ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರಕಾರಗಳ ಆಡಳಿತದಿಂದಾಗಿ ಜನರು ನಲುಗಿ ಹೋಗಿದ್ದಾರೆ :ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ , ಜೂ .9: ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರಕಾರಗಳ ಆಡಳಿತದಿಂದಾಗಿ ಜನರು ನಲುಗಿ ಹೋಗಿದ್ದಾರೆ . ಮೋದಿ ಹೆಸರಿನ ಅನೇಕರು ಈಗಾಗಲೇ ಲೂಟಿ ಮಾಡಿ ದೇಶ ಬಿಟ್ಟಿದ್ದು , ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿಯೂ ದೇಶ ಬಿಟ್ಟು ಹೋಗಲಿದ್ದಾರೆ ಎಂದು ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ ಲೇವಡಿ ಮಾಡಿದರು . ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಬುಧವಾರ ಅಲ್ಪಸಂಖ್ಯಾತರ ಘಟಕದಿಂದ ಆಯೋಜಿಸಿದ್ದ ಫುಡ್ ಡಿಸ್ಸಿಷನ್ ಡೇ ಅಂಗವಾಗಿ ಹಮ್ಮಿಕೊಂಡಿದ್ದ ಆಹಾರ ಪೊಟ್ಟಣ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಾ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೂ ೭ ಕೆಜಿ ಅಕ್ಕಿ ನೀಡುತ್ತಿದ್ದರು . ಆದರೆ ಅದು ಇಂದು ಅದು ೨ ಕೆಜಿಗೆ ಇಳಿಕೆಯಾಗಿದೆ . ಇದರೊಟ್ಟಿಗೆ ಪೆಟ್ರೋಲ್- ಡೀಸಲ್ಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಕ್ರಮೇಣ ಗಗನಕ್ಕೇರಿದ್ದು , ನರೇಂದ್ರ ಮೋದಿ ಜನರಿಗೆ ಸಹಾಯವಾಗುವ ಯಾವ ಕೆಲಸ ಮಾಡುತ್ತಿಲ್ಲ . ಅಚ್ಛೇ ದಿನ್ ಬದಲಿಗೆ ಜನರ ಮೇಲೆ ಹೊರ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು . ಕೊರೊನಾ ಕಂಟಕದ ಬಗ್ಗೆ ರಾಹುಲ್‌ಗಾಂಧಿ ಎಚ್ಚರಿಸಿ ಹೇಳಿದಾಗ ಅವರನ್ನು ನೋಡಿ ಅನೇಕರು ನಕ್ಕರು . ಆ ಬಳಿಕ ಅನುಭವಿಸಿದ ಕಷ್ಟ ಎಲ್ಲರೂ ನೋಡಿದ್ದೇವೆ . ಲಸಿಕೆ ವಿಚಾರದಲ್ಲೂ ತಾರತಮ್ಯ ಮಾಡಿದ ಹಿನ್ನಲೆಯಲ್ಲಿ ನ್ಯಾಯಾಲಯವೂ ಕೇಂದ್ರ ಹಾಗೂ ಬಿಜೆಪಿ ಸರಕಾರಕ್ಕೆ ಛೀಮಾರಿ ಹಾಕಿದೆ . ಇನ್ನು ಪಿಎಂ ಕೇರ್ ಫಂಡ್ ಅನ್ನು ಆರಂಭಿಸಿದರು ಅದರ ಲೆಕ್ಕ ಕೇಳಿದರೆ ಕೊಡುವವರೇ ಇಲ್ಲ .. ಕಣ್ಮರೆಸುವ ತಂತ್ರಕ್ಕೆ ಮಾತ್ರ ಸಿಎಂ ಯಡಿಯೂರಪ್ಪ ಪ್ಯಾಕೇಜ್‌ಗಳನ್ನು ಘೋಷಿಸಿದ್ದಾರೆ . ಆದರೆ , ಆಟೋ ಚಾಲಕರಿಗೆ ಬ್ಯಾಡ್ಸ್ ಕೇಳುತ್ತಾರೆ , ಕಟ್ಟಡ ಕಾರ್ಮಿಕರು ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ ಹಾಕಬೇಕು ಎಂದು ಹೇಳುತ್ತಾರೆ , ಇವೆಲ್ಲವೂ ಗಿಮಿಕ್ ರಾಜಕಾರಣವಲ್ಲವೇ ಎಂದು ಪ್ರಶ್ನಿಸಿದರು , ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು , ಮುಖಂಡರು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ . ಇನ್ನಷ್ಟು ದಿನಸಿ ಕಿಟ್ ಗಳನ್ನು ನೀಡಲು ಕ್ರಮಕೈಗೊಳ್ಳುತ್ತೇವೆ . ಈಗಾಗಲೇ ಆಂಬ್ಯುಲೆನ್ಸ್ ನೀಡಿದ್ದು ಉತ್ತಮವಾಗಿ ಕೆಲಸ ಮಾಡುತ್ತಿವೆ . ಮೆಡಿಕಲ್ ಕಿಟ್ ನೀಡಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದ ಅವರು , ಜಿಲ್ಲಾ ಅಲ್ಪಸಂಖ್ಯಾತರ ಸಮಿತಿಯಿಂದ ಅನ್ನದಾನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು . ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು ಮಾತನಾಡಿ , ಬಿಜೆಪಿಯವರು ಹಣ ಮಾಡುವುದರಲ್ಲಿ ನಿರತರಾಗಿದ್ದಾರೆ ಹೊರತು ಜನರ ಪರವಾಗಿ ಕೆಲಸ ಮಾಡುತ್ತಿಲ್ಲ . ಆದರೆ ನಮ್ಮ ಕಾಂಗ್ರೆಸ್ ವತಿಯಿಂದ ಸಾಕಷ್ಟು ಕೆಲಸಗಳನ್ನು ಮಾಡಲಾಗುತ್ತಿದೆ . ಬಿಜೆಪಿಯವರು ದೇಶವನ್ನು ಮಾರಾಟಕ್ಕೆ ಇಟ್ಟಿದ್ದಾರೆ . ಜನರಿಗೆ ಅರ್ಥ ಆಗುತ್ತಿಲ್ಲ . ಮುಂದಿನ ದಿನಗಳಲ್ಲಿ ಎಲ್ಲವೂ ಅರಿವಾಗುತ್ತದೆ . ನ್ಯಾಯಾಲಗಳು ಸಹ ಛೀಮಾರಿ ಹಾಕುತ್ತಿದ್ದು , ಜನರು ಎಚ್ಚೆತ್ತು ತಕ್ಕಪಾಠ ಕಲಿಸಬೇಕು ಎಂದ ಅವರು , ದಿನಸಿ ಊಟ ನೀಡುವ ವಿಚಾರದಲ್ಲಿ ಪಕ್ಷಬೇಧ ಮರೆತು ನೀಡಬೇಕು . ಕಾಂಗ್ರೆಸ್ ಒಂದು ಜಾತಿಗೆ ಸೀಮಿತವಲ್ಲ . ಹಾಗಾಗಿ ಎಲ್ಲರಿಗೂ ಸಹಾಯ ಮಾಡುತ್ತಿದೆ ಎಂದರು . ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಪ್ಯಾರೇಜಾನ್ , ಮಾತನಾಡಿ , ಕೆಪಿಸಿಸಿ ಮೈನಾರಿಟಿ ವಿಭಾಗದಿಂದ ಜೂನ್ ೯ ರಂದು ಫುಡ್ ಡಿಸ್ಟ್ರಿಬ್ಯೂಷನ್ ಡೇ ಎಂದು ಆಚರಣೆ ಮಾಡುತ್ತಿದ್ದು , ಅದರ ಅದರ ಅಂಗವಾಗಿ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಏಕಕಾಲಕ್ಕೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು , ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಮೂಲಕ ಸುಮಾರು ೫೦೦ ಮಂದಿಗೆ ಆಗುವಷ್ಟು ಊಟದ ವ್ಯವಸ್ಥೆಯನ್ನು ಮಾಡಿದ್ದು , ಅಲ್ಪಸಂಖ್ಯಾತರ ವಿಭಾಗದಲ್ಲಿ ತಮ್ಮೊಟ್ಟಿಗೆ ಕೈ ಜೋಡಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು . ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್ , ಅಲ್ಪಸಂಖ್ಯಾತರ ಮುಖಂಡ ವಿಕಾಲ್ ಮಾತನಾಡಿದರು . ಈ ಸಂದರ್ಭದಲ್ಲಿ ಮುಖಂಡರಾದ ಅಬ್ದುಲ್ ಲತೀಫ್ , ಜನಾರ್ಧನ್ , ಜೆ.ಕೆ.ಜಯರಾಂ , ವೆಂಕಟಪತಪ , ತಬ್ರೇಜ್ , ಕೃಪೇಗೌಡ ಮತ್ತಿತರರಿದ್ದರು .