ಜನರು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು :ಎಸ್.ಸುರೇಶ್ ಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಜನರು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಘಟಕದ ಯೋಜನಾಧಿಕಾರಿ ಎಸ್.ಸುರೇಶ್ ಗೌಡ ಹೇಳಿದರು.
ತಾಲ್ಲೂಕಿನ ರಾಯಲ್ಪಾಡ್ ಗ್ರಾಮದಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ಒಳಗೊಂಡ ಕಿಟ್ ವಿತರಿಸಿ ಮಾತನಾಡಿದ ಅವರು, ರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಕೋವಿಡ್ ಸಂಕಷ್ಟದ ನಡುವೆ ಕಷ್ಟದ ಜೀವನ ನಡೆಸುತ್ತಿರುವ ಬಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಲು ಮುಂದಾದ ಪರಿಣಾಮವಾಗಿ ಗ್ರಾಮದ 125 ಬಡ ಕುಟುಂಬಗಳಿಗೆ ಸೌಲಭ್ಯ ವಿತರಿಸಲಾಗಿದೆ ಎಂದು ಹೇಳಿದರು.
ಕೋವಿಡ್ ರೋಗಿಗಳಿಗೆ ಆಸ್ವತ್ರೆಗೆ ತೆರಳಲು ವಾಹನದ ವ್ಯವಸ್ಥೆ, ಆಸ್ವತ್ರೆಗಳಿಗೆ ಆಮ್ಲಜನಕ, ವೆಂಟಿಲೇಟರ್. ಮತ್ತು ಕನ್ಸನ್‍ಟ್ರೇಟರ್ ಪೂರೈಸುತ್ತಿರುವುದು ಮಧರಿ ಸೇವೆಯಾಗಿದೆ. ಪೂಜ್ಯರ ಸಮಾಜ ಸೇವಾ ಮನೋಭಾವ ಬಡವರ ಬದುಕಿಗೆ ಆಸರೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಖಂಡರಾದ ವಿಶ್ವನಾಥಶಾಸ್ತ್ರಿ, ಸಿಮೆಂಟ್ ನಾರಾಯಣಸ್ವಾಮಿ, ಒಕ್ಕೂಟದ ಅಧ್ಯಕ್ಷೆ ಪದ್ಮಜ, ರಾಯಲ್ಪಾಡ್ ವಲಯದ ಮೇಲ್ವಿಚಾರಕ ರಾಜೇಶ್ ಇದ್ದರು.