ ಡಿಸೋಜಾ ಚಾಕುವನ್ನು ಹಿಡಿದು ಬೀದಿಗಳಲ್ಲಿ ಅಡ್ಡಾಡುತ್ತಿದ್ದನು, ಇದನ್ನು ಗಮನಿಸಿದ ನಂತರ ಪೊಲೀಸರು ಅವನ  ಮೇಲೆ ಹಲ್ಲೆ ನಡೆಸಿದ್ದರು.  ರಾಯ್ ಡಿಸೋಜಾ ಮುಖ್ಯ ರಸ್ತೆಯಲ್ಲಿದ್ದಾಗ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದಕ್ಕೆ, ಆತನನ್ನು ವಶಕ್ಕೆ ತೆಗೆದುಕೊಳ್ಳಲು ಕಾರಣವಾಗುದೆ ಎಂದು ಪೊಲೀಸರು ಹೇಳಿದ್ದಾರೆ.

   ಆದರೆ, ರಾಯ್ ಡಿಸೋಜಾನನ್ನು ಮೂರು ಗಂಟೆಗಳ ಪೊಲೀಸ್ ಕಸ್ಟಡಿಯಲ್ಲಿ ಇಟ್ಟು ಕೊಂಡು ಅವನಿಗೆ ಹಿಗ್ಗಾ ಮುಗ್ಗಾ ಥಳಿಇಸಿ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಿದ್ದರು.

      ಇದಾದ ನಂತರ ರಾಯ್ ಡಿಸೋಜಾ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಕೂಡಿ ಮಡಿಕೇರಿ ಆಸ್ಪತ್ರೆಯಲ್ಲಿ ದಾಖಲುಪಡಿಸಲಾಯಿತು. ಅಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶನಿವಾರ  ರಾಯ್ ಡಿಸೋಜಾ ಸಾವನ್ನಪ್ಪಿದ್ದಾರೆ. ವಿರಾಜಪೇಟೆ ಪೊಲೀಸರ ವಿರುದ್ಧ ಸಂತ್ರಸ್ತನ ಸಹೋದರ ರಾಬಿನ್ ಎಸ್‌ಪಿ ಕ್ಷಮಾ ಮಿಶ್ರಾ ಅವರಿಗೆ ದೂರು ನೀಡಿದ್ದಾರೆ.

   ಏತನ್ಮಧ್ಯೆ ಕಾಂಗ್ರೆಸ್ ಬೆಂಬಲಿತ ವಿರಾಜಪೇಟೆ ನಾಗರಿಕರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.ಅದಲ್ಲದೆ, ಲಿಖಿತ ದೂರನ್ನು ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ ಅವರು ವಿರಾಜ್‌ಪೇಟೆ ಡಿವೈ ಎಸ್‌ಪಿ ಜಯಕುಮಾರ್ ಅವರಿಗೆ ಹಸ್ತಾಂತರಿಸಿದರು.  

    ವಿರಾಜ್‌ಪೇಟೆ ಪಿಎಸ್‌ಐ ಜಗದೀಶ್ ಸೇರಿದಂತೆ ಏಳು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ನಿವಾಸಿಗಳು ಒತ್ತಾಯಿಸಿದರು ಮತ್ತು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗದಿದ್ದರೆ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಈ ಮಧ್ಯೆ ಪ್ರಕರಣದ ವಿಚಾರಣೆಗಾಗಿ ಐಜಿಪಿ ಮಧುಕರ್ ಕೊಡಗಿಗೆ ಆಗಮಿಸಿದ್ದಾರೆ.